ವೇದಿಕೆಯ ಮೇಲೆ ಗಳಗಳನೆ ಅತ್ತ ಜೆನಿಲಿಯಾ ಡಿಸೋಜಾ; ಕಾರಣ ಏನು?

ನಟಿ ಜೆನಿಲಿಯಾ ಡಿಸೋಜಾ ‘ರಾಜ ಶಿವಾಜಿ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ವೇದಿಕೆ ಮೇಲೆ ಕಣ್ಣೀರಿಟ್ಟಿದ್ದಾರೆ. ಪತಿ ರಿತೇಶ್ ದೇಶ್‌ಮುಖ್ ತಮ್ಮ ಕನಸಿನ ಯೋಜನೆಯ ಬಗ್ಗೆ ಮಾತನಾಡುತ್ತಾ ಭಾವುಕರಾದಾಗ, ಜೆನಿಲಿಯಾ ಕೂಡಾ ಕಣ್ಣೀರು ತಡೆಯಲಾಗದೆ ಅತ್ತರು. ರಿತೇಶ್ ನಿರ್ದೇಶಿಸಿ, ನಟಿಸಿರುವ 'ರಾಜ ಶಿವಾಜಿ' ಮೇ 1ಕ್ಕೆ ತೆರೆ ಕಾಣಲಿದೆ.

ವೇದಿಕೆಯ ಮೇಲೆ ಗಳಗಳನೆ ಅತ್ತ ಜೆನಿಲಿಯಾ ಡಿಸೋಜಾ; ಕಾರಣ ಏನು?
ಜೆನಿಲಿಯಾ

Updated on: Apr 22, 2026 | 7:13 AM

ನಟಿ ಜೆನಿಲಿಯಾ ಪರಿಚಯ ಕನ್ನಡದವರಿಗೂ ಇದೆ. ಅವರು ಪರಭಾಷೆ ನಟಿ ಆದರೂ ಕನ್ನಡದಲ್ಲಿ 2008ರಲ್ಲಿ ರಿಲೀಸ್ ಆದ ‘ಸತ್ಯ ಇನ್ ಲವ್’ ಸಿನಿಮಾದಲ್ಲಿ ಶಿವರಾಜ್​​ಕುಮಾರ್ ಜೊತೆ ತೆರೆ ಹಂಚಿಕೊಂಡರು. ಅವರು ಇತ್ತೀಚೆಗೆ ಕಿರೀಟಿ ನಟನೆಯ ‘ಜೂನಿಯರ್’ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು. ಈಗ ಅವರು ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ. ಇದಕ್ಕೆ ಕಾರಣವೂ ಇದೆ. ಆ ಬಗ್ಗೆ ಇಲ್ಲಿದೆ ವಿವರ.

ಜೆನಿಲಿಯಾ ಪತಿ ರಿತೇಶ್ ದೇಶ್​​ಮುಖ್ ಅವರು ‘ರಾಜ ಶಿವಾಜಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಅವರದ್ದೇ ನಿರ್ದೇಶನ ಕೂಡ ಇದೆ. ಮರಾಠ ಸಾಮ್ರಾಜ್ಯದ ದೊರೆ ಛತ್ರಪತಿ ಶಿವಾಜಿ ಮಹರಾಜ ಅವರ ಜೀವನ ಆಧರಿಸಿ ‘ರಾಜ ಶಿವಾಜಿ’ ಸಿನಿಮಾ ಸಿದ್ಧವಾಗಿದೆ. ಇದರಲ್ಲಿ ರಿತೇಶ್ ಶಿವಾಜಿ ಪಾತ್ರ ಮಾಡಿದ್ದಾರೆ. ಏಪ್ರಿಲ್ 20ರಂದು ಮುಂಬೈನಲ್ಲಿ ಅದ್ದೂರಿ ವೇದಿಕೆ ಮೇಲೆ ಟ್ರೇಲರ್ ಲಾಂಚ್ ನಡೆದಿದೆ. ಈ ವೇಳೆ ರಿತೇಶ್ ಭಾವುಕರಾದರು.

‘ರಾಜ ಶಿವಾಜಿ’ ಸಿನಿಮಾ ರಿತೇಶ್ ಅವರ ಕನಸಿನ ಪ್ರಾಜೆಕ್ಟ್. ಈ ಚಿತ್ರಕ್ಕಾಗಿ ಅವರು ಸಾಕಷ್ಟು ಶ್ರಮ ಹಾಕಿದ್ದಾರೆ. ಈ ಜರ್ನಿಯಲ್ಲಿ ಬೆಂಬಲವಾಗಿ ನಿಂತ ಎಲ್ಲರಿಗೂ ರಿತೇಶ್ ಧನ್ಯವಾದ ಹೇಳಿದ್ದಾರೆ. ಅವರು ಎಲ್ಲರಿಗೂ ಥ್ಯಾಂಕ್ಸ್ ಹೇಳುತ್ತಾ ಭಾವುಕರಾದರು. ಅವರಿಗೆ ಕಣ್ಣೀರು ತಡೆಯಲಾಗಲಿಲ್ಲ. ಅವರ ಪಕ್ಕದಲ್ಲೇ ಇದ್ದ ಜೆನಿಲಿಯಾ ಅವರು ರಿತೇಶ್ ಅಳುವುದನ್ನು ನೋಡಿ ಕಣ್ಣೀರು ಹಾಕಿದರು. ಅವರಿಗೂ ಕಣ್ಣೀರು ತಡೆಯಲು ಸಾಧ್ಯವೇ ಆಗಿಲ್ಲ. ಈ ಭಾವುಕ ಕ್ಷಣ ನೋಡಿ ಸಂಜಯ್ ದತ್ ಕಣ್ಣುಗಳು ತುಂಬಿ ಬಂದವು. ಸದಾ ಬೆಂಬಲವಾಗಿ ನಿಂತ ಜೆನಿಲಿಯಾ ಅವರಿಗೆ ಧನ್ಯವಾದ ಹೇಳುವುದನ್ನು ರಿತೇಶ್ ಮರೆತಿಲ್ಲ.

ಇದನ್ನೂ ಓದಿ: ‘ರಾಜ ಶಿವಾಜಿ ಪಾತ್ರಕ್ಕೆ ರಿತೇಶ್ ದೇಶ್‌ಮುಖ್ ಸೂಕ್ತವಲ್ಲ’: ನೆಟ್ಟಿಗರಿಂದ ಟ್ರೋಲ್ ಆದ ನಟ

‘ರಾಜ ಶಿವಾಜಿ’ ಚಿತ್ರವನ್ನು ಮುಂಬೈ ಫಿಲ್ಮ್ ಕಂಪನಿ ನಿರ್ಮಾಣ ಮಾಡಿದೆ. ಈ ಚಿತ್ರವನ್ನು ಜಿಯೋ ಸ್ಟುಡಿಯೋಸ್ ಪ್ರೆಸೆಂಟ್ ಮಾಡುತ್ತಿದೆ. ಅಜಯ್ ಹಾಗೂ ಅತುಲ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದೆ. ಈ ಸಿನಿಮಾ ಕಾರ್ಮಿಕ ದಿನಾಚರಣೆ ಪ್ರಯುಕ್ತ ಮೇ 1ರಂದು ರಿಲೀಸ್ ಆಗುತ್ತಿದೆ. ಹಿಂದಿ ಜೊತೆಗೆ ಮರಾಠಿಯಲ್ಲೂ ಸಿನಿಮಾ ಸಿದ್ಧವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us