AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ಗೆ ಹಾರಿದ ಸೂರ್ಯ, ಯಶ್​ ರಾಜ್ ಸಿನಿಮಾದಲ್ಲಿ ‘ವಿಲನ್’

Kollywood star Suriya: ಟಾಲಿವುಡ್ ಸ್ಟಾರ್ ನಟ ಸೂರ್ಯ ಬಾಲಿವುಡ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಬಿಗ್​ಬಜೆಟ್​ ಸಿನಿಮಾ ಒಂದರಲ್ಲಿ ಸೂರ್ಯ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಆ ಸಿನಿಮಾದ ವಿಲನ್ನೇ ಹೀರೋ!

ಬಾಲಿವುಡ್​ಗೆ ಹಾರಿದ ಸೂರ್ಯ, ಯಶ್​ ರಾಜ್ ಸಿನಿಮಾದಲ್ಲಿ ‘ವಿಲನ್’
ಮಂಜುನಾಥ ಸಿ.
|

Updated on: Sep 17, 2024 | 3:24 PM

Share

ದಕ್ಷಿಣ ಭಾರತದ ನಟ-ನಟಿಯರು ಬಾಲಿವುಡ್​ಗೆ ಹಾರುವುದು ಮೊದಲೇನಲ್ಲ. ಆದರೆ ಈ ಸಂಖ್ಯೆ ಇತ್ತೀಚೆಗೆ ತುಸು ಹೆಚ್ಚಾಗಿದೆ. ಮೊದಲೆಲ್ಲ, ವಿಲನ್, ಪೋಷಕ ಪಾತ್ರಗಳಿಗಷ್ಟೆ ದಕ್ಷಿಣದ ನಟರನ್ನು ಬಾಲಿವುಡ್​ನವರು ಕರೆಸಿಕೊಳ್ಳುತ್ತಿದ್ದರು. ಆದರೆ ಈಗ ಅತಿಥಿ ಪಾತ್ರ, ಹೀರೋ ಪಾತ್ರಗಳಿಗಾಗಿ ಕರೆಸಿಕೊಳ್ಳುತ್ತಿದ್ದಾರೆ. ಧನುಶ್, ಯಶ್ ಇನ್ನೂ ಕೆಲವರು ಬಾಲಿವುಡ್​ ಸಿನಿಮಾಗಳ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ನಟ ಸೂರ್ಯ ಸಹ ಬಾಲಿವುಡ್​ಗೆ ಹೋಗುತ್ತಿದ್ದಾರೆ. ದೊಡ್ಡ ಸಿನಿಮಾ ಒಂದರಲ್ಲಿ ವಿಲನ್ ಆಗಿ ಸೂರ್ಯ ಕಾಣಿಸಿಕೊಳ್ಳಲಿದ್ದಾರೆ. ಆದರೆ ಆ ಸಿನಿಮಾದಲ್ಲಿ ವಿಲನ್ನೇ ಹೀರೋ!

ಬಾಲಿವುಡ್​ನಲ್ಲಿ ಕೆಲವು ಸಿನಿಮಾ ಸರಣಿಗಳು ದೊಡ್ಡ ಹಿಟ್ ಎನಿಸಿಕೊಂಡಿವೆ. ದಶಕಗಳು ಕಳೆದರೂ ಆ ಸಿನಿಮಾ ಸರಣಿಗೆ ಅಭಿಮಾನಿಗಳು ಕಡಿಮೆ ಆಗಿಲ್ಲ ಅಂಥಹಾ ಒಂದು ಸರಣಿಯಲ್ಲಿ ‘ಧೂಮ್’ ಪ್ರಮುಖವಾದುದು. 20 ವರ್ಷದ ಹಿಂದೆ ಬಿಡುಗಡೆ ಆದ ಮೊದಲ ‘ಧೂಮ್’ ಸಿನಿಮಾ ಬಾಲಿವುಡ್​ನಲ್ಲಿ ವಿಲನ್​ಗಳ ಬಗ್ಗೆ ಇದ್ದ ಪರ್ಸೆಪ್ಷನ್ ಅನ್ನೇ ಬದಲಿಸಿತು. ಏಕೆಂದರೆ ಈ ಸಿನಿಮಾನಲ್ಲಿ ವಿಲನ್ನೇ ಹೀರೋ. ಅಂದರೆ ಕಳ್ಳರೇ ಈ ಸಿನಿಮಾದ ಹೀರೋಗಳು. ಇದೀಗ ‘ಧೂಮ್ 4’ ಚಿತ್ರೀಕರಣ ಆರಂಭಕ್ಕೆ ಕ್ಷಣಗಣನೆ ಇದ್ದು, ಸಿನಿಮಾದ ಕಳ್ಳನ ಪಾತ್ರದಲ್ಲಿ ಟಾಲಿವುಡ್ ಸ್ಟಾರ್ ನಟ ಸೂರ್ಯ ಮಿಂಚಲಿದ್ದಾರೆ.

ಇದನ್ನೂ ಓದಿ:ದಶಕಗಳ ವೈಷಮ್ಯಕ್ಕೆ ಬ್ರೇಕ್: ಒಂದಾಗಲಿವೆ ಟಾಲಿವುಡ್​ನ ಎರಡು ಧ್ರುವಗಳು

ಮೊದಲ ‘ಧೂಮ್’ ಸಿನಿಮಾ 2004 ರಲ್ಲಿ ಬಿಡುಗಡೆ ಆಗಿತ್ತು. ಅದಾದ ಎರಡೇ ವರ್ಷದಲ್ಲಿ ‘ಧೂಮ್ 2’ ಸಿನಿಮಾ ಬಿಡುಗಡೆ ಆಯ್ತು. ಆ ಸಿನಿಮಾ ಸಹ ಭಾರಿ ದೊಡ್ಡ ಹಿಟ್ ಆಯ್ತು. ಆದರೆ ಅದಾದ ಹತ್ತು ವರ್ಷದ ಬಳಿಕ ‘ಧೂಮ್’ ಸರಣಿಯ ಹೊಸ ಸಿನಿಮಾ ಬರಲಿಲ್ಲ. ಕೊನೆಗೆ 2016 ರಲ್ಲಿ ‘ಧೂಮ್ 3’ ಸಿನಿಮಾ ಬಿಡುಗಡೆ ಆಯ್ತು. ವಿಲನ್ ಆಗಿ ಅಂದರೆ ನಾಯಕನಾಗಿ ಆಮಿರ್ ಖಾನ್ ನಟಿಸಿದ್ದರು. ಆ ಸಿನಿಮಾ ಫ್ಲಾಪ್ ಆಯ್ತು. ಅದಾದ ಬಳಿಕ ಈ ಎಂಟು ವರ್ಷದ ಬಳಿಕ ‘ಧೂಮ್ 4’ ಚಿತ್ರೀಕರಣ ಆರಂಭವಾಗುತ್ತಿದೆ. ಈ ಬಾರಿ ಸೂರ್ಯ ವಿಲನ್ ಆಗಿ ನಟಿಸುತ್ತಿದ್ದಾರೆ.

ಕಮಲ್ ಹಾಸನ್ ನಟಿಸಿರುವ ‘ವಿಕ್ರಂ’ ಸಿನಿಮಾನಲ್ಲಿ ಸೂರ್ಯ ವಿಲನ್ ಪಾತ್ರದಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಅವರದ್ದು ಸಣ್ಣ ಅತಿಥಿ ಪಾತ್ರವಾಗಿದ್ದರೂ ಸಹ ಅವರ ಪಾತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ವಿಲನ್ ಕಮ್ ಹೀರೋ ಆಗಿದ್ದಾರೆ ಸೂರ್ಯ. ಅಂದಹಾಗೆ ಸೂರ್ಯಗೆ ಇದು ಮೊದಲ ಹಿಂದಿ ಸಿನಿಮಾ ಏನಲ್ಲ. ಇತ್ತೀಚೆಗಷ್ಟೆ ಬಿಡುಗಡೆ ಆದ ಅಕ್ಷಯ್ ಕುಮಾರ್ ನಟನೆಯ ‘ಸರ್ಫಿರಾ’ ಹಿಂದಿ ಸಿನಿಮಾದ ಅತಿಥಿ ಪಾತ್ರದಲ್ಲಿ ಸೂರ್ಯ ನಟಿಸಿದ್ದರು. ಆ ಸಿನಿಮಾಕ್ಕೆ ಸಹ ನಿರ್ಮಾಪಕರೂ ಆಗಿದ್ದರು. ಆದರೆ ಆ ಸಿನಿಮಾ ಫ್ಲಾಪ್ ಆಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ