ಮಗಳ ವಯಸ್ಸಿನ ನಟಿ ಜೊತೆ ಗೋವಿಂದ ಸುತ್ತಾಟ; ಕೆಂಡಾಮಂಡಲ ಆದ ಪತ್ನಿ ಸುನೀತಾ

ಬಾಲಿವುಡ್ ನಟ ಗೋವಿಂದ ಅವರ ಸಂಸಾರದಲ್ಲಿ ಮೊದಲಿನಿಂದಲೂ ಜಗಳ ನಡೆಯುತ್ತಿದೆ. ಈಗ ಗೋವಿಂದ ಪತ್ನಿ ಸುನೀತಾ ಅವರು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಮಗಳ ವಯಸ್ಸಿನ ಯುವತಿ ಜೊತೆ ಗೋವಿಂದ ಸುತ್ತಾಡುತ್ತಿರುವುದನ್ನು ಕಂಡು ಸುನೀತಾ ಅವರು ಕಟುವಾಗಿ ಟೀಕಿಸಿದ್ದಾರೆ. ಅವರ ವಿಡಿಯೋ ವೈರಲ್ ಆಗಿದೆ.

ಮಗಳ ವಯಸ್ಸಿನ ನಟಿ ಜೊತೆ ಗೋವಿಂದ ಸುತ್ತಾಟ; ಕೆಂಡಾಮಂಡಲ ಆದ ಪತ್ನಿ ಸುನೀತಾ
Govinda, Komal Rani, Sunita Ahuja

Updated on: Aug 14, 2026 | 9:42 PM

ಒಂದು ಕಾಲದಲ್ಲಿ ಸ್ಟಾರ್ ಹೀರೋ ಆಗಿದ್ದ ನಟ ಗೋವಿಂದ (Govinda) ಹಾಗೂ ಅವರ ಪತ್ನಿ ಸುನೀತಾ ಅಹುಜಾ (Sunita Ahuja) ನಡುವಿನ ವೈಯಕ್ತಿಕ ಸಂಘರ್ಷ ಮತ್ತೊಮ್ಮೆ ಸಾರ್ವಜನಿಕವಾಗಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಇತ್ತೀಚೆಗೆ ನಟಿ ಕೋಮಲ್ ರಾಣಿ (Komal Rani) ಜೊತೆಗೆ ಗೋವಿಂದ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ, ಪತ್ನಿ ಸುನೀತಾ ಅವರು ತಮ್ಮ ಪತಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸುನೀತಾ, ‘ತನ್ನ ಮಗಳ ವಯಸ್ಸಿನ ಹುಡುಗಿಯನ್ನು ಜೊತೆಯಲ್ಲಿ ಕರೆದುಕೊಂಡು ತಿರುಗಾಡಲು ಅವನಿಗೆ ಕನಿಷ್ಠ ನಾಚಿಕೆಯಾಗಬೇಕು’ ಎಂದು ಗೋವಿಂದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅವರು ಈ ರೀತಿ ಹೇಳಿಕೆ ನೀಡುವ ಮೂಲಕ ಗೋವಿಂದ ಮೇಲೆ ತಮಗೆ ಇರುವ ಅಸಮಾಧಾನವನ್ನು ಹೊರಹಾಕಿದ್ದಾರೆ.

ಕೋಮಲ್ ರಾಣಿ ವಿರುದ್ಧ ಸುನೀತಾ ವ್ಯಂಗ್ಯ:

ಗೋವಿಂದ ಅವರು ತಮ್ಮ ಮುಂಬರುವ ‘ರೂಪಾ’ ಸಿನಿಮಾದ ಪ್ರಚಾರದಲ್ಲಿ ಕೋಮಲ್ ರಾಣಿ ಜೊತೆ ಸಕ್ರಿಯರಾಗಿರುವುದರ ಕುರಿತು ಪಾಪಾರಾಜಿಗಳು ಪ್ರಶ್ನಿಸಿದಾಗ, ಸುನೀತಾ ತೀವ್ರವಾಗಿ ವ್ಯಂಗ್ಯವಾಡಿದ್ದಾರೆ. ‘ಮೊದಲನೆಯದಾಗಿ ಸಿನಿಮಾ ಪೂರ್ಣಗೊಳ್ಳಬೇಕು, ಪ್ರಚಾರವೆಲ್ಲ ಸಿನಿಮಾ ಮುಗಿದ ನಂತರ ಅಲ್ಲವೇ? ಆದರೆ ಇಲ್ಲಿ ಸಿನಿಮಾ ಪೂರ್ಣಗೊಳ್ಳುವ ಮುನ್ನವೇ ಪ್ರಚಾರ ನಡೆಯುತ್ತಿದೆ’ ಎಂದು ಲೇವಡಿ ಮಾಡಿದ್ದಾರೆ.

ವಿನಾಶ ಕಾಲೇ ವಿಪರೀತ ಬುದ್ಧಿ:

ಇಷ್ಟಕ್ಕೇ ನಿಲ್ಲಿಸದ ಅವರು ಕೋಮಲ್ ರಾಣಿಯನ್ನು ಉದ್ದೇಶಿಸಿ, ‘ನಿಮ್ಮ ಶುಗರ್ ಡ್ಯಾಡಿ ಅಷ್ಟೊಂದು ಶ್ರೀಮಂತನಾಗಿದ್ದರೆ, ಮೊದಲು ಸರಿಯಾದ ಬಟ್ಟೆ ಧರಿಸುವುದನ್ನು ಕಲಿಯಿರಿ. ನಮ್ಮ ಶೈಲಿಯನ್ನು ನೋಡಿ ಕಲಿಯಿರಿ’ ಎಂದು ತಿರುಗೇಟು ನೀಡಿದ್ದಾರೆ. ಗೋವಿಂದ ಅವರ ನಡವಳಿಕೆಯನ್ನು ಖಂಡಿಸಿದ ಸುನೀತಾ, ‘ವಿನಾಶ ಕಾಲೇ ವಿಪರೀತ ಬುದ್ಧಿ ಎಂಬ ನಾಣ್ಣುಡಿಯನ್ನು ನೀವು ಕೇಳಿರಬಹುದು. ಅವನ ಬುದ್ಧಿ ಭ್ರಷ್ಟವಾಗಿದೆ. ಅದಕ್ಕಾಗಿಯೇ ಇಂತಹ ಕೆಲಸಗಳನ್ನು ಮಾಡುತ್ತಿದ್ದಾನೆ’ ಎಂದಿದ್ದಾರೆ.

ಇದನ್ನೂ ಓದಿ: ‘ನನ್ನ ಗೋವಿಂದ ಮಧ್ಯೆ ಏನು ಇರಲಿಲ್ಲ’; ಸ್ಪಷ್ಟನೆ ಕೊಟ್ಟ ನಟಿ

ಜನರು ಗೋವಿಂದ ಅವರನ್ನು ‘ಚೀಟರ್ ನಂಬರ್ ಒನ್’ ಎಂದು ಕರೆಯುತ್ತಿರುವ ಬಗ್ಗೆ ಕೇಳಿದಾಗ, ‘ನಾನು ಗೋವಿಂದ ಅವರ ಅಫೇರ್ ಕುರಿತು ಮಾತನಾಡಿದಾಗ ಅವರ ಅಭಿಮಾನಿಗಳು ನನ್ನನ್ನೇ ಟ್ರೋಲ್ ಮಾಡುತ್ತಿದ್ದರು. ಈಗ ನಾನು ಗೋವಿಂದ ಅವರ ಅಭಿಮಾನಿಗಳು ಹಾಗೂ ಮಾಧ್ಯಮಗಳನ್ನು ಕೇಳಲು ಬಯಸುತ್ತೇನೆ, ನಿಮ್ಮ ಬಳಿ ಈಗ ಏನು ಉತ್ತರವಿದೆ? ನನ್ನನ್ನು ಏನೂ ಕೇಳಬೇಡಿ, ನನಗೆ ಇದರಲ್ಲಿ ಯಾವುದೇ ಆಸಕ್ತಿಯಿಲ್ಲ’ ಎಂದು ನೇರವಾಗಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us