ನಟಿ ದೀಪಿಕಾ ಪಡುಕೋಣೆ ಅವರನ್ನು ಇತ್ತೀಚೆಗೆ ಕಟುವಾಗಿ ಟೀಕಿಸಲಾಗಿತ್ತು. ‘ಕಾಫಿ ವಿತ್ ಕರಣ್ ಸೀಸನ್ 8’ (Koffee With Karan) ಶೋನಲ್ಲಿ ಅವರು ಆಡಿದ ಮಾತುಗಳು ಸಖತ್ ವೈರಲ್ ಆಗಿದ್ದವು. ಮದುವೆಗೂ ಮುನ್ನ, ಏಕಕಾಲಕ್ಕೆ ರಣವೀರ್ ಸಿಂಗ್ (Ranveer Singh) ಮಾತ್ರವಲ್ಲದೇ ಇತರೆ ಹುಡುಗರ ಜೊತೆಯೂ ತಾವು ಡೇಟಿಂಗ್ ಮಾಡುತ್ತಿದ್ದ ವಿಷಯವನ್ನು ದೀಪಿಕಾ ಪಡುಕೋಣೆ (Deepika Padukone) ಒಪ್ಪಿಕೊಂಡಿದ್ದೇ ಇಷ್ಟಕ್ಕೆಲ್ಲ ಕಾರಣ ಆಗಿತ್ತು. ಅದನ್ನೇ ಇಟ್ಟುಕೊಂಡು ನೆಟ್ಟಿಗರು ಟ್ರೋಲ್ ಮಾಡಲು ಆರಂಭಿಸಿದ್ದರು. ಆದರೆ ಅದಕ್ಕೆಲ್ಲ ದೀಪಿಕಾ ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹೊಸ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಅವರು ಅಭಿಮಾನಿಗಳಿಗೆ ಸರ್ಪೈಸ್ ನೀಡಿದ್ದಾರೆ. ಟ್ರೋಲ್ಗಳಿಗೆ ತಮ್ಮದು ಡೋಂಟ್ ಕೇರ್ ಪಾಲಿಸಿ ಎಂಬುದನ್ನು ದೀಪಿಕಾ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನಡುವೆ ತುಂಬ ಆಪ್ತತೆ ಇದೆ. ಆದರೆ ‘ಕಾಫಿ ವಿತ್ ಕರಣ್’ ಶೋನಲ್ಲಿ ದೀಪಿಕಾ ಮೇಲೆ ರಣವೀರ್ ಸಿಂಗ್ ಕೋಪ ಮಾಡಿಕೊಂಡಿದ್ದರು. ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ಮುಂದೆ ಇಬ್ಬರ ಸಂಸಾರದಲ್ಲಿ ಅಸಮಾಧಾನ ಮೂಡಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ ಆ ರೀತಿ ಏನೂ ಆಗಿಲ್ಲ. ಇಬ್ಬರೂ ತುಂಬ ಕೂಲ್ ಆಗಿದ್ದಾರೆ. ಈಗ ದೀಪಿಕಾ ಹಂಚಿಕೊಂಡಿರುವ ಹೊಸ ವಿಡಿಯೋಗೆ ರಣವೀರ್ ಸಿಂಗ್ ಕೂಡ ಕಮೆಂಟ್ ಮಾಡಿದ್ದು, ಪತ್ನಿಯನ್ನು ಹುರಿದುಂಬಿಸಿದ್ದಾರೆ.
‘ಸೋ ಬ್ಯೂಟಿಪುಲ್, ಸೋ ಎಲಿಗೆಂಟ್, ಜಸ್ಟ್ ಲುಕಿಂಗ್ ಲೈಕ್ ಎ ವಾವ್..’ ಎಂದು ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿರುವ ಆಡಿಯೋಗೆ ದೀಪಿಕಾ ಪಡುಕೋಣೆ ಅವರು ರೀಲ್ಸ್ ಮಾಡಿದ್ದಾರೆ. ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ಅಪ್ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಇದು 60 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಸಾವಿರಾರು ಜನರು ಕಮೆಂಟ್ ಮಾಡುವ ಮೂಲಕ ತಮ್ಮ ಅನಿಸಿಕೆ ತಿಳಿಸಿದ್ದಾರೆ. ಮಿಲಿಯನ್ಗಟ್ಟಲೆ ಲೈಕ್ಸ್ ಬಂದಿವೆ.
ಇದನ್ನೂ ಓದಿ: ಕದ್ದುಮುಚ್ಚಿ ಬೇರೆಯವರ ಜೊತೆ ಸುತ್ತಾಡಿದ್ದ ದೀಪಿಕಾ? ಸಿಟ್ಟಾದ ರಣವೀರ್ ಸಿಂಗ್
ಸಿನಿಮಾ ವಿಚಾರಕ್ಕೆ ಬರುವುದಾದರೆ, ಈ ವರ್ಷ ‘ಜವಾನ್’, ‘ಪಠಾಣ್’ ಸಿನಿಮಾದ ಮೂಲಕ ದೀಪಿಕಾ ಪಡುಕೋಣೆ ಅವರಿಗೆ ದೊಡ್ಡ ಗೆಲುವು ಸಿಕ್ಕಿದೆ. ಅವರಿಗೆ ಇರುವ ಬೇಡಿಕೆ ಹೆಚ್ಚಾಗಿದೆ. ಇತ್ತೀಚೆಗಷ್ಟೇ ಅವರು ‘ಸಿಂಗಂ ಅಗೇನ್’ ಚಿತ್ರತಂಡ ಸೇರಿಕೊಂಡಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ಸಾಕ್ಷಿ ಶೆಟ್ಟಿ ಎಂಬ ಪಾತ್ರವನ್ನು ದೀಪಿಕಾ ಪಡುಕೋಣೆ ಮಾಡುತ್ತಿದ್ದಾರೆ. ಅವರು ಪೊಲೀಸ್ ಗೆಟಪ್ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಸಖತ್ ವೈರಲ್ ಆಗಿದೆ. ಅಭಿಮಾನಿಗಳಿಗೆ ಈ ಸಿನಿಮಾದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಮೂಡುವಂತಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.