‘ವದಂತಿ ಸತ್ಯ ಆಗಲ್ಲ’; ಐಶ್ವರ್ಯಾ-ಅಭಿಷೇಕ್ ವಿಚ್ಛೇದನದ ಬಗ್ಗೆ ಕೊನೆಗೂ ಮೌನ ಮುರಿದ ಅಮಿತಾಭ್

ಅಭಿಷೇಕ್ ಬಚ್ಚನ್ ಅವರು ನಿಮ್ರಿತಾ ಕೌರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಅವರು ಐಶ್ವರ್ಯಾ ಜೊತೆ ವಿಚ್ಛೇದನ ಪಡೆದ ವದಂತಿ ಇದೆ. ಇತ್ತೀಚೆಗೆ ಅಭಿಷೇಕ್ ಬಚ್ಚನ್ ಅವರು ಬರ್ತ್​ಡೇ ದಿನ ಐಶ್ವರ್ಯಾಗೆ ವಿಶ್ ಕೂಡ ಮಾಡಿಲ್ಲ. ಈ ವಿಚಾರದಲ್ಲಿ ಅಮಿತಾಭ್ ಪ್ರತಿಕ್ರಿಯೆ ನೀಡಿದ್ದಾರೆ.

‘ವದಂತಿ ಸತ್ಯ ಆಗಲ್ಲ’; ಐಶ್ವರ್ಯಾ-ಅಭಿಷೇಕ್ ವಿಚ್ಛೇದನದ ಬಗ್ಗೆ ಕೊನೆಗೂ ಮೌನ ಮುರಿದ ಅಮಿತಾಭ್
ಐಶ್ವರ್ಯಾ-ಅಭಿಷೇಕ್ ವಿಚ್ಛೇದನದ ಬಗ್ಗೆ ಕೊನೆಗೂ ಮೌನ ಮುರಿದ ಅಮಿತಾಭ್

Updated on: Nov 22, 2024 | 9:07 AM

ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ವಿಚಾರ ಇತ್ತೀಚೆಗೆ ಜೋರಾಗಿದೆ. ಇದಕ್ಕೆ ಕಾರಣ ಹಲವು. ಇತ್ತೀಚೆಗೆ ಐಶ್ವರ್ಯಾ ಬರ್ತ್​ಡೇ ಆಚರಿಸಿಕೊಂಡರು. ಆದರೆ, ಅಭಿಷೇಕ್ ಕಡೆಯಿಂದ ಯಾವುದೇ ವಿಶ್ ಬರಲಿಲ್ಲ. ಈ ವಿಚಾರದಲ್ಲಿ ಕುಟುಂಬದವರು ಮೌನ ವಹಿಸಿದ್ದರು. ಈಗ ಅಮಿತಾಭ್ ಬಚ್ಚನ್ ಅವರು ಈ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ವಿಚ್ಛೇದನ ವಿಚಾರ ಸುಳ್ಳು ಎಂದಿದ್ದಾರೆ.

ಅಮಿತಾಭ್ ಅವರಿಗೆ ಬ್ಲಾಗ್ ಬರೆಯೋ ಹವ್ಯಾಸ ಇದೆ. ಅವರು ಈಗ ಹೊಸ ಬ್ಲಾಗ್ ಬರೆದುಕೊಂಡಿದ್ದಾರೆ. ಇದರಲ್ಲಿ ಅವರು ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ನಾನು ಕುಟುಂಬದ ಬಗ್ಗೆ ಮಾತನಾಡುವುದು ಕಡಿಮೆ. ಏಕೆಂದರೆ ಅದು ಖಾಸಗಿ ವಿಚಾರ. ಊಹಾಪೋಹಗಳು ಯಾವಾಗಲೂ ಊಹಾಪೋಹಗಳೇ. ಪರಿಶೀಲನೆ ಮಾಡದೇ ಇರುವ ವಿಚಾರ ಅಸತ್ಯವೇ’ ಎಂದಿದ್ದಾರೆ ಅವರು.

‘ಈ ರೀತಿಯ ಸುದ್ದಿಗಳಿಂದ ಕೆಲವರಿಗೆ ಲಾಭ ಆಗಬಹುದು. ಆದರೆ, ನನ್ನ ಗಮನ ಕುಟುಂಬದ ಮೇಲೆ ಇರುತ್ತದೆ. ಐಶ್ವರ್ಯಾ ಹಾಗೂ ಅಭಿಷೇಕ ಸಂಸಾರದಲ್ಲಿ ಸಮಸ್ಯೆ ಇದೆಯೇ ಎನ್ನುವ ವಾಕ್ಯವನ್ನು ಪ್ರಶ್ನೆ ಹಾಕಿ ಬರೆಯಲಾಗುತ್ತದೆ’ ಎಂದು ಬೇಸರ ಹೊರಹಾಕಿದ್ದಾರೆ ಅಮಿತಾಭ್.

‘ನಿಮಗೆ ಏನಿಷ್ಟವೋ ಅದನ್ನು ಬರೆದುಕೊಳ್ಳಿ. ನೀವು ಪ್ರಶ್ನಾರ್ಥಕ ಚಿಹ್ನೆ ಹಾಕಿ ಬರೆದಾಗ ನೀವು ಬರೆದಿದ್ದೂ ಪ್ರಶ್ನೆ ಆಗಬಹುದು. ಇದನ್ನು ಅವರು ನಂಬುತ್ತಾರೆ ಮತ್ತು ಅದನ್ನು ವಿಸ್ತರಿಸುತ್ತಾರೆ. ಇದರಿಂದ ನಿಮ್ಮ ಬರವಣಿಗೆಗೆ ಬೆಲೆ ಬರುತ್ತದೆ. ಅಸತ್ಯ ವಿಚಾರಗಳಿಗೆ ಓದುಗ ಪ್ರತಿಕ್ರಿಯೆ ನೀಡುತ್ತಾನೆ ಎಂದರೆ ವಿಚಾರ ಮತ್ತೂ ವಿಸ್ತಾರ ಆಗುತ್ತದೆ. ಇದು ವಿಚಾರದಲ್ಲಿರುವ ವ್ಯಕ್ತಿ ಮೇಲೆ ಪ್ರಭಾವ ಬೀರುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ: ಗವಿಸಿದ್ದೇಶ್ವರ ಜಾತ್ರೆಗೆ ಅಮಿತಾಭ್ ಅತಿಥಿ? ಬಾಲಿವುಡ್ ನಟನಿಗೆ ಆಹ್ವಾನ

ಅಭಿಷೇಕ್ ಬಚ್ಚನ್ ಅವರು ನಿಮ್ರಿತಾ ಕೌರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಅವರು ಐಶ್ವರ್ಯಾ ಜೊತೆ ವಿಚ್ಛೇದನ ಪಡೆದ ವದಂತಿ ಇದೆ. ಇತ್ತೀಚೆಗೆ ಅಭಿಷೇಕ್ ಬಚ್ಚನ್ ಅವರು ಬರ್ತ್​ಡೇ ದಿನ ಐಶ್ವರ್ಯಾಗೆ ವಿಶ್ ಕೂಡ ಮಾಡಿಲ್ಲ. ಈ ಎಲ್ಲಾ ಕಾರಣದಿಂದ ವಿಚ್ಛೇದನ ವಿಚಾರ ಜೋರಾಗಿದೆ. ಈ ವಿಚಾರವಾಗಿ ಅಮಿತಾಭ್ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:54 am, Fri, 22 November 24

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us