ರಣವೀರ್ ಅದೃಷ್ಟ ಬದಲಿಸಿದ ‘ಧುರಂಧರ್’; ದಕ್ಷಿಣದ ನಿರ್ಮಾಣ ಸಂಸ್ಥೆ ಜೊತೆ ಬಿಗ್ ಬಜೆಟ್ ಸಿನಿಮಾ

'ಧುರಂಧರ್' ಸಿನಿಮಾ ಯಶಸ್ಸಿನೊಂದಿಗೆ ರಣವೀರ್ ಸಿಂಗ್ ವೃತ್ತಿಜೀವನಕ್ಕೆ ಭಾರಿ ತಿರುವು ಸಿಕ್ಕಿದೆ. ಸತತ ಸೋಲುಗಳ ನಂತರ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿಗೂ ಹೆಚ್ಚು ಗಳಿಸಿದೆ. ದಕ್ಷಿಣದ ಮೈತ್ರಿ ಮೂವೀ ಮೇಕರ್ಸ್‌ನಂತಹ ದೊಡ್ಡ ನಿರ್ಮಾಣ ಸಂಸ್ಥೆ ರಣವೀರ್ ಜೊತೆ ಗ್ಯಾಂಗ್‌ಸ್ಟರ್ ಕಥೆಯ ಬಿಗ್ ಬಜೆಟ್ ಸಿನಿಮಾ ಮಾಡಲು ಆಸಕ್ತಿ ತೋರಿಸಿದ್ದು, ಅವರ ಅದೃಷ್ಟ ನಿಜಕ್ಕೂ ಬದಲಾಗಿದೆ.

ರಣವೀರ್ ಅದೃಷ್ಟ ಬದಲಿಸಿದ ‘ಧುರಂಧರ್’; ದಕ್ಷಿಣದ ನಿರ್ಮಾಣ ಸಂಸ್ಥೆ ಜೊತೆ ಬಿಗ್ ಬಜೆಟ್ ಸಿನಿಮಾ
ರಣವೀರ್ ಸಿಂಗ್

Updated on: Dec 17, 2025 | 12:02 PM

ವೃತ್ತಿ ಜೀವನ ಸಂಕಷ್ಟಲ್ಲಿರುವಾಗ ಒಂದೇ ಒಂದು ಹಿಟ್ ಸಿನಿಮಾ ಸಿಕ್ಕರೂ ಸಾಕು ನಿರ್ಮಾಪಕರು ನಿಮ್ಮನ್ನು ಹುಡುಕಿ ಬರುತ್ತಾರೆ. ಈಗ ರಣವೀರ್ ಸಿಂಗ್ ವೃತ್ತಿ ಜೀವನದಲ್ಲೂ ಹಾಗೆಯೇ ಆಗಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಅವರು ಈಗ ‘ಧುರಂಧರ್’ ಸಿನಿಮಾ (Dhurandhar Movie) ಮೂಲಕ ಭರ್ಜರಿ ಗೆಲುವು ಕಂಡಿದ್ದಾರೆ. ಇದಾದ ಬಳಿಕ ಅವರ ಅದೃಷ್ಟವೇ ಬದಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಅವರು ದಕ್ಷಿಣದ ನಿರ್ಮಾಣ ಸಂಸ್ಥೆ ಜೊತೆಗೆ ಕೈ ಜೋಡಿಸಿದ್ದಾರೆ ಎನ್ನಲಾಗುತ್ತಿದೆ.

‘ಧುರಂಧರ್’ ಸಿನಿಮಾ ರಿಲೀಸ್​ಗೂ ಮೊದಲು ಹೆಚ್ಚಿನ ನಿರೀಕ್ಷೆಗಳನ್ನೇನು ಹುಟ್ಟುಹಾಕಿರಲಿಲ್ಲ. ಆದರೆ, ಸಿನಿಮಾ ರಿಲೀಸ್ ಆದ ಬಳಿಕ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿತು. ಈ ಸಿನಿಮಾ ಎರಡು ವಾರದ ಒಳಗಾಗಿ 400 ಕೋಟಿ ರೂಪಾಯಿ ಗಳಿಸಿದೆ. ಈ ಸಿನಿಮಾ ಭಾರತದಲ್ಲೇ 600 ಕೋಟಿ ರೂಪಾಯಿಗೂ ಹೆಚ್ಚಿನ ಕಲೆಕ್ಷನ್ ಮಾಡಬಹುದು ಎನ್ನಲಾಗುತ್ತಿದೆ. ಈ ಚಿತ್ರ ಅನೇಕ ಕಲಾವಿದರ ಬದುಕು ಬದಲಿಸಿದೆ. ರಣವೀರ್ ವೃತ್ತಿ ಜೀವನಕ್ಕೂ ಮೈಲೇಜ್ ಕೊಟ್ಟಿದೆ ಈ ಚಿತ್ರ.

ರಣವೀರ್ ಸಿಂಗ್ ಅವರ ಬಳಿ ಇರೋದು ‘ಧುರಂಧರ್’ ಚಿತ್ರ ಮಾತ್ರ ಆಗಿತ್ತು. ‘ಡಾನ್ 3’ ಬಗ್ಗೆ ನಿರ್ದೇಶಕರು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಂತಿಲ್ಲ. ಆದರೆ, ಯಾವಾಗ ‘ಧುರಂಧರ್’ ಸಿನಿಮಾ ಹಿಟ್ ಆಯಿತೋ ಎಲ್ಲರೂ ಅವರನ್ನು ಮುತ್ತಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಧುರಂಧರ್: ಇವರೆಲ್ಲ ಪಾಕಿಸ್ತಾನಕ್ಕೆ ಸ್ಪೈ ಆಗಿ ಹೋದರೆ ಮಾಡುವ ಎಡವಟ್ಟು ಒಂದೆರಡಲ್ಲ

‘ಪುಷ್ಪ’ ರೀತಿಯ ಸಿನಿಮಾ ನಿರ್ಮಾಣ ಮಾಡಿರೋ ಮೈತ್ರಿ ಮೂವೀ ಮೇಕರ್ಸ್ ‘ಧುರಂಧರ್’ ಯಶಸ್ಸಿಗೆ ರಣವೀರ್​ಗೆ ವಿಶ್ ಮಾಡಿದೆ. ಇದು ಹಲವು ಊಹಾಪೋಹಕ್ಕೆ ಕಾರಣವಾಗಿದೆ. ಈ ಸಂಸ್ಥೆ ರಣವೀರ್ ಸಿಂಗ್ ಜೊತೆ ಸಿನಿಮಾ ಮಾಡಲು ಮುಂದೆ ಬಂದಿದೆ ಎನ್ನಲಾಗಿದೆ. ಗ್ಯಾಂಗ್​ಸ್ಟರ್ ಕಥೆಯ ಚಿತ್ರವನ್ನು ಇದು ಒಳಗೊಂಡಿರಲಿದೆಯಂತೆ. ರಣವೀರ್ ಅವರು ಮತ್ತೊಮ್ಮೆ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ವಿಶೇಷ.

‘ಧುರಂಧರ್’ ಸಿನಿಮಾ ಭವಿಷ್ಯ ಆಧರಿಸಿ, ‘ಡಾನ್ 3’ ಮಾಡಬೇಕೋ ಅಥವಾ ಬೇಡವೋ ಎಂಬ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಲಾಗಿತ್ತು. ಈಗ ಚಿತ್ರ ಹಿಟ್ ಆಗಿರುವುದರಿಂದ ಫರ್ಹಾನ್ ಅಖ್ತರ್ ಅವರು ‘ಡಾನ್ 3’ ಮಾಡಲು ಒಪ್ಪಬಹುದು. ‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.