‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾಗೆ ಹೊಸ ರಿಲೀಸ್ ದಿನಾಂಕವನ್ನು ತಂಡ ಇತ್ತೀಚೆಗೆ ಘೋಷಣೆ ಮಾಡಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸಿನಿಮಾ ಮೇ 9ರಂದು ರಿಲೀಸ್ ಆಗಬೇಕಿತ್ತು. ಆದರೆ, ಚುನಾವಣೆ ಹಾಗೂ ಐಪಿಎಲ್ ಅಬ್ಬರದ ಹಿನ್ನೆಲೆಯಲ್ಲಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಜೂನ್ 27ಕ್ಕೆ ಮುಂದೂಡಲಾಗಿದೆ. ನಟಿ ದೀಪಿಕಾ ಪಡುಕೋಣೆ ಅವರು ಸಿನಿಮಾ ಪ್ರಚಾರಕ್ಕೆ ಬರೋದಾಗಿ ಈ ಮೊದಲು ಕಮಿಟ್ ಆಗಿದ್ದರು. ಈಗ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಆದಾಗ್ಯೂ ಅವರು ಸಿನಿಮಾ ಪ್ರಚಾರ ಮಿಸ್ ಮಾಡುತ್ತಿಲ್ಲ ಎನ್ನಲಾಗಿದೆ.
ದೀಪಿಕಾ ಪಡುಕೋಣೆ ಅವರು ಈಗ ಪ್ರೆಗ್ನೆಂಟ್. ಸೆಪ್ಟೆಂಬರ್ನಲ್ಲಿ ಅವರಿಗೆ ಮಗು ಜನಿಸಲಿದೆ. ಜೂನ್ ಎನ್ನುವಾಗ ಅವರಿಗೆ ಆರು ತಿಂಗಳು ತುಂಬಿರುತ್ತದೆ. ಅಂಥ ಸಂದರ್ಭದಲ್ಲಿ ಅವರು ಓಡಾಡೋದು ಕಷ್ಟ ಆಗಬಹುದು. ಆದಾಗ್ಯೂ ಅವರು ಪ್ರಮೋಷನ್ಗಳಲ್ಲಿ ಭಾಗಿ ಆಗಲಿದ್ದಾರೆ. ಹಾಗಂದ ಮಾತ್ರಕ್ಕೆ ಅವರು ಎಲ್ಲ ಕಡೆಗಳಲ್ಲಿ ತೆರಳಿ ಸಿನಿಮಾ ಪ್ರಚಾರ ಮಾಡೋದಿಲ್ಲ. ಬದಲಿಗೆ ‘ಕಲ್ಕಿ 2898 ಎಡಿ’ ತಂಡಕ್ಕೆ ಸಂದರ್ಶನ ನೀಡಲಿದ್ದಾರೆ. ಸಿನಿಮಾ ಪ್ರಮೋಷನ್ ಮಾಡಲಿದ್ದಾರೆ.
ಇದನ್ನೂ ಓದಿ: ದೀಪಿಕಾ ಪಡುಕೋಣೆಯೊಂದಿಗೆ 8ಕೋಟಿಯ ವ್ಯವಹಾರದ ಒಪ್ಪಂದಕ್ಕೆ ಸಹಿ ಹಾಕಿದ ಅಂಬಾನಿ ಪುತ್ರಿ
ಇತ್ತೀಚೆಗೆ ಸಿನಿಮಾ ತಂಡದವರೇ ಕಲಾವಿದರನ್ನು ಸಂದರ್ಶನ ಮಾಡುವ ಟ್ರೆಂಡ್ ಜೋರಾಗಿದೆ. ಸಿನಿಮಾ ನಿರ್ದೇಶಕರು ಹೀರೋಗಳನ್ನು ಸಂದರ್ಶನ ಮಾಡುತ್ತಾರೆ. ದೀಪಿಕಾ ಪಡುಕೋಣೆ ಅವರನ್ನು ‘ಕಲ್ಕಿ 2898 ಎಡಿ’ ನಿರ್ದೇಶಕ ನಾಗ್ ಅಶ್ವಿನ್ ಅಥವಾ ಸಿನಿಮಾದ ಹೀರೋ ಪ್ರಭಾಸ್ ಸಂದರ್ಶನ ಮಾಡಬಹುದು ಎಂದು ಹೇಳಲಾಗುತ್ತಿದೆ.
All the forces come together for a better tomorrow on 𝟐𝟕-𝟎𝟔-𝟐𝟎𝟐𝟒.#Kalki2898AD @SrBachchan @ikamalhaasan #Prabhas @deepikapadukone @nagashwin7 @DishPatani @Music_Santhosh @VyjayanthiFilms @Kalki2898AD #Kalki2898ADonJune27 pic.twitter.com/kItIJXvbto
— Vyjayanthi Movies (@VyjayanthiFilms) April 27, 2024
ಅಶ್ವಿನಿ ದತ್ ಅವರು ‘ಕಲ್ಕಿ 2898 ಎಡಿ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಬಜೆಟ್ 600 ಕೋಟಿ ರೂಪಾಯಿ ಎನ್ನಲಾಗಿದೆ. ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ, ದಿಶಾ ಪಟಾಣಿ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಮಹಾಭಾರತದಿಂದ ಆರಂಭ ಆಗೋ ಕಥೆ ಆರು ಸಾವಿರ ವರ್ಷಗಳ ಕಥೆ ಇರಲಿದೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.