ನಟ ಶಾರುಖ್ ಖಾನ್ (Shah Rukh Khan) ಕುಟುಂಬದವರು ವಿವಾದದಿಂದ ದೂರು ಇರಬೇಕು ಎಂದುಕೊಳ್ಳುತ್ತಾರೆ. ಆದರೆ ವಿವಾದಗಳ ಅವರನ್ನು ಹುಡುಕಿಕೊಂಡು ಬರುತ್ತವೆ. ಕಳೆದ ವರ್ಷ ಶಾರುಖ್ ಪುತ್ರ ಆರ್ಯನ್ ಖಾನ್ ಅವರ ಹೆಸರು ಡ್ರಗ್ಸ್ ಪ್ರಕರಣದಲ್ಲಿ ತಳುಕುಹಾಕಿಕೊಂಡಿತ್ತು. ಈ ವರ್ಷ ಆರಂಭದಲ್ಲಿ ‘ಬೇಷರಂ ರಂಗ್..’ ಹಾಡಿನ ಕಾರಣದಿಂದ ಶಾರುಖ್ ಖಾನ್ ಅವರು ವಿವಾದಕ್ಕೆ ಒಳಗಾಗಿದ್ದರು. ಈಗ ಅವರ ಪತ್ನಿ ಗೌರಿ ಖಾನ್ಗೆ ಕಾನೂನಿನ ಸಂಕಷ್ಟ ಎದುರಾಗಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಮೋಸ ಮಾಡಿದ ಆರೋಪ ಅವರ ಮೇಲಿದೆ. ಹಾಗಾಗಿ ಗೌರಿ ಖಾನ್ (Gauri Khan) ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಈ ಕೇಸ್ ಬಗ್ಗೆ ಇಲ್ಲಿದೆ ವಿವರ..
ಶಾರುಖ್ ಖಾನ್ ಕುಟುಂಬದವರು ಹಲವು ಬಿಸ್ನೆಸ್ನಲ್ಲಿ ತೊಡಗಿಕೊಂಡಿದ್ದಾರೆ. ಶಾರುಖ್ ಪತ್ನಿ ಗೌರಿ ಖಾನ್ ಅವರು ಇಂಟೀರಿಯರ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಕೆಲವು ರಿಯಲ್ ಎಸ್ಟೇಟ್ ಕಂಪನಿಗೆ ಅವರು ಬ್ರ್ಯಾಂಡ್ ಅಂಬಾಸಡರ್ ಆಗಿದ್ದಾರೆ. ಅವರು ಪ್ರಚಾರ ರಾಯಭಾರಿ ಆಗಿರುವ ಕಂಪನಿಯೊಂದರಿಂದ ತಮಗೆ ಮೋಸ ಆಗಿದೆ ಎಂದು ಗ್ರಾಹಕರೊಬ್ಬರು ಕೇಸ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಶಾರುಖ್ ಪತ್ನಿ ಎಂಬ ಕಾರಣಕ್ಕೆ ಗೌರಿ ಖಾನ್ಗೆ ಆದ ನಷ್ಟಗಳೇನು? ಎಲ್ಲವನ್ನೂ ವಿವರಿಸಿದ ಸ್ಟಾರ್ ಹೀರೋ ಪತ್ನಿ
ಮುಂಬೈ ನಿವಾಸಿ ಜಶ್ವಂತ್ ಷಾ ಎಂಬುವವರು ಗೌರಿ ಖಾನ್ ವಿರುದ್ಧ ದೂರು ನೀಡಿದ್ದಾರೆ. ಖಾಸಗಿ ರಿಯಲ್ ಎಸ್ಟೇಟ್ ಕಂಪನಿಯೊಂದರ ಮೂಲಕ ಜಶ್ವಂತ್ ಅವರು ಫ್ಲಾಟ್ ಖರೀದಿಸಿದ್ದರು. ಅದಕ್ಕಾಗಿ ಅವರು 86 ಲಕ್ಷ ರೂಪಾಯಿ ಪಾವತಿಸಿದ್ದರು. ಹಣ ಪಡೆದುಕೊಂಡರೂ ಕೂಡ ಆ ಕಂಪನಿಯವರು ತಮಗೆ ಫ್ಲಾಟ್ ನೀಡಿಲ್ಲ ಎಂದು ಜಶ್ವಂತ್ ಷಾ ಈಗ ಆರೋಪಿಸಿದ್ದಾರೆ. ಗೌರಿ ಖಾನ್ ಅವರು ಬ್ರ್ಯಾಂಡ್ ಅಂಬಾಸಡರ್ ಆಗಿದ್ದರಿಂದಲೇ ತಾವು ಆ ಫ್ಲಾಟ್ ಖರೀದಿಸಿದ್ದು ಎಂದು ಜಶ್ವಂತ್ ಷಾ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಶಾರುಖ್ ಪತ್ನಿ ಗೌರಿ ಖಾನ್ಗೂ ಅಂಟಿತ್ತು ಗಾಂಜಾ ಕಳಂಕ; ಏರ್ಪೋರ್ಟ್ನಲ್ಲಿ ನಡೆದ ಆ ಘಟನೆ ನಿಜವೇ?
ಶಾರುಖ್ ಖಾನ್ ಅವರಿಗೆ ಬಹುವರ್ಷಗಳ ಬಳಿಕ ಗೆಲುವು ಸಿಕ್ಕಿದೆ. ಅವರು ನಟಿಸಿದ ‘ಪಠಾಣ್’ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಆ ಗೆಲುವನ್ನು ಶಾರುಖ್ ಕುಟುಂಬದವರು ಎಂಜಾಯ್ ಮಾಡುತ್ತಿದ್ದಾರೆ. ಅದರ ನಡುವೆ ಈ ಚೀಟಿಂಗ್ ಕೇಸ್ ತಲೆಬಿಸಿ ಶುರುವಾಗಿದೆ. ಐಪಿಸಿ ಸೆಕ್ಷನ್ 409 ಅಡಿಯಲ್ಲಿ ಗೌರಿ ಖಾನ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಗೌರಿ ಖಾನ್ ಅವರು ಒಳಾಂಗಣ ವಿನ್ಯಾಸಕಿ ಆಗಿ ಸಾಕಷ್ಟು ಬೇಡಿಕೆ ಹೊಂದಿದ್ದಾರೆ. ಅನೇಕ ಸೆಲೆಬ್ರಿಟಿಗಳ ಮನೆ ಮತ್ತು ಕಚೇರಿಯ ಇಂಟೀರಿಯರ್ ಡಿಸೈನ್ ಮಾಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಅದರ ನಡುವೆ ಅವರು ಕೆಲವು ಕಿರಿಕ್ಗಳನ್ನು ಎದುರಿಸುವಂತಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.