ಟೊಕಿಯೊ ಒಲಂಪಿಕ್ಸ್ನಲ್ಲಿ ಬೆಳ್ಳಿ ಪದಕದ ಮೂಲಕ ಪದಕ ಪಟ್ಟಿಯಲ್ಲಿ ಭಾರತದ ಖಾತೆ ತೆರೆಯಲು ಕಾರಣವಾಗಿದ್ದ ಮೀರಾ ಬಾಯಿ ಚಾನು ನಟ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಸಲ್ಮಾನ್ ಖಾನ್ ಧರಿಸಿದ್ದ ಶಾಲ್ ಒಂದು ನೆಟ್ಟಿಗರ ಗಮನ ಸೆಳೆದಿದ್ದು, ಅದಕ್ಕಾಗಿ ಸಲ್ಮಾನ್ ಖಾನ್ ಅವರ ಕಾಲೆಳೆದಿದ್ದಾರೆ. ಅಷ್ಟಕ್ಕೂ ಸಲ್ಮಾನ್ ಧರಿಸಿದ ಶಾಲ್ನಲ್ಲಿ ಏನಿತ್ತು ಎಂದು ಕುತೂಹಲ ಮೂಡುತ್ತಿದೆಯೇ? ಮುಂದೆ ಓದಿ.
ಸಲ್ಮಾನ್ ಖಾನ್ ಮಾಡಿರುವ ಟ್ವೀಟ್:
Happy for u silver medalist @mirabai_chanu .. lovely meeting with u … best wishes always! pic.twitter.com/KlrTU01xdv
— Salman Khan (@BeingSalmanKhan) August 11, 2021
ಸಲ್ಮಾನ್ ಅವರನ್ನು ಭೇಟಿಯಾದಾಗ ಮೀರಾಬಾಯಿ ಚಾನು ಉಡುಗೊರೆ ರೂಪದಲ್ಲಿ ಶಾಲೊಂದನ್ನು ನೀಡಿದ್ದಾರೆ. ಅದರಲ್ಲಿನ ಸೂಕ್ಷ್ಮ ಚಿತ್ರಗಳು ನೆಟ್ಟಿಗರ ಗಮನ ಸೆಳೆದಿದ್ದು, ಅದನ್ನು ಕೃಷ್ಣ ಮೃಗವೆಂದು ಭಾವಿಸಿ ಸಲ್ಮಾನ್ ಕಾಲೆಳೆಯುತ್ತಿದ್ದಾರೆ. ಸಲ್ಮಾನ್ ಧರಿಸಿರುವ ಶಾಲಿನ ತುದಿಯಲ್ಲಿ ಏನಿದೆ ನೋಡಿ ಎಂದು ಕೆಲವರು ಹೇಳಿದ್ದರೆ, ಮತ್ತೆ ಕೆಲವರು ಸಲ್ಮಾನ್ ಅವರನ್ನು ಪ್ರಾಂಕ್ ಮಾಡಲಾಗಿದೆ ಎಂದು ಕಾಲೆಳೆದಿದ್ದಾರೆ.
ಸಲ್ಮಾನ್ ಕಾಲೆಳೆದಿರುವ ನೆಟ್ಟಿಗರು:
Salman khan met mirabai_chanu today.. And someone played the black buck prank on him! ??? Look to the bottom of the picture.. pic.twitter.com/F3U34iYzga
— Gautham Vinjamuri (@itzvrc) August 11, 2021
ಸಲ್ಮಾನ್ ಧರಿಸಿರುವ ಶಾಲಿನ ಮೇಲೆಯೇ ಕಣ್ಣು ಹೋಗುತ್ತಿದೆ ಎಂದಿರುವ ಮತ್ತೋರ್ವ ಟ್ವಿಟರ್ ಬಳಕೆದಾರ:
All things aside, can’t get my eyes off the Blackbuck. pic.twitter.com/UwjT23ralX
— Srinwantu Dey (@srinwantudey) August 11, 2021
ಸಲ್ಮಾನ್ ಧರಿಸಿರುವುದು ಕೃಷ್ಣ ಮೃಗವಿರುವ ಶಾಲ್ ಹೌದೇ? ಸತ್ಯಾಸತ್ಯತೆ ಇಲ್ಲಿದೆ:
ಸಲ್ಮಾನ್ ಖಾನ್ ಈ ಮೊದಲು ಕೃಷ್ಣ ಮೃಗದ ಭೇಟೆಯಾಡಿ ಸಿಕ್ಕಿಬಿದ್ದಿದ್ದರು. ಅದಕ್ಕಾಗಿ ನೆಟ್ಟಿಗರು ಅವರ ಕಾಲೆಳೆಯುತ್ತಿದ್ದಾರೆ. ಆದರೆ ವಾಸ್ತವವಾಗಿ ಸಲ್ಮಾನ್ ಧರಿಸಿರುವುದು ಕೃಷ್ಣ ಮೃಗದ ಚಿತ್ರವಿರುವ ಶಾಲ್ ಅಲ್ಲ. ಅದು ಮೀರಾಬಾಯಿ ಉಡುಗೊರೆ ನೀಡಿರುವ ಮಣಿಪುರದಲ್ಲಿ ವಿಶೇಷವಾಗಿ ಕಂಡುಬರುವ ಸಾಂಗೈ ಜಿಂಕೆಯ ಚಿತ್ರ. ಆದರೆ ನೆಟ್ಟಿಗರು ಅದನ್ನು ತಪ್ಪಾಗಿ ಗ್ರಹಿಸಿಕೊಂಡು ಸಲ್ಮಾನ್ ಕಾಲೆಳೆಯುತ್ತಿದ್ದಾರೆ. ಮೀರಾಬಾಯಿ ಸಲ್ಮಾನ್ ಅವರನ್ನು ಭೇಟಿಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದು, ತನ್ನ ಕನಸೊಂದು ನನಸಾಗಿದೆ ಎಂದಿದ್ದಾರೆ.
ಇದನ್ನೂ ಓದಿ:
ಮೀರಾಬಾಯಿ ಚಾನು ಕೇವಲ ಭಾರ ಎತ್ತುವುದರಲ್ಲಿ ಮಾತ್ರ ಚಾಂಪಿಯನ್ ಅಲ್ಲ, ವ್ಯಕ್ತಿತ್ವದಲ್ಲೂ ಈಕೆಯದು ಚಾಂಪಿಯನ್ಗಿರಿ!
‘ಒಮ್ಮೆ ಅವನು ನನ್ನ ಜತೆ ಲಿಮಿಟ್ ಕ್ರಾಸ್ ಮಾಡಿದ್ದ’; ರಹಸ್ಯ ತೆರೆದಿಟ್ಟ ರಾಜ್ ಕುಂದ್ರಾ ನಾದಿನಿ ಶಮಿತಾ ಶೆಟ್ಟಿ
(Fans mistaken that Salman Khan wearing Black Buck design Shawl when he is posing with Mirabai Chanu)
Published On - 3:11 pm, Thu, 12 August 21