ಮಗಳು ಜನಿಸಿದ ಬೆನ್ನಲ್ಲೆ ಐಶಾರಾಮಿ ಮನೆ ಖರೀದಿಸಿದ ದೀಪಿಕಾ ಪಡುಕೋಣೆ

|

Updated on: Sep 18, 2024 | 2:51 PM

Deepika Padukone: ಇತ್ತೀಚೆಗಷ್ಟೆ ಮುದ್ದಾದ ಹೆಣ್ಣು ಮಗುವಿನ ತಾಯಿಯಾಗಿರುವ ನಟಿ ದೀಪಿಕಾ ಪಡುಕೋಣೆ ಮುಂಬೈನಲ್ಲಿ ಐಶಾರಾಮಿ ಮನೆಯೊಂದನ್ನು ಖರೀದಿ ಮಾಡಿದ್ದಾರೆ. ಈ ಮನೆಯನ್ನು ಮಗುವಿಗಾಗಿಯೇ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ಮಗಳು ಜನಿಸಿದ ಬೆನ್ನಲ್ಲೆ ಐಶಾರಾಮಿ ಮನೆ ಖರೀದಿಸಿದ ದೀಪಿಕಾ ಪಡುಕೋಣೆ
Follow us on

ಬಾಲಿವುಡ್ ಬೆಡಗಿ, ಕರ್ನಾಟಕ ಮೂಲದ ದೀಪಿಕಾ ಪಡುಕೋಣೆ ಇತ್ತೀಚೆಗಷ್ಟೆ ಮುದ್ದಾದ ಹೆಣ್ಣು ಮಗುವಿನ ತಾಯಿ ಆಗಿದ್ದಾರೆ. ಕೆಲ ದಿನಗಳ ಹಿಂದಷ್ಟೆ ದೀಪಿಕಾ ಹಾಗೂ ರಣ್ವೀರ್ ದಂಪತಿಗೆ ಹೆಣ್ಣು ಮಗು ಜನಿಸಿದೆ. ಮಗು ಜನಿಸಿದ ಬೆನ್ನಲ್ಲೆ ಐಶಾರಾಮಿ ಮನೆಯೊಂದನ್ನು ಮುಂಬೈನಲ್ಲಿ ದೀಪಿಕಾ ಪಡುಕೋಣೆ ಖರೀದಿ ಮಾಡಿದ್ದಾರೆ. ಮುಂಬೈನ ದುಬಾರಿ ಏರಿಯಾಗಳಲ್ಲಿ ಒಂದಾದ ಬಾಂದ್ರಾನಲ್ಲಿ ದೀಪಿಕಾ ಪಡುಕೋಣೆ ಮನೆ ಖರೀದಿ ಮಾಡಿದ್ದು, ಇದಕ್ಕಾಗಿ ದೊಡ್ಡ ಮೊತ್ತವನ್ನೇ ವ್ಯಯಿಸಿದ್ದಾರೆ.

ಪಶ್ಚಿಮ ಬಾಂದ್ರಾದ ಜನಪ್ರಿಯ ಬ್ಯಾಂಡ್​ಸ್ಟ್ಯಾಂಡ್ ಬಳಿಯ ಸಾಗರ್ ರೇಷಮ್ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಅಪಾರ್ಟ್​ಮೆಂಟ್​ನಲ್ಲಿ ದೀಪಿಕಾ ಹೊಸ ಫ್ಲ್ಯಾಟ್ ಖರೀದಿ ಮಾಡಿದ್ದಾರೆ. ಈ ಫ್ಲ್ಯಾಟ್ ಅನ್ನು ಮಗಳಿಗಾಗಿ ಎಂದೇ ದೀಪಿಕಾ ಪಡುಕೋಣೆ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. 1846 ಚದರ ಅಡಿಯ ಈ ಫ್ಲ್ಯಾಟ್​ ಜೊತೆಗೆ ನಿಗದಿತ ಕಾರು ಪಾರ್ಕಿಂಗ್ ಸಹ ಖರೀದಿ ಮಾಡಲಾಗಿದೆ. ಈ ಐಶಾರಾಮಿ ಮನೆಗೆ ದೀಪಿಕಾ ಪಡುಕೋಣೆ 17.78 ಕೋಟಿ ರೂಪಾಯಿ ಹಣ ನೀಡಿದ್ದಾರೆ.

ಇದನ್ನೂ ಓದಿ:ದೀಪಿಕಾ ಪಡುಕೋಣೆ ನೋಡಲು ರೋಲ್ಸ್ ರಾಯ್ಸ್​ನಲ್ಲಿ ಬಂದ ಶಾರುಖ್ ಖಾನ್

ಅಂದಹಾಗೆ ಈ ಮನೆ ದೀಪಿಕಾ ಹಾಗೂ ಅವರ ತಂದೆ ಪ್ರಕಾಶ್ ಪಡುಕೋಣೆ ಮಾಲೀಕತ್ವದ ಕೆಎ ಎಂಟರ್ಪ್ರೈಸಸ್ ಹೆಸರಿನಲ್ಲಿ ನೊಂದಾವಣಿ ಮಾಡಿಸಲಾಗಿದೆ. ಈ ಹಿಂದೆ ಇದೇ ಕಂಪೆನಿ ಮೂಲಕ ದೀಪಿಕಾ ಪಡುಕೋಣೆ ಮತ್ತು ಪ್ರಕಾಶ್ ಪಡುಕೋಣೆ ಹಲವು ರಿಯಲ್ ಎಸ್ಟೇಟ್ ಪ್ರಾಪರ್ಟಿಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಬೆಂಗಳೂರು, ಮುಂಬೈ ಹಾಗೂ ಹೈದರಾಬಾದ್​ನಲ್ಲಿಯೂ ಸಹ ಹೂಡಿಕೆಗಳನ್ನು ಮಾಡಲಾಗಿದೆ. ಈಗ ದೀಪಿಕಾ ಮನೆ ಖರೀದಿಸಿರುವ ಅದೇ ಸೊಸೈಟಿಯಲ್ಲಿ ಅವರ ಅತ್ತೆ ಅಂದರೆ ರಣ್ವೀರ್​ ಸಿಂಗ್​ರ ತಾಯಿ ಕಳೆದ ತಿಂಗಳಷ್ಟೆ 19 ಕೋಟಿ ಬೆಲೆಯ ಮನೆ ಖರೀದಿ ಮಾಡಿದ್ದರು.

ಇತ್ತೀಚೆಗೆ ಬಾಲಿವುಡ್​ನ ಮಂದಿ ರಿಯಲ್ ಎಸ್ಟೇಟ್ ಹೂಡಿಕೆಯನ್ನು ಹೆಚ್ಚು ಮಾಡಿದ್ದಾರೆ. ಅಮಿತಾಬ್ ಬಚ್ಚನ್, ಅಜಯ್ ದೇವಗನ್ ಇನ್ನೂ ಕೆಲವರು ಮುಂಬೈನ ಪ್ರಮುಖ ಏರಿಯಾಗಳಲ್ಲಿ ಮನೆ ಮತ್ತು ಆಫೀಸ್​ ಸ್ಪೇಸ್​ಗಳ ಮೇಲೆ ಸತತ ಹೂಡಿಕೆ ಮಾಡುತ್ತಿದ್ದಾರೆ. ಬಾಡಿಗೆಗೆ ಸಹ ನೀಡುತ್ತಿದ್ದಾರೆ. ಬಾಲಿವುಡ್ ಮಂದಿ ಮಾತ್ರವೇ ಅಲ್ಲದೆ ದಕ್ಷಿಣದ ನಟರು ಸಹ ಮುಂಬೈನಲ್ಲಿ ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಈ ಮೊದಲು ರಾಮ್ ಚರಣ್ ಆ ನಂತರ ಸೂರ್ಯ ಅವರುಗಳು ಮುಂಬೈನಲ್ಲಿ ಫ್ಲ್ಯಾಟ್ ಖರೀದಿ ಮಾಡಿದ್ದರು. ಇತ್ತೀಚೆಗೆ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್, ತಮ್ಮ ನಿರ್ಮಾಣ ಸಂಸ್ಥೆಯ ಹೆಸರಲ್ಲಿ ಫ್ಲ್ಯಾಟ್ ಖರೀದಿ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ