‘ಇವರೇ ನನ್ನ ಬಾಯ್​ಫ್ರೆಂಡ್’’ ಎಂದು ಅಧಿಕೃತವಾಗಿ ಘೋಷಣೆ ಮಾಡಿದ ದಿಶಾ ಪಟಾಣಿ; ಟೈಗರ್ ಶ್ರಾಫ್ ಕಥೆ ಏನು?

|

Updated on: Aug 07, 2023 | 7:09 AM

ಟೈಗರ್ ಶ್ರಾಫ್ ಹಾಗೂ ದಿಶಾ ಪಟಾಣಿ ಜೋಡಿ ಎಂದಿಗೂ ತಮ್ಮ ಸಂಬಂಧವನ್ನು ಒಪ್ಪಿಕೊಂಡಿಲ್ಲ. ಇವರ ಸಂಬಂಧ ಬ್ರೇಕಪ್​​ನಲ್ಲಿ ಕೊನೆಯಾಗಿದೆಯೇ ಎನ್ನುವ ಅನುಮಾನ ಮೂಡಿದೆ.

‘ಇವರೇ ನನ್ನ ಬಾಯ್​ಫ್ರೆಂಡ್’’ ಎಂದು ಅಧಿಕೃತವಾಗಿ ಘೋಷಣೆ ಮಾಡಿದ ದಿಶಾ ಪಟಾಣಿ; ಟೈಗರ್ ಶ್ರಾಫ್ ಕಥೆ ಏನು?
ಅಲೆಕ್ಸಾಂಡರ್-ದಿಶಾ
Follow us on

ನಟಿ ದಿಶಾ ಪಟಾಣಿ (Disha Patani) ಅವರು ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಅವರು ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಅವರು ಬಾಲಿವುಡ್​ನ ಸ್ಟಾರ್ ನಟ ಟೈಗರ್ ಶ್ರಾಫ್ (Tiger Shroff) ಜೊತೆ ರಿಲೇಶನ್​ಶಿಪ್​ನಲ್ಲಿದ್ದಾರೆ ಎಂದು ಹೇಳಲಾಗಿತ್ತು. ಅವರು ಆಗಾಗ ಒಟ್ಟಿಗೆ ಕಾಣಿಸಿಕೊಂಡ ಉದಾಹರಣೆ ಕೂಡ ಇದೆ. ಆದರೆ, ಇವರ ಮಧ್ಯೆ ಇರುವ ಪ್ರೀತಿಯ ಸಂಬಂಧ ಮುರಿದು ಬಿದ್ದಿದೆ ಎನ್ನಲಾಗುತ್ತಿದೆ. ಈ ರೀತಿಯ ಅನುಮಾನ ಹುಟ್ಟುಕೊಳ್ಳಲು ಕಾರಣ ದಿಶಾ ಪಟಾಣಿ ಅವರ ಹೊಸ ವಿಡಿಯೋ. ಈ ವಿಡಿಯೋದಲ್ಲಿ ಅವರು ಹೊಸ ಬಾಯ್​ಫ್ರೆಂಡ್ ಬಗ್ಗೆ ಮಾತನಾಡಿದ್ದಾರೆ.

ದಿಶಾ ಪಟಾಣಿ ಹಾಗೂ ಟೈಗರ್ ಶ್ರಾಫ್ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ. ಕೊವಿಡ್ ಲಾಕ್​ಡೌನ್ ಸಂದರ್ಭದಲ್ಲಿ ಇಬ್ಬರೂ ಕಾರಿನಲ್ಲಿ ಸುತ್ತಾಟ ನಡೆಸಿದ್ದಕ್ಕೆ ಇವರ ಮೇಲೆ ಕೇಸ್ ಕೂಡ ದಾಖಲಾಗಿತ್ತು. ಆದರೆ, ಈ ಜೋಡಿ ಎಂದಿಗೂ ತಮ್ಮ ಸಂಬಂಧವನ್ನು ಒಪ್ಪಿಕೊಂಡಿಲ್ಲ. ಇವರ ಸಂಬಂಧ ಬ್ರೇಕಪ್​​ನಲ್ಲಿ ಕೊನೆಯಾಗಿದೆಯೇ ಎನ್ನುವ ಅನುಮಾನ ಮೂಡಿದೆ.

ದಿಶಾ ಪಟಾಣಿ ಅವರು ಅಲೆಕ್ಸಾಂಡರ್ ಅಲೆಕ್ಸಿಕ್ ಜೊತೆ ಆಗಾಗ ಕಾಣಿಸಿಕೊಳ್ಳುತ್ತಾರೆ. ತಾವಿಬ್ಬರೂ ಬೆಸ್ಟ್​ ಫ್ರೆಂಡ್ಸ್ ಎಂದು ಅನೇಕ ಬಾರಿ ಇವರು ಹೇಳಿಕೊಂಡಿದ್ದಾರೆ. ಆದರೆ, ಇವರ ಮಧ್ಯೆ ಈಗ ಪ್ರೀತಿ ಮೂಡಿದೆಯೇ ಎನ್ನುವ ಅನುಮಾನ ಮೂಡಿದೆ. ದಿಶಾ ಪಟಾಣಿ ಹಾಗೂ ಅಲೆಕ್ಸಾಂಡರ್ ಒಂದು ಕಡೆ ಸೇರಿದ್ದರು. ಈ ವೇಳೆ ದಿಶಾ ತಮ್ಮ ಗೆಳೆತಿಯರಿಗೆ ಅಲೆಕ್ಸಾಂಡರ್​ನ ಪರಿಚಯ ಮಾಡಿದ್ದಾರೆ. ‘ಇವರು ನನ್ನ ಬಾಯ್​ಫ್ರೆಂಡ್’ ಎಂದು ಹೇಳಿರುವುದು ವಿಡಿಯೋದಲ್ಲಿ ಸೆರೆ ಆಗಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಒಂದು ಇನ್​ಸ್ಟಾ ಪೋಸ್ಟ್​ಗೆ ಹೆಚ್ಚು ಹಣ ಪಡೆಯುತ್ತಾರೆ ನಟಿ ದಿಶಾ ಪಟಾನಿ

ಸೆಲೆಬ್ರಿಟಿ ಜಗತ್ತಲ್ಲಿ ಬ್ರೇಕಪ್-ವಿಚ್ಛೇದನ ಸರ್ವೇ ಸಾಮಾನ್ಯ ಎಂಬಂತಾಗಿದೆ. ಈ ಬಗ್ಗೆ ಯಾರೂ ಅಷ್ಟು ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ದಿಶಾ ಅವರು ಟೈಗರ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ದಿಶಾ ಪಟಾಣಿ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಯೋಧ’, ‘ಕಂಗುವಾ’, ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಗಳ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಸದ್ಯ ಬಾಲಿವುಡ್ ಸಿನಿಮಾಗಳ​​ ಜೊತೆ ದಕ್ಷಿಣ ಭಾರತದಲ್ಲೂ ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:07 am, Mon, 7 August 23