ಬಾಲಿವುಡ್ನ ಖ್ಯಾತ ನಟಿ ದಿಶಾ ಪಟಾನಿ (Disha Patani) ಅವರು ಆಗಾಗ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಬೋಲ್ಡ್ ಆಗಿ ಪೋಸ್ ನೀಡುವಲ್ಲಿ ಅವರು ಎಂದಿಗೂ ಹಿಂದೇಟು ಹಾಕಿಲ್ಲ. ಪ್ರತಿ ಬಾರಿಯೂ ಅವರು ಬಿಕಿನಿ ಧರಿಸಿ ಫೋಟೋಶೂಟ್ (Disha Patani Photoshoot) ಮಾಡಿಸಿದಾಗ ಗ್ಲಾಮರ್ ಪ್ರಮಾಣ ಹೆಚ್ಚಾಗುತ್ತಲೇ ಹೋಗುತ್ತದೆ. ಅನೇಕ ಬ್ರ್ಯಾಂಡ್ಗಳಿಗೆ ದಿಶಾ ಪಟಾನಿ ಪ್ರಚಾರ ರಾಯಭಾರಿ ಆಗಿದ್ದಾರೆ. ಜಾಹೀರಾತುಗಳಲ್ಲಿ ನಟಿಸಿದ್ದರಿಂದ ಅವರಿಗೆ ಕೋಟ್ಯಂತರ ರೂಪಾಯಿ ಸಂಭಾವನೆ ಬರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ದಿಶಾ ಪಟಾನಿ ಅವರು ಕೆಲವು ಹೊಸ ಫೋಟೋಗಳನ್ನು (Disha Patani Photos) ಹಂಚಿಕೊಂಡಿದ್ದಾರೆ. ಅವುಗಳನ್ನು ಕಂಡು ಪಡ್ಡೆ ಹುಡುಗರ ನಿದ್ದೆ ಹಾರಿ ಹೋಗಿದೆ.
ಸೋಶಿಯಲ್ ಮೀಡಿಯಾದಲ್ಲಿ ದಿಶಾ ಪಟಾನಿ ಅವರು ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಅವರು ವಿದೇಶ ಪ್ರವಾಸ ಮಾಡುತ್ತಾರೆ. ತಮ್ಮ ದಿನಚರಿ, ಪ್ರವಾಸ, ಸಿನಿಮಾ, ವರ್ಕೌಟ್, ಡಯೆಟ್ ಮುಂತಾದ ವಿಚಾರಗಳ ಬಗ್ಗೆ ಇನ್ಸ್ಟಾಗ್ರಾಮ್ ಮೂಲಕ ಅಪ್ಡೇಟ್ ನೀಡುತ್ತಾರೆ. ಅವರು ಹಂಚಿಕೊಳ್ಳುವ ಎಲ್ಲ ಫೋಟೋಗಳು ಮಿಲಿಯನ್ಗಟ್ಟಲೆ ಲೈಕ್ಸ್ ಪಡೆಯುತ್ತವೆ. ಅಭಿಮಾನಿಗಳ ಪೇಜ್ಗಳಲ್ಲಿ ದಿಶಾ ಪಟಾನಿ ಫೋಟೋಗಳು ವೈರಲ್ ಆಗುತ್ತವೆ.
ಸಖತ್ ಹಾಟ್ ಅವತಾರದಲ್ಲಿ ದಿಶಾ ಪಟಾನಿ ಫೋಟೋಶೂಟ್ ಮಾಡಿಸಿದ್ದಾರೆ. ಅದರ ಕೆಲವು ಫೋಟೋಗಳನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಸುರಿಯುವ ಮಳೆಯಲ್ಲಿ ಕುಳಿತು ಅವರು ಪೋಸ್ ನೀಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಈ ಫೋಟೋವನ್ನು 9 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. 6 ಸಾವಿರಕ್ಕೂ ಹೆಚ್ಚು ಕಮೆಂಟ್ಗಳು ಬಂದಿವೆ. ದಿಶಾ ಅಭಿಮಾನಿಗಳು ಈ ಫೋಟೋಗಳನ್ನು ತುಂಬ ಇಷ್ಟಪಟ್ಟಿದ್ದಾರೆ.
ಇದನ್ನೂ ಓದಿ: ಥೈಲ್ಯಾಂಡ್ ಸಮುದ್ರ ತೀರದಲ್ಲಿ ಬಿಕಿನಿ ಧರಿಸಿ ಪೋಸ್ ನೀಡಿದ ದಿಶಾ ಪಟಾನಿ
ಅನೇಕ ಸಿನಿಮಾಗಳಲ್ಲಿ ದಿಶಾ ಪಟಾನಿ ನಟಿಸುತ್ತಿದ್ದಾರೆ. ಪ್ರಭಾಸ್ ಜೊತೆ ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಅವರು ಅಭಿನಯಿಸುತ್ತಿದ್ದಾರೆ. ತಮಿಳಿನಲ್ಲಿ ಸೂರ್ಯ ಜೊತೆ ‘ಕಂಗುವಾ’ ಸಿನಿಮಾದಲ್ಲೂ ದಿಶಾ ನಟಿಸುತ್ತಿದ್ದಾರೆ. ಈ ಎಲ್ಲ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ. ಸಿನಿಮಾ ಮಾತ್ರವಲ್ಲದೇ ವೈಯಕ್ತಿಕ ಜೀವನದ ಕಾರಣದಿಂದಲೂ ದಿಶಾ ಪಟಾನಿ ಆಗಾಗ ಸುದ್ದಿ ಆಗುತ್ತಾರೆ. ಈ ಮೊದಲು ಅವರು ನಟ ಟೈಗರ್ ಶ್ರಾಫ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಈಗ ಅವರಿಬ್ಬರು ದೂರ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ