‘ಮೆಸೇಜ್ ಮಾಡ್ತಾರೆ, ಮನೆಗೆ ಕರೆಯುತ್ತಾರೆ’; ಬಾಲಿವುಡ್ ನಟರ ಹಣೆಬರಹ ಬಿಚ್ಚಿಟ್ಟ ಕಂಗನಾ

ಕಂಗನಾ ರಣಾವತ್ ಅವರು ಈಗ ಕೇವಲ ನಟಿ ಮಾತ್ರವಲ್ಲ, ಸಂಸದೆ ಕೂಡ ಹೌದು. ಅವರು ಸಿನಿಮಾ ಹಾಗೂ ರಾಜಕೀಯ ಬದುಕನ್ನು ಸರಿದೂಗಿಸಿಕೊಂಡು ಹೋಗುವ ಪ್ರಯತ್ನದಲ್ಲಿ ಇದ್ದಾರೆ. ಬಾಲಿವುಡ್ ಹೀರೋಗಳೇ ನಟಿಯರಿಗೆ ಕಿರುಕುಳ ನೀಡುತ್ತಾರೆ ಎಂದು ಅವರು ಹೇಳಿದ್ದಾರೆ.

‘ಮೆಸೇಜ್ ಮಾಡ್ತಾರೆ, ಮನೆಗೆ ಕರೆಯುತ್ತಾರೆ’; ಬಾಲಿವುಡ್ ನಟರ ಹಣೆಬರಹ ಬಿಚ್ಚಿಟ್ಟ ಕಂಗನಾ
ಕಂಗನಾ
Follow us
ರಾಜೇಶ್ ದುಗ್ಗುಮನೆ
|

Updated on: Sep 17, 2024 | 7:24 AM

ಬಾಲಿವುಡ್ ನಟಿ, ಸಂಸದೆ ಕಂಗನಾ ರಣಾವತ್ ಅವರು ಆಗಾಗ ಬಾಲಿವುಡ್ ಹೀರೋಗಳ ವಿರುದ್ಧ ಹರಿಹಾಯುತ್ತಾರೆ. ಅವರಿಗೆ ಆಗದೇ ಇದ್ದವರೇ ಹೆಚ್ಚು. ಈಗ ಅವರು ಬಾಲಿವುಡ್ ನಟರ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಬಾಲಿವುಡ್ ಹೀರೋಗಳೇ ನಟಿಯರಿಗೆ ಕಿರುಕುಳ ನೀಡುತ್ತಾರೆ ಎಂದು ಅವರು ಹೇಳಿದ್ದಾರೆ. ಆ ಪ್ರಕ್ರಿಯೆಯನ್ನು ಅವರು ವಿವರಿಸಿದ್ದಾರೆ.

ನ್ಯೂಸ್ 18 ಇಂಗ್ಲಿಷ್ ಜೊತೆ ಮಾತನಾಡಿರೋ ಕಂಗನಾ, ‘ಆ ಹೀರೋಗಳು ಮಹಿಳೆಯರಿಗೆ ಹೇಗೆ ಕಿರುಕುಳ ನೀಡುತ್ತಾರೆ ಗೊತ್ತಾ? ಅವರು ಊಟಕ್ಕೆ ಕರೆಯುತ್ತಾರೆ, ಮೆಸೇಜ್ ಮಾಡುತ್ತಾರೆ ನಂತರ ಮನೆಗೆ ಬರುವಂತೆ ಹೇಳುತ್ತಾರೆ’ ಎಂದಿದ್ದಾರೆ ಕಂಗನಾ ರಣಾವತ್. ಕಂಗನಾ ಅವರು ಈ ರೀತಿಯ ಅನೇಕ ಆರೋಪಗಳನ್ನು ಈ ಮೊದಲು ಕೂಡ ಮಾಡಿದ್ದರು.

‘ಕೋಲ್ಕತ್ತಾ ರೇಪ್ ಹಾಗೂ ಮರ್ಡರ್ ಕೇಸ್ ನೋಡಿ. ನನಗೆ ಬರುತ್ತಿರುವ ಅತ್ಯಾಚಾರ ಬೆದರಿಕೆಗಳನ್ನು ನೋಡಿ. ನಾವು ಮಹಿಳೆಯರಿಗೆ ಗೌರವ ಕೊಡಲ್ಲ ಅನ್ನೋದು ಗೊತ್ತು. ಸಿನಿಮಾ ರಂಗ ಬೇರೆ ರೀತಿ ಇಲ್ಲ. ಕಾಲೇಜು ಹುಡುಗರು ಯುವತಿಯರ ಮೇಲೆ ಕಮೆಂಟ್ ಮಾಡುತ್ತಾರೆ. ಸಿನಿಮಾ ರಂಗದ ಹೀರೋಗಳು ಭಿನ್ನವಾಗಿಲ್ಲ. ಅವರು ಆ ರೀತಿಯೇ ಇದ್ದಾರೆ. ಕೆಲಸದ ಸ್ಥಳದಲ್ಲಿ ನಮ್ಮನ್ನು ಹೇಗೆ ಟ್ರೀಟ್ ಮಾಡುತ್ತಾರೆ ಅನ್ನೋದು ಗೊತ್ತು’ ಎಂದಿದ್ದಾರೆ ಅವರು.

‘ಸರೋಜ್ ಖಾನ್ ಒಮ್ಮೆ ಲೈಂಗಿಕ ಕಿರಕುಳದ ಬಗ್ಗೆ ಮಾತನಾಡಿದ್ದರು. ಅತ್ಯಾಚಾರ ಮಾಡುತ್ತಾರೆ ಜೊತೆಗೆ ಊಟವನ್ನೂ ನೀಡುತ್ತಾರೆ ಎಂದಿದ್ದರು. ನಮ್ಮ ಹೆಣ್ಣು ಮಕ್ಕಳ ಸ್ಥಿತಿ ಚಿತ್ರರಂಗದಲ್ಲಿ ಈ ರೀತಿಯಲ್ಲಿದೆ’ ಎಂದಿದ್ದಾರೆ ಕಂಗನಾ. ಅವರ ಹೇಳಿಕೆಗೆ ಅನೇಕರು ಅಚ್ಚರಿ ಹೊರಹಾಕಿದ್ದಾರೆ.

ಇದನ್ನೂ ಓದಿ: ‘ಎಮರ್ಜೆನ್ಸಿ’ ಸಿನಿಮಾ ರಿಲೀಸ್​ ಒದ್ದಾಟದ ಮಧ್ಯೆ ಮುಂಬೈ ಬಂಗಲೆ ಮಾರಿದ ಕಂಗನಾ

ಸದ್ಯ ಮೀಟು ವಿಚಾರ ಚರ್ಚೆಯಲ್ಲಿ ಇದೆ. ಮಲಯಾಳಂ ಚಿತ್ರರಂಗದಲ್ಲಿ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ. ಮುಕೇಶ್, ಸಿದ್ದಿಖಿ, ಜಯಸೂರ್ಯ, ನಿರ್ದೇಶಕ ರಂಜಿತ್ ಸೇರಿ ಅನೇಕ ಚಿತ್ರರಂಗ ಕಲಾವಿದರು ಹಾಗೂ ತಂತ್ರಜ್ಞರ ವಿರುದ್ಧ ಕೇಸ್ ದಾಖಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.