ಖ್ಯಾತ ನಟಿಯರೊಟ್ಟಿಗೆ ಅಕ್ರಮ ಸಂಬಂಧ, ಬಹಿರಂಗವಾಗಿ ಒಪ್ಪಿಕೊಂಡ ನಿರ್ದೇಶಕ
Vikram Bhatt: ಬಾಲಿವುಡ್ನ ಇಬ್ಬರು ಖ್ಯಾತ ನಟಿಯರೊಟ್ಟಿಗೆ ಅಕ್ರಮ ಸಂಬಂಧ ಹೊಂದಿದ್ದಾಗಿ ನಿರ್ದೇಶಕ ಹೇಳಿಕೊಂಡಿದ್ದಾರೆ.
ಬಾಲಿವುಡ್ನಲ್ಲಿ (Bollywood) ಸಂಬಂಧಗಳು ಬಹಳ ತೆಳು. ನಟ-ನಟಿಯರು ಆರು ತಿಂಗಳಿಗೊಮ್ಮೆ ಬಾಯ್ಫ್ರೆಂಡ್, ಗರ್ಲ್ಫ್ರೆಂಡ್ ಬದಲಿಸುತ್ತಾರೆ. ವಿಚ್ಛೇದನಗಳಂತೂ ತೀರಾ ಮಾಮೂಲು. ಮೀಟೂ ಪ್ರಕರಣಗಳು ಸಹ ಹೆಚ್ಚು. ಅಕ್ರಮ ಸಂಬಂಧಗಳ ಆರೋಪ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಇದೀಗ ಬಾಲಿವುಡ್ನ ಹಿರಿಯ ನಿರ್ದೇಶಕರೊಬ್ಬರು, ತಾವು ಬಾಲಿವುಡ್ನ ಇಬ್ಬರು ಖ್ಯಾತ ನಟಿಯರೊಟ್ಟಿಗೆ ಅಕ್ರಮ ಸಂಬಂಧ ಹೊಂದಿದ್ದಿದ್ದಾಗಿ ಹೇಳಿಕೊಂಡಿದ್ದಾರೆ. ನಟಿಯರ ಹೆಸರನ್ನು ಸಹ ಬಹಿರಂಗಪಡಿಸಿದ್ದಾರೆ.
‘ಗುಲಾಮ್’, ‘ರಾಜ್’ ಸೇರಿದಂತೆ ಇನ್ನೂ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ವಿಕ್ರಮ್ ಭಟ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತಾವು ಖ್ಯಾತ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಹಾಗೂ ನಟಿ ಅಮಿಷಾ ಪಟೇಲ್ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
ವಿಕ್ರಮ್ ಭಟ್ 1989ರಲ್ಲಿ ತಮ್ಮ ಬಹುಸಮಯದ ಗೆಳತಿ ಅದಿತಿ ಭಟ್ ಜೊತೆ ವಿವಾಹವಾದರು. ಅವರಿಗೆ ಒಬ್ಬ ಮಗಳು ಸಹ ಜನಿಸಿದಳು. ಆದರೆ ವಿಕ್ರಂ ಭಟ್, ಮದುವೆ ಆಗಿದ್ದರೂ ಸಹ ನಟಿ ಸುಶ್ಮಿತಾ ಸೇನ್ ಜೊತೆಗೆ 1990ರಲ್ಲಿ ಸಂಬಂಧ ಹೊಂದಿದ್ದರು. ಅದಾದ ಬಳಿಕ ನಟಿ ಅಮಿಷಾ ಪಟೇಲ್ ಜೊತೆಗೂ ಹಲವು ವರ್ಷಗಳ ಕಾಲ ಅಕ್ರಮ ಸಂಬಂಧ ಹೊಂದಿದ್ದರು.
ಇದನ್ನೂ ಓದಿ:Ravi Kishan: ಮೀಟೂ ಅನುಭವ ಬಿಚ್ಚಿಟ್ಟ ನಟ, ಸಂಸದ ರವಿಕಿಶನ್
‘ನನ್ನ ಜೀವನದಲ್ಲಿ ಸಾಕಷ್ಟು ತಪ್ಪುಗಳನ್ನು ನಾನು ಮಾಡಿದ್ದೀನಿ ಆದರೆ ಯಾವ ತಪ್ಪಿಗೂ ಪಶ್ಚಾತ್ತಾಪ ಪಟ್ಟಿಲ್ಲ, ಪಡುವುದೂ ಇಲ್ಲ. ಪ್ರತಿ ತಪ್ಪುಗಳಿಂದಲೂ ನಾನು ಕಲಿತಿದ್ದೀನಿ. ಸುಶ್ಮಿತಾ ಸೇನ್ ಜೊತೆಗಿನ ಸಂಬಂಧದಿಂದ ನನ್ನ ದಾಂಪತ್ಯದಲ್ಲಿ ಬಿರುಕು ಉಂಟಾಯ್ತು. ಅದಕ್ಕೆ ನಾನು ಮಾತ್ರವೇ ಹೊಣೆ. ನಾನು ಯಾರನ್ನೂ ಸಹ ದೂಷಿಸುವುದಿಲ್ಲ. ಎಲ್ಲ ತಪ್ಪುಗಳಿಗೂ ನಾನೇ ಕಾರಣ. ಸುಶ್ಮಿತಾ, ಅಮಿಷಾ ಆಗಲಿ ಒಳ್ಳೆಯವರೇ. ನನ್ನ ಮಾಜಿ ಪತ್ನಿಯೂ ಸಹ’ ಎಂಬರ್ಥದ ಮಾತುಗಳನ್ನಾಡಿದ್ದಾರೆ ವಿಕ್ರಮ್ ಭಟ್.
‘ನನ್ನ ಜೀವನದಲ್ಲಿ ಹಲವು ಮಹಿಳೆಯರು ಬಂದು ಹೋಗಿದ್ದಾರೆ. ಸುಶ್ಮಿತಾ ಹಾಗೂ ಅಮಿಷಾ ಪಟೇಲ್ ಅವರ ಜೊತೆಗಿನ ಸಂಬಂಧದ ಬಗ್ಗೆ ಹೆಚ್ಚು ಚರ್ಚೆ ಆಯ್ತು. ಆದರೆ ನನಗೆ ಇನ್ನೂ ಹಲವು ಸಂಬಂಧಗಳಿದ್ದವು. ಅವೆಲ್ಲ ಹೀಗೆ ಬಂದು ಹಾಗೆ ಹೋಗಿವೆ. ನನ್ನ ಜೀವನವನ್ನು ನಾನು ಹಿಂತಿರುಗಿ ನೋಡಿದರೆ ಒಂದು ಪರಿಪೂರ್ಣ ಜೀವನ ನನ್ನದಾಗಿತ್ತು ಅನ್ನಿಸುತ್ತದೆ. ನನ್ನ ಜೀವನ ಅಪೂರ್ಣವಲ್ಲ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ