ಶಾರುಖ್ ಖಾನ್ ಮನೆಯ ಪಕ್ಕದಲ್ಲೇ ಮನೆ ಖರೀದಿಸಿದ ದೀಪಿಕಾ ಪಡುಕೋಣೆ

|

Updated on: Jan 10, 2025 | 1:09 PM

Deepika Padukone: ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಹೆಣ್ಣು ಮಗುವಿನ ಜನ್ಮ ನೀಡಿ ತಾಯಿಯಾಗಿರುವ ದೀಪಿಕಾ ಪಡುಕೋಣೆ ಸಿನಿಮಾದಿಂದ ಸಣ್ಣ ಬ್ರೇಕ್ ಪಡೆದುಕೊಂಡಿದ್ದಾರೆ. ಮಗು ಜನಿಸುವ ಮುನ್ನ ಮುಂಬೈನಲ್ಲಿ ಐಶಾರಾಮಿ ಮನೆ ಖರೀದಿ ಮಾಡಿದ್ದ ಈ ಜೋಡಿ ಇದೀಗ ಶಾರುಖ್ ಖಾನ್​ ಮನೆಯ ಸಮೀಪದಲ್ಲಿಯೇ ಬಲು ಐಶಾರಾಮಿಯಾದ ಬೃಹತ್ ಫ್ಲ್ಯಾಟ್ ಒಂದನ್ನು ಖರೀದಿ ಮಾಡಿದ್ದಾರೆ.

ಶಾರುಖ್ ಖಾನ್ ಮನೆಯ ಪಕ್ಕದಲ್ಲೇ ಮನೆ ಖರೀದಿಸಿದ ದೀಪಿಕಾ ಪಡುಕೋಣೆ
Deepika Padukone Ranveer Singh
Follow us on

ಕರ್ನಾಟಕ ಮೂಲದ ನಟಿ ದೀಪಿಕಾ ಪಡುಕೋಣೆ, ಬಾಲಿವುಡ್​ನ ನಂಬರ್ 1 ನಟಿ. ಆಲಿಯಾ ಭಟ್​ಗಿಂತಲೂ ಹೆಚ್ಚು ಸಂಭಾವನೆಯನ್ನು ದೀಪಿಕಾ ಪಡುಕೋಣೆ ಪಡೆಯುತ್ತಾರೆ. ಇತ್ತೀಚೆಗಷ್ಟೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿರುವ ನಟಿ ದೀಪಿಕಾ ಪಡುಕೋಣೆ, ಪ್ರಸ್ತುತ ಚಿತ್ರರಂಗದಿಂದ ಸಣ್ಣ ಬ್ರೇಕ್ ಪಡೆದಿದ್ದಾರೆ. ಮಗುವಿನೊಟ್ಟಿಗೆ ಸಮಯ ಕಳೆಯುತ್ತಿರುವ ದೀಪಿಕಾ ಪಡುಕೋಣೆ, ಇನ್ನೂ ಒಂದು ವರ್ಷ ಯಾವುದೇ ಸಿನಿಮಾಗಳಲ್ಲಿಯೂ ನಟಿಸುವುದಿಲ್ಲ ಎನ್ನಲಾಗುತ್ತಿದೆ. ಸಿನಿಮಾಗಳಲ್ಲಿ ನಟಸುತ್ತಿಲ್ಲವಾದರೂ ಈ ಅವಧಿಯನ್ನು ಅವರು ತಮ್ಮ ಬ್ಯುಸಿನೆಸ್​ ಹಾಗೂ ಇನ್ನತರೆಗಳನ್ನು ನೋಡಿಕೊಳ್ಳಲು ಬಳಸುತ್ತಿದ್ದಾರೆ. ಇದೀಗ ಹೊಸ ರಿಯಲ್ ಎಸ್ಟೇಟ್ ಪ್ರಾಪರ್ಟಿ ಮೇಲೆ ದೀಪಿಕಾ ಹೂಡಿಕೆ ಮಾಡಿದ್ದಾರೆ.

ಭಾರತದ ಅತ್ಯುತ್ತಮ ಮನೆಗಳಲ್ಲಿ ಒಂದು ಎನಿಸಿಕೊಂಡಿರುವ ಶಾರುಖ್ ಖಾನ್​ರ ‘ಮನ್ನತ್’ ಮನೆಯ ಬಗಲಲ್ಲೇ ದೀಪಿಕಾ ಪಡುಕೋಣೆ ಮತ್ತು ಅವರ ಪತಿ ನಟಿ, ರಣ್ವೀರ್ ಸಿಂಗ್ ಹೊಸ ಮನೆಯೊಂದನ್ನು ಖರೀದಿ ಮಾಡಿದ್ದಾರೆ. ಮುಂಬೈನ ಪ್ರತಿಷ್ಠಿತ ಮತ್ತು ಅತ್ಯಂತ ದುಬಾರಿ ಏರಿಯಾ ಎನಿಸಿಕೊಂಡಿರುವ ಬಾಂಡ್ರಾನಲ್ಲಿ ದೀಪಿಕಾ ಮತ್ತು ರಣ್ವೀರ್ ಸಿಂಗ್ ಮನೆ ಖರೀದಿ ಮಾಡಿದ್ದಾರೆ. ಈ ಮನೆ ಬರೋಬ್ಬರಿ 11,266 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಈ ಮನೆಯ ತಾರಸಿಯೇ 1400 ಚದರ ಅಡಿ ವಿಶಾಲವಾಗಿ ಇದೆಯಂತೆ. ಇದೊಂದು ಅಪಾರ್ಟ್​ಮೆಂಟ್ ಹೌಸ್ ಆಗಿದ್ದು, ಈ ಮನೆಗೆ ಒಟ್ಟು ನಾಲ್ಕು ಅಂತಸ್ತುಗಳಿವೆ. 16ನೇ ಅಂತಸ್ಥಿನಿಂದ 19ನೇ ಅಂತಸ್ಥಿನ ವರೆಗಿನ ಮನೆಯನ್ನು ದೀಪಿಕಾ ಹಾಗೂ ರಣ್ವೀರ್ ಸಿಂಗ್ ಖರೀದಿ ಮಾಡಿದ್ದಾರೆ.

ಇದನ್ನೂ ಓದಿ:Deepika Pdukone: 39 ವರ್ಷದ ದೀಪಿಕಾ ಪಡುಕೋಣೆ ಮಾಡಿರೋ ಆಸ್ತಿ ಇಷ್ಟೊಂದಾ?

ಮನೆ ಖರೀದಿ ಮುಗಿದಿದ್ದು, ಮನೆಯ ಒಳಾಂಗಣ ವಿನ್ಯಾಸವನ್ನು ಈ ಜೋಡಿ ಮಾಡಿಸುತ್ತಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಬಳಸಿ ಮನೆಯ ಒಳಾಂಗಣ ವಿನ್ಯಾಸವನ್ನು ಮಾಡಿಸಲಾಗುತ್ತಿದ್ದು, ಸಾಕಷ್ಟು ಐಶಾರಾಮಿಯಾಗಿ ಮನೆಯನ್ನು ರೆಡಿ ಮಾಡಿಸುತ್ತಿದ್ದಾರೆ ಈ ದಂಪತಿ. ವಿಶೇಷವಾಗಿ ತಮ್ಮ ಮಗುವನ್ನು ಗಮನದಲ್ಲಿಟ್ಟುಕೊಂಡು ಅದಕ್ಕೂ ಅನುಕೂಲಕರವಾಗಿರುವಂತೆ ಮನೆಯನ್ನು ಡಿಸೈನ್ ಮಾಡಲಾಗುತ್ತಿದೆ. ಈ ಮನೆಗಾಗಿ 100 ಕೋಟಿ ರೂಪಾಯಿ ಹಣವನ್ನು ದೀಪಿಕಾ ಮತ್ತು ರಣ್ವೀರ್ ಖರ್ಚು ಮಾಡಿದ್ದಾರೆ.

ಅಸಲಿಗೆ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ದೀಪಿಕಾ ಹಾಗೂ ರಣ್ವೀರ್ ಸಿಂಗ್ ಅವರು ಹೊಸ ಅಪಾರ್ಟ್​ಮೆಂಟ್ ಫ್ಲೋರ್​ ಖರೀದಿ ಮಾಡಿದ್ದರು. ಆಗ ಸುಮಾರು 40 ಕೋಟಿ ರೂಪಾಯಿ ನೀಡಿ ಫ್ಲ್ಯಾಟ್ ಖರೀದಿ ಮಾಡಿದ್ದರು. ಮಗು ಆದ ಮೇಲೆ ಅದೇ ಮನೆಯಲ್ಲಿ ಈ ಜೋಡಿ ಇರಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಮತ್ತೊಂದು ಹೊಸ ಮನೆಯನ್ನು ಖರೀದಿ ಮಾಡಿದ್ದಾರೆ. ದೀಪಿಕಾ ಹಾಗೂ ರಣ್ವೀರ್ ಬೆಂಗಳೂರಿನಲ್ಲಿಯೂ ಸಹ ಕೆಲವು ಪ್ರಾಪರ್ಟಿಗಳನ್ನು, ಅಪಾರ್ಟ್​ಮೆಂಟ್ ಫ್ಲ್ಯಾಟ್​ಗಳನ್ನು ಹೊಂದಿದ್ದಾರೆ. ಮುಂಬೈ, ಹೈದರಾಬಾದ್ ಹಾಗೂ ಜೈಪುರದಲ್ಲಿಯೂ ಇವರು ರಿಯಲ್ ಎಸ್ಟೇಟ್ ಪ್ರಾಪರ್ಟಿಗಳನ್ನು ಹೊಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ