AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​​ನಿಂದ ಹೊರ ಬರುತ್ತಿದ್ದಂತೆ ಬದಲಾಯ್ತು ಸ್ಪರ್ಧಿಯ ಬದುಕು

Bigg Boss Hindi: ಬಿಗ್ ಬಾಸ್ ಕಾರಣದಿಂದಾಗಿ ಅನೇಕರ ವೃತ್ತಿಜೀವನವು ಬದಲಾಗಿದೆ. ಸಲ್ಮಾನ್ ಖಾನ್ ಅವರ ಕಾರ್ಯಕ್ರಮವು ಇಲ್ಲಿಯವರೆಗೆ ಅನೇಕರ ಅದೃಷ್ಟವನ್ನು ಬದಲಿಸಿದೆ. 'ಬಿಗ್ ಬಾಸ್ 19' ಇತ್ತೀಚೆಗೆ ಕೊನೆಗೊಂಡಿತು ಮತ್ತು ಅದರ ನಂತರ ತಾನ್ಯಾ ಮಿತ್ತಲ್ ತನ್ನ ಮೊದಲ ಜಾಹೀರಾತಲ್ಲಿ ಕಾಣಿಸಿಕೊಂಡಿದ್ದಾರೆ. ತಾನ್ಯಾ ಮಾತ್ರವಲ್ಲದೆ ಹಾಸ್ಯನಟ ಪ್ರಣೀತ್ ಮೋರೆ ಬದುಕು ಬದಲಾಗಿದೆ.

ಬಿಗ್ ಬಾಸ್​​ನಿಂದ ಹೊರ ಬರುತ್ತಿದ್ದಂತೆ ಬದಲಾಯ್ತು ಸ್ಪರ್ಧಿಯ ಬದುಕು
Pranit More
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 16, 2025 | 7:16 PM

Share

ಬಿಗ್ ಬಾಸ್‘ (Bigg Boss) ಕಿರುತೆರೆಯ ಅತ್ಯಂತ ಜನಪ್ರಿಯ ಮತ್ತು ವಿವಾದಾತ್ಮಕ ಶೋಗಳಲ್ಲಿ ಒಂದಾಗಿದೆ. ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳು, ಸೋಶಿಯಲ್ ಮೀಡಿಯಾ ಇನ್​ಫ್ಲ್ಯುಯೆನ್ಸ್ ಕಾಣಿಸಿಕೊಳ್ಳುತ್ತಾರೆ. ಈ ಶೋ ನಂತರ ಅಪಾರ ಖ್ಯಾತಿಯನ್ನು ಗಳಿಸುವ ಸ್ಪರ್ಧಿಗಳು ಇದ್ದಾರೆ. ಬಿಗ್ ಬಾಸ್ ಕಾರಣದಿಂದಾಗಿ ಅನೇಕರ ವೃತ್ತಿಜೀವನವು ಬದಲಾಗಿದೆ. ಸಲ್ಮಾನ್ ಖಾನ್ ಅವರ ಕಾರ್ಯಕ್ರಮವು ಇಲ್ಲಿಯವರೆಗೆ ಅನೇಕರ ಅದೃಷ್ಟವನ್ನು ಬದಲಿಸಿದೆ. ‘ಬಿಗ್ ಬಾಸ್ 19’ ಇತ್ತೀಚೆಗೆ ಕೊನೆಗೊಂಡಿತು ಮತ್ತು ಅದರ ನಂತರ ತಾನ್ಯಾ ಮಿತ್ತಲ್ ತನ್ನ ಮೊದಲ ಜಾಹೀರಾತಲ್ಲಿ ಕಾಣಿಸಿಕೊಂಡಿದ್ದಾರೆ. ತಾನ್ಯಾ ಮಾತ್ರವಲ್ಲದೆ ಹಾಸ್ಯನಟ ಪ್ರಣೀತ್ ಮೋರೆ ಬದುಕು ಬದಲಾಗಿದೆ.

‘ಬಿಗ್ ಬಾಸ್ 19’ ಮುಗಿದ ನಂತರ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಪ್ರಣೀತ್ ಮೋರೆ ತಮ್ಮ ಮೊದಲ ಕಾಮಿಡಿ ಶೋ ನೀಡಿದ್ದಾರೆ. ‘ಬಿಗ್ ಬಾಸ್ 19’ರ ಸ್ಪರ್ಧಿಗಳಿಗಾಗಿ ಅವರು ಈ ಕಾರ್ಯಕ್ರಮವನ್ನು ವಿಶೇಷವಾಗಿ ಏರ್ಪಡಿಸಿದ್ದರು. ಪ್ರೇಕ್ಷಕರು ಸಹ ಇದಕ್ಕೆ ಹಾಜರಾಗಬಹುದಿತ್ತು. ಪ್ರಣೀತ್ ಅವರ ಕಾರ್ಯಕ್ರಮದ ಟಿಕೆಟ್‌ಗಳು ಶನಿವಾರದಿಂದ ಮಾರಾಟವಾಗಲು ಪ್ರಾರಂಭಿಸಿದ್ದವು. ಟಿಕೆಟ್ ಬುಕಿಂಗ್ ವೆಬ್‌ಸೈಟ್ ‘ಬುಕ್ ಮೈ ಶೋ’ ಪ್ರಕಾರ, ಶೋ ಆರಂಭ ಆದ ಕೆಲವೇ ಗಂಟೆಗಳಲ್ಲಿ ಟಿಕೆಟ್​ಗಳು ಸೋಲ್ಡ್​ ಔಟ್ ಆಗಇವೆ. ಇದು ಪ್ರಣಿತ್ ಜನಪ್ರಿಯತೆ ಹೆಚ್ಚಾಗಿದೆ ಎಂಬುದನ್ನು ತೋರಿಸುತ್ತದೆ. ಪ್ರಣೀತ್ ಸ್ವತಃ ಇನ್‌ಸ್ಟಾ ಸ್ಟೋರಿಯ ಮೂಲಕ ಅಭಿಮಾನಿಗಳಿಗೆ ಕಾರ್ಯಕ್ರಮದ ಬಗ್ಗೆ ತಿಳಿಸಿದ್ದರು. ‘ಈ ಶೋ ಟಿಕೆಟ್​ಗಳು ತಕ್ಷಣವೇ ಮಾರಾಟವಾಯಿತು. ನನ್ನ ಹೃದಯದಿಂದ ಧನ್ಯವಾದ. ನಾನು ಶೀಘ್ರದಲ್ಲೇ ಪ್ರವಾಸವನ್ನು ಘೋಷಿಸುತ್ತೇನೆ. ಇನ್ನಷ್ಟು ದೊಡ್ಡ ಕಾರ್ಯಕ್ರಮಗಳು ಮತ್ತು ಇನ್ನಷ್ಟು ಮೋಜು ಮಾಡೋಣ’ ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ:ಗಿಲ್ಲಿ ನಟನಿಗೆ  ಇಲ್ಲ ‘ಬಿಗ್ ಬಾಸ್’ ಗೆಲ್ಲೋ ಅದೃಷ್ಟ?

ಆಗಸ್ಟ್‌ನಲ್ಲಿ ಪ್ರಾರಂಭವಾದ ‘ಬಿಗ್ ಬಾಸ್ 19’ ಡಿಸೆಂಬರ್ 7 ರಂದು ಕೊನೆಗೊಂಡಿತು. ಈ ಸೀಸನ್‌ನ ವಿಜೇತರಾಗಿ ನಟ ಗೌರವ್ ಖನ್ನಾ ಹೊರಹೊಮ್ಮಿದರು. ಪ್ರಣೀತ್ ಮೋರೆ ಮೂರನೇ ಸ್ಥಾನದೊಂದಿಗೆ ಸ್ಪರ್ಧೆಯಿಂದ ಹೊರಬಿದ್ದರು. ಅಂತಿಮ ಹಣಾಹಣಿ ಫರ್ಹಾನಾ ಭಟ್ ಮತ್ತು ಗೌರವ್ ನಡುವೆ ನಡೆಯಿತು. ಪ್ರಶಸ್ತಿಗಾಗಿ ಪ್ರಣೀತ್ ಅವರನ್ನು ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ