ದೀಪಿಕಾ ಪಡುಕೋಣೆ ಹಳೇ ಸಂಬಂಧದ ಬಗ್ಗೆ ಕಾಲೇಜು ಫೆಸ್ಟ್ನಲ್ಲಿ ಹಾಸ್ಯ; ಇದು ನಾಚಿಕೆಗೇಡು ಎಂದ ನೆಟ್ಟಿಗರು
ದೀಪಿಕಾ ಪಡುಕೋಣೆ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ರೀತಿಯಲ್ಲಿ ಅವರನ್ನು ಜನರು ಟ್ರೋಲ್ ಮಾಡುತ್ತಿದ್ದಾರೆ. ಕಾಲೇಜು ವೇದಿಕೆಯಲ್ಲೂ ಅಪಹಾಸ್ಯ ಮಾಡಲಾಗಿದೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋಗೆ ಜನರಿಂದ ಟೀಕೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳ ವರ್ತನೆಯನ್ನು ಅನೇಕರು ಖಂಡಿಸಿದ್ದಾರೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ. ಅದಕ್ಕೆ ಕಾರಣ ಆಗಿದ್ದು ‘ಕಾಫಿ ವಿತ್ ಕರಣ್’ ಶೋನಲ್ಲಿ ಅವರು ಆಡಿದ ಮಾತು. ರಣವೀರ್ ಸಿಂಗ್ (Ranveer Singh) ಜೊತೆ ರಿಲೇಷನ್ಶಿಪ್ನಲ್ಲಿ ಇದ್ದಾಗಲೇ ಬೇರೆಯವರ ಜೊತೆಗೂ ಡೇಟಿಂಗ್ ಮಾಡಿದ್ದೆ ಎಂಬ ಸತ್ಯವನ್ನು ಅವರು ಆ ಎಪಿಸೋಡ್ನಲ್ಲಿ ಒಪ್ಪಿಕೊಂಡರು. ಅದನ್ನೇ ಇಟ್ಟುಕೊಂಡು ಎಲ್ಲರೂ ಟ್ರೋಲ್ (Troll) ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಮಾತ್ರವಲ್ಲದೇ ಕಾಲೇಜು ಫೆಸ್ಟ್ನಲ್ಲೂ ಈ ಬಗ್ಗೆ ಹಾಸ್ಯ ಮಾಡಲಾಗಿದೆ. ಇದು ದೀಪಿಕಾ ಪಡುಕೋಣೆ ಅವರ ಅಭಿಮಾನಿಗಳಿಗೆ ಸರಿ ಎನಿಸಿಲ್ಲ. ವಿದ್ಯಾರ್ಥಿಗಳ ಈ ವರ್ತನೆಯನ್ನು ನಾಚಿಕೆಗೇಡು ಎಂದು ಫ್ಯಾನ್ಸ್ ಟೀಕಿಸಿದ್ದಾರೆ.
ನಟಿಯರ ಹೆಸರುಗಳು ಬೇರೆ ಬೇರೆ ವ್ಯಕ್ತಿಗಳ ಜೊತೆ ತಳುಕು ಹಾಕಿಕೊಳ್ಳುವುದು ಸಹಜ. ದೀಪಿಕಾ ಪಡುಕೋಣೆ ಕೂಡ ಹಲವರ ಜೊತೆ ಡೇಟಿಂಗ್ ಮಾಡಿದ್ದರು. ಆ ವಿಚಾರವನ್ನು ಅವರು ಮುಚ್ಚಿಟ್ಟಿಲ್ಲ. ಆದರೆ ಈಗ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ರೀತಿಯಲ್ಲಿ ಅವರನ್ನು ಜನರು ಟ್ರೋಲ್ ಮಾಡುತ್ತಿದ್ದಾರೆ. ಕಾಲೇಜು ವೇದಿಕೆಯಲ್ಲೂ ಅಪಹಾಸ್ಯ ಮಾಡಲಾಗಿದೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ‘ಸಿಂಗಂ ಅಗೇನ್’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆಗೆ ಶಕ್ತಿ ಶೆಟ್ಟಿ ಪಾತ್ರ
‘ಬಾಜಿರಾವ್ ಮಸ್ತಾನಿ’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಿಭಾಯಿಸಿದ್ದ ಪಾತ್ರದ ರೀತಿಯಲ್ಲಿ ವೇಷ ಹಾಕೊಂಡ ವಿದ್ಯಾರ್ಥಿಯೊಬ್ಬರು ವೇದಿಕೆಗೆ ಬಂದು ನಿಂತಿದ್ದಾರೆ. ಅವರ ಹಿಂಬದಿಯಲ್ಲಿ ಇರುವ ಎಲ್ಇಡಿ ಪರದೆಯ ಮೇಲೆ ಸಿದ್ದಾರ್ಥ್ ಮಲ್ಯ, ಉಪೆನ್ ಪಟೇಲ್, ರಣಬೀರ್ ಕಪೂರ್, ಯುವರಾಜ್ ಸಿಂಗ್, ರಣವೀರ್ ಸಿಂಗ್ ಮುಂತಾದವರ ಫೋಟೋಗಳನ್ನು ಬಿತ್ತರ ಮಾಡಲಾಗಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬಿದ್ದು ಬಿದ್ದು ನಕ್ಕಿದ್ದಾರೆ. ವೈರಲ್ ಆಗಿರುವ ವಿಡಿಯೋಗೆ ಜನರಿಂದ ಟೀಕೆ ವ್ಯಕ್ತವಾಗಿದೆ.
This BHU , Varanasi Uttar Pradesh
Memes are ok But This is character assassination of Indian actress Deepika Padukone!
It’s just show the mindset of cheapest! It’s shameful act! pic.twitter.com/KhK3oQrulX
— Ashish Singh (@AshishSinghKiJi) November 8, 2023
ಇಷ್ಟೆಲ್ಲ ಟ್ರೋಲ್ ಆಗಿದ್ದರೂ ಕೂಡ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ. ದೀಪಿಕಾ ಅವರು ತಮ್ಮ ಹಳೇ ಸಂಬಂಧಗಳ ಬಗ್ಗೆ ಓಪನ್ ಆಗಿ ಮಾತನಾಡಿದಾಗ ರಣವೀರ್ ಸಿಂಗ್ ಅವರಿಗೆ ಕೊಂಚ ಕೋಪ ಬಂದಿದ್ದು ನಿಜ. ಆದರೆ ನಂತರದ ದಿನಗಳಲ್ಲಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ತುಂಬ ಅನ್ಯೋನ್ಯವಾಗಿ ಇದ್ದರು. ಸೋಶಿಯಲ್ ಮೀಡಿಯಾದಲ್ಲಿಯೂ ದೀಪಿಕಾ ಅವರು ರೀಲ್ಸ್ ಮಾಡುತ್ತಾ ಖುಷಿಯಾಗಿ ಕಾಲ ಕಳೆದಿದ್ದಾರೆ. ಆದರೆ ಅವರ ವೈಯಕ್ತಿಕ ವಿಚಾರವನ್ನು ಇಟ್ಟುಕೊಂಡು ನೆಟ್ಟಿಗರು ಟೈಂ ಪಾಸ್ ಮಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.