Kajol Viral Video: ಕ್ಯಾಮೆರಾ ಎದುರಲ್ಲೇ ಡ್ರೆಸ್​ ಚೇಂಜ್​ ಮಾಡಿದ್ರಾ ಕಾಜೋಲ್​? ನೆಟ್ಟಿಗರ ದಾರಿ ತಪ್ಪಿಸಿದ ಡೀಪ್​ಫೇಕ್ ವಿಡಿಯೋ

| Updated By: Digi Tech Desk

Updated on: Nov 17, 2023 | 4:53 PM

Kajol Deepfake Video: ರಶ್ಮಿಕಾ ಮಂದಣ್ಣ ಅವರ ಬಳಿಕ ನಟಿ ಕಾಜೋಲ್​ ಅವರಿಗೆ ಡೀಪ್​ಫೇಕ್​ ವಿಡಿಯೋದಿಂದ ಕಿರಿಕಿರಿ ಉಂಟಾಗಿದೆ. ಇಂತಹ ಡೀಪ್​ಫೇಕ್​ ವಿಡಿಯೋಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆ ಆಗುತ್ತಿದೆ. ಈ ರೀತಿಯ ಸೈಬರ್​ ಕ್ರೈಮ್​ ವಿರುದ್ಧ ಶೀಘ್ರವೇ ಕಠಿಣ ಕಾನೂನು ಜಾರಿ ಆಗಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

Kajol Viral Video: ಕ್ಯಾಮೆರಾ ಎದುರಲ್ಲೇ ಡ್ರೆಸ್​ ಚೇಂಜ್​ ಮಾಡಿದ್ರಾ ಕಾಜೋಲ್​? ನೆಟ್ಟಿಗರ ದಾರಿ ತಪ್ಪಿಸಿದ ಡೀಪ್​ಫೇಕ್ ವಿಡಿಯೋ
ಡೀಪ್​ಫೇಕ್​
Follow us on

ಸೆಲೆಬ್ರಿಟಿಗಳಿಗೆ ಡೀಪ್​ಫೇಕ್​ (Deepfake) ಎಂಬುದು ನಿಜಕ್ಕೂ ತಲೆ ನೋವಾಗಿದೆ. ಯಾರದ್ದೋ ವಿಡಿಯೋಗೆ ನಟಿಯರ ಮುಖವನ್ನು ಎಡಿಟ್​ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಡಲಾಗುತ್ತಿದೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರ ಡೀಪ್​ಫೇಕ್ ವಿಡಿಯೋ ವೈರಲ್​ ಆಗಿತ್ತು. ಈಗ ನಟಿ ಕಾಜೋಲ್​ (Kajol) ಅವರಿಗೆ ಈ ಸಮಸ್ಯೆ ಎದುರಾಗಿದೆ. ಕ್ಯಾಮೆರಾ ಎದುರಿನಲ್ಲಿ ಕಾಜೋಲ್​ ಡ್ರೆಸ್​ ಚೇಂಜ್​ ಮಾಡುತ್ತಿರುವ ರೀತಿಯಲ್ಲಿ ಈ ಡೀಪ್​ಫೇಕ್​ ವಿಡಿಯೋ (Kajol Deepfake Video) ಮಾಡಲಾಗಿದೆ. ಅದನ್ನು ನೋಡಿ ಅನೇಕರು ಇದು ನಿಜವಾಗಿಯೂ ಕಾಜೋಲ್​ ಎಂದು ನಂಬಿದ್ದಾರೆ. ಕೆಲವರು ನಟಿಯನ್ನು ಟೀಕಿಸಿದ್ದಾರೆ. ಆದರೆ ಫ್ಯಾಕ್ಟ್​ ಚೆಕ್ ಮಾಡಿದಾಗ ಅದು ಡೀಪ್​ಫೇಕ್​ ವಿಡಿಯೋ ಎಂಬುದು ಗೊತ್ತಾಗಿದೆ.

ಅಂದಹಾಗೆ, ಇದು ಇಂಗ್ಲಿಷ್​ ಸೋಶಿಯಲ್​ ಮೀಡಿಯಾ ಇನ್​ಫ್ಲೂಯನ್ಸರ್​ ರೋಸಿ ಬ್ರೀನ್ ಎಂಬುವವರ ಒರಿಜಿನಲ್​ ವಿಡಿಯೋ. ಕೆಲವೇ ದಿನಗಳ ಹಿಂದೆ ಟಿಕ್​ಟಾಕ್​ನಲ್ಲಿ ಅವರು ಈ ವಿಡಿಯೋ ಅಪ್​ಲೋಡ್​ ಮಾಡಿದ್ದರು. ‘ಗೆಟ್​ ರೆಡಿ ವಿತ್​ ಮೀ’ ಟ್ರೆಂಡ್​ನ ಅಂಗವಾಗಿ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದರು. ಅದನ್ನೇ ಇಟ್ಟುಕೊಂಡು ಕಿಡಿಗೇಡಿಗಳು ಡೀಪ್​ಫೇಕ್​ ವಿಡಿಯೋ ಮಾಡಿದ್ದಾರೆ. ರೋಸಿ ಬ್ರೀನ್​ ಅವರ ದೇಹಕ್ಕೆ ಕೋಜೋಲ್​ ಅವರ ಮುಖವನ್ನು ಅಂಟಿಸಲಾಗಿದೆ. ಈ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಅವರ ಫೇಕ್​ ವಿಡಿಯೋ ನೋಡಿ ವಿಜಯ್​ ದೇವರಕೊಂಡ ಗರಂ; ನಟ ಹೇಳಿದ್ದೇನು?

ಡೀಪ್​ಫೇಕ್​ ವಿಡಿಯೋಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆ ಆಗುತ್ತಿದೆ. ಇಂತಹ ಸೈಬರ್​ ಕ್ರೈಮ್​ ವಿರುದ್ಧ ಶೀಘ್ರವೇ ಕಠಿಣ ಕಾನೂನು ಜಾರಿ ಆಗಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ. ಫೇಮಸ್​ ಸೆಲೆಬ್ರಿಟಿಗಳನ್ನೇ ಟಾರ್ಗೆಟ್​ ಮಾಡಿಕೊಂಡು ಡೀಪ್​ಫೇಕ್​ ವಿಡಿಯೋ ಕ್ರಿಯೇಟ್​ ಮಾಡಲಾಗುತ್ತಿದೆ. ಈ ಬಗ್ಗೆ ಅಮಿತಾಭ್​ ಬಚ್ಚನ್​, ರಶ್ಮಿಕಾ ಮಂದಣ್ಣ, ನಾಗ ಚೈತನ್ಯ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಡೀಪ್​ಫೇಕ್​ ಹಾವಳಿ ಇನ್ನಷ್ಟು ಹೆಚ್ಚಾಗಬಹುದು.

ಕೃತಕ ಬುದ್ಧಿಮತ್ತೆಯ ಬಗ್ಗೆ ಹಲವು ಸಂಶೋಧನೆಗಳು ನಡೆಯುತ್ತಿವೆ. ಅದರ ಭಾಗವಾಗಿ ಡೀಪ್​ಫೇಕ್​ ರೀತಿಯ ತಂತ್ರಜ್ಞಾನ ಕೂಡ ಬೆಳೆಯುತ್ತಿದೆ. ಆದರೆ ಇದನ್ನ ದುರುದ್ದೇಶದ ಕೆಲಸಕ್ಕೆ ಕೆಲವು ಕಿಡಿಗೇಡಿಗಳು ಬಳಸುತ್ತಿದ್ದಾರೆ. ಸೆಲೆಬ್ರಿಟಿಗಳ ತೇಜೋವಧೆ ಮಾಡಲು ಈ ರೀತಿ ವಿಡಿಯೋಗಳನ್ನು ವೈರಲ್​ ಮಾಡಲಾಗುತ್ತಿದೆ. ಕೆಲವೇ ದಿನಗಳ ಹಿಂದೆ ಕತ್ರಿನಾ ಕೈಫ್​ ಅವರ ಎಡಿಟೆಡ್​ ಇಮೇಜ್​ ಕೂಡ ವೈರಲ್​ ಆಗಿತ್ತು. ಇಂಥ ಕೃತ್ಯಕ್ಕೆ ಸೆಲೆಬ್ರಿಟಿಗಳಿಂ​ದ ಮತ್ತು ಜನ ಸಾಮಾನ್ಯರಿಂದಲೂ ಖಂಡನೆ ವ್ಯಕ್ತವಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:37 pm, Fri, 17 November 23