Ekta Kapoor Birthday: ಏಕ್ತಾ ಕಪೂರ್ ನಿರ್ಮಾಣ ಮಾಡಿರೋ ಈ ಚಿತ್ರಗಳನ್ನು ವೀಕ್ಷಿಸಿದ್ದೀರಾ? ಮಿಸ್ ಮಾಡಲೇಬೇಡಿ

| Updated By: shivaprasad.hs

Updated on: Jun 07, 2022 | 9:42 AM

Ekta Kapoor best movies | HBD Ekta Kapoor: ಬಾಲಾಜಿ ಟೆಲಿಫಿಲ್ಮ್ಸ್​ ಲಿಮಿಟೆಡ್’ ಮೂಲಕ ಧಾರವಾಹಿಗಳನ್ನು ಹಾಗೂ ‘ಬಾಲಾಜಿ ಮೋಷನ್​ ಪಿಕ್ಚರ್ಸ್’ ಮುಖಾಂತರ ಸಿನಿಮಾಗಳನ್ನು ನಿರ್ಮಿಸಿರುವ ಏಕ್ತಾ ಕಪೂರ್, ‘ಆಲ್ಟ್​​ ಬಾಲಾಜಿ’ ಓಟಿಟಿ ವೇದಿಕೆ ಮೂಲಕ ಹಲವು ವೆಬ್​ ಸೀರೀಸ್​ಗಳನ್ನೂ ನಿರ್ಮಿಸುತ್ತಿದ್ದಾರೆ.

Ekta Kapoor Birthday: ಏಕ್ತಾ ಕಪೂರ್ ನಿರ್ಮಾಣ ಮಾಡಿರೋ ಈ ಚಿತ್ರಗಳನ್ನು ವೀಕ್ಷಿಸಿದ್ದೀರಾ? ಮಿಸ್ ಮಾಡಲೇಬೇಡಿ
ಏಕ್ತಾ ಕಪೂರ್​
Follow us on

ಹಿಂದಿ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಏಕ್ತಾ ಕಪೂರ್ (Ekta Kapoor) ದೊಡ್ಡ ಹೆಸರು. ‘ಬಾಲಾಜಿ ಟೆಲಿಫಿಲ್ಮ್ಸ್​ ಲಿಮಿಟೆಡ್’ ಮೂಲಕ ಧಾರವಾಹಿಗಳನ್ನು ಹಾಗೂ ‘ಬಾಲಾಜಿ ಮೋಷನ್​ ಪಿಕ್ಚರ್ಸ್’ ಮುಖಾಂತರ ಸಿನಿಮಾಗಳನ್ನು ನಿರ್ಮಿಸಿರುವ ಏಕ್ತಾ, ‘ಆಲ್ಟ್​​ ಬಾಲಾಜಿ’ ಓಟಿಟಿ ವೇದಿಕೆ ಮೂಲಕ ಹಲವು ವೆಬ್​ ಸೀರೀಸ್​ಗಳನ್ನೂ ನಿರ್ಮಿಸುತ್ತಿದ್ದಾರೆ. ಈ ಮೂಲಕ ಏಕ್ತಾ ಹಿಂದಿ ನಿರ್ಮಾಣ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದವರು ಎಂದರೆ ತಪ್ಪಿಲ್ಲ. ಇಂದು (ಜೂ.7) ಅವರ ಜನ್ಮದಿನ. 1975ರ ಜೂನ್ 7ರಂದು ಜನಿಸಿದ ಏಕ್ತಾ, ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ತಮ್ಮ 17ನೇ ವಯಸ್ಸಿನಲ್ಲಿ. ಕೆಲ ಸಮಯದ ನಂತರ ತಮ್ಮ ತಂದೆ ಜೀತೇಂದ್ರ ಅವರಿಂದ ಆರ್ಥಿಕ ಸಹಾಯ ದೊರಕಿದ ಮೇಲೆ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಆದರೆ ಮೊದಲಿಗೆ ಯಾವುದೂ ಕೈಹಿಡಿಯಲಿಲ್ಲ. 6 ಪ್ರಾಜೆಕ್ಟ್​​ಗಳು ತಿರಸ್ಕೃತವಾದವು. ಇದರ ನಷ್ಟ ಈಗಿನ ಕಾಲದಲ್ಲಿ ಸುಮಾರು 1.60 ಕೋಟಿ ರೂ ದಾಟಿತ್ತು. ಆದರೆ 1995ರಲ್ಲಿ ‘ಮನೊ ಯಾ ನಾ ಮನೋ’ ಹಾಗೂ ‘ಧನ್ ಧಮಾಕಾ’ ಮೊದಲಾದ ಧಾರವಾಹಿಗಳನ್ನು ವಾಹಿನಿಗಳು ಸ್ವೀಕರಿಸಿದವು. ಅಲ್ಲಿಂದ ಯಶಸ್ಸಿನ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಹೋದರು ಏಕ್ತಾ. ಇದುವರೆಗೆ ಸುಮಾರು 130ಕ್ಕೂ ಹೆಚ್ಚು ಧಾರವಾಹಿಗಳನ್ನು ಅವರು ನಿರ್ಮಿಸಿದ್ದಾರೆ.

2001ರಲ್ಲಿ ಚಿತ್ರ ನಿರ್ಮಾಣ ಕ್ಷೇತ್ರಕ್ಕೂ ಕಾಲಿಟ್ಟ ಏಕ್ತಾ ಹಲವು ಹಿಟ್ ಚಿತ್ರಗಳಿಗೆ ಬಂಡವಾಳ ಹೂಡಿದ್ದಾರೆ. ಅವರು ಮೊದಲು ನಿರ್ಮಿಸಿದ ಚಿತ್ರ ‘ಕ್ಯೋಕಿ ಮೇ ಝೂಟ್ ನಹೀ ಬೋಲ್ತಾ’. ಅದರಲ್ಲಿ ಸುಷ್ಮಿತಾ ಸೇನ್ ಹಾಗೂ ಗೋವಿಂದ ಕಾಣಿಸಿಕೊಂಡಿದ್ದರು. ಏಕ್ತಾ ನಿರ್ಮಿಸಿದ ಕೆಲವು ಅತ್ಯುತ್ತಮ ಸಿನಿಮಾಗಳ ಪಟ್ಟಿ ಇಲ್ಲಿದೆ.

  1.  ಶೂಟೌಟ್ ಅಟ್ ಲೋಖಂಡಾವಾಲ: 2007ರಲ್ಲಿ ತೆರೆಕಂಡ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಸಂಜಯ್ ದತ್, ಸುನೀಲ್ ಶೆಟ್ಟಿ, ವಿವೇಕ್ ಒಬೆರಾಯ್ ಮೊದಲಾದವರು ನಟಿಸಿದ್ದರು. ಏಕ್ತಾ ಕಪೂರ್ ನಿರ್ಮಾಣ ಮಾಡಿದ್ದರು.
  2. ಲವ್, ಸೆಕ್ಸ್ ಔರ್ ದೋಖಾ: ಮೂರು ವಿಷಯಗಳ ಮೇಲೆ ಪ್ರತ್ಯೇಕ ಕತೆಯನ್ನು ಒಳಗೊಂಡ ಈ ಚಿತ್ರವನ್ನು ನಿರ್ದೇಶಿಸಿದವರು ದಿಬಾಕರ್ ಬ್ಯಾನರ್ಜಿ. ಈ ಚಿತ್ರಕ್ಕೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು.
  3. ಒನ್ಸ್​ ಅಪಾನ್​ ಎ ಟೈಮ್​ ಇನ್ ಮುಂಬೈ: ಅಜಯ್ ದೆವಗನ್, ಇಮ್ರಾನ್ ಹಶ್ಮಿ, ಕಂಗನಾ ರಣಾವತ್ ಮೊದಲಾದವರು ನಟಿಸಿದ್ದ ಈ ಚಿತ್ರ 2010ರಲ್ಲಿ ತೆರೆ ಕಂಡಿತ್ತು. ಬಾಕ್ಸಾಫೀಸ್​ನಲ್ಲೂ ಯಶಸ್ವಿಯಾಗಿತ್ತು.
  4. ದಿ ಡರ್ಟಿ ಪಿಕ್ಚರ್: ವಿಮರ್ಶಕರಿಂದ, ವೀಕ್ಷಕರಿಂದ ಮೆಚ್ಚುಗೆ ಪಡೆದ ಈ ಚಿತ್ರದಲ್ಲಿ ವಿದ್ಯಾ ಬಾಲನ್, ಇಮ್ರಾನ್ ಹಶ್ಮಿ ಮೊದಲಾದವರು ಬಣ್ಣಹಚ್ಚಿದ್ದರು. ಸಿಲ್ಕ್​ ಸ್ಮಿತಾರ ಕತೆಯನ್ನು ಆಧರಿಸಿ ಚಿತ್ರ ತಯಾರಾಗಿತ್ತು. ಸುಮಾರು 117 ಕೋಟಿ ರೂ ಮೊತ್ತವನ್ನು ಚಿತ್ರ ಗಳಿಸಿತ್ತು.
  5. ಲೂಟೇರಾ: ವಿಕ್ರಮಾದಿತ್ಯ ಮೊಟ್ವಾನಿ ನಿರ್ದೇಶಿಸಿದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಹಾಗೂ ಸೊನಾಕ್ಷಿ ಸಿನ್ಹಾ ನಟಿಸಿದ್ದರು. ಅನುರಾಗ್ ಕಶ್ಯಪ್​ ಅವರೊಂದಿಗೆ ಏಕ್ತಾ ಕೂಡ ಸಹನಿರ್ಮಾಣ ಮಾಡಿದ್ದರು.
  6. ಏಕ್ ವಿಲನ್: ಶ್ರದ್ಧಾ ಕಪೂರ್, ಸಿದ್ಧಾರ್ಥ್ ಮಲ್ಹೋತ್ರಾ, ಕಮಲ್ ರಶೀದ್ ಖಾನ್ ಮೊದಲಾದವರು ಬ್ಣಹಚ್ಚಿದ್ದ ಈ ಚಿತ್ರ ಸುಮಾರು 170 ಕೋಟಿ ರೂ ಗಳಿಸಿ ದಾಖಲೆ ಬರೆದಿತ್ತು. 2014ರಲ್ಲಿ ಚಿತ್ರ ತೆರೆಕಂಡಿತ್ತು.
  7. ಉಡ್ತಾ ಪಂಜಾಬ್: ಶಾಹಿದ್ ಕಪೂರ್, ಕರೀನಾ ಕಪೂರ್, ಆಲಿಯಾ ಭಟ್ ಮೊದಲಾದವರು ನಟಿಸಿದ್ದ ಈ ಚಿತ್ರವನ್ನು ಏಕ್ತಾ ಕಪೂರ್, ಅನುರಾಗ್ ಕಶ್ಯಪ್ ಮೊದಲಾದವರು ಸೇರಿ ನಿರ್ಮಾಣ ಮಾಡಿದ್ದರು. 2016ರಲ್ಲಿ ತೆರೆ ಕಂಡಿದ್ದ ಈ ಚಿತ್ರ ಸುಮಾರು 100 ಕೋಟಿ ರೂಗಳಷ್ಟನ್ನು ಗಳಕೆ ಮಾಡಿತ್ತು. ಕ್ರೈಂ, ಡ್ರಾಮಾ ಮಾದರಿಯ ಈ ಚಿತ್ರ ವಿವಾದವನ್ನೂ ಸೃಷ್ಟಿಸಿತ್ತು.

ಕಿರುತೆರೆಯ ವಿಚಾರಕ್ಕೆ ಬಂದರೆ ಏಕ್ತಾ ಕಪೂರ್ ಪ್ರಸಿದ್ಧ ‘ನಾಗಿನ್’ ಸರಣಿಯನ್ನು ನಿರ್ಮಿಸಿದವರು. ಇದಲ್ಲದೇ ‘ಪವಿತ್ರಾ ರಿಷ್ತಾ’, ‘ಬಡೆ ಅಚ್ಚೆ ಲಗ್ತೆ ಹೇ’ ಸೇರಿದಂತೆ ಹಲವು ಸೀರಿಯಲ್​ಗಳನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಆಲ್ಟ್​ ಬಾಲಾಜಿಯಲ್ಲಿ ಪ್ರಸಾರವಾದ, ಕಂಗನಾ ರಣಾವತ್ ನಡೆಸಿಕೊಟ್ಟಿದ್ದ ‘ಲಾಕ್​ ಅಪ್’ ಶೋ ಕೂಡ ಸಖತ್ ಸುದ್ದಿಯಾಗಿತ್ತು.

ಇದನ್ನೂ ಓದಿ
ಎರಡು ಶೇಡ್​ ಪಾತ್ರದಲ್ಲಿ ಸಾಯಿ ಪಲ್ಲವಿ; ನಿರೀಕ್ಷೆ ಮೂಡಿಸಿದ ‘ವಿರಾಟ ಪರ್ವಂ’ ಸಿನಿಮಾ
Ashika Ranganatha: ಕ್ಯೂಟ್​ ಫೋಟೋಶೂಟ್​ನಲ್ಲಿ ಮಿಂಚಿದ ಆಶಿಕಾ ರಂಗನಾಥ್
ರಕ್ಷಿತ್ ಶೆಟ್ಟಿಗೆ ಬರ್ತ್​ಡೇ ಗಿಫ್ಟ್​; ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಟೀಸರ್ ರಿಲೀಸ್

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:21 am, Tue, 7 June 22