
ಬಾಲಿವುಡ್ ನಟ ಗೋವಿಂದ ಹಾಗೂ ಅವರ ಪತ್ನಿ ಸುನಿತಾ ಅಹುಜಾ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಆರು ತಿಂಗಳ ಹಿಂದೆ ಡಿವೋರ್ಸ್ ನೋಟಿಸ್ನ ಸುನಿತಾ ಕಳುಹಿಸಿದ್ದರು ಎನ್ನಲಾಗಿದೆ. ಈಗ ಈ ವಿಚಾರದಲ್ಲಿ ಇಬ್ಬರೂ ತಮ್ಮ ಕಡೆಯಿಂದ ಸ್ಪಷ್ಟನೆ ನೀಡುತ್ತಿದ್ದಾರೆ. ಈಗ ಸುನಿತಾ ಅವರ ವಿಡಿಯೋ ಒಂದು ವೈರಲ್ ಆಗಿದೆ. ಅವರು 12 ವರ್ಷಗಳಿಂದ ಗೋವಿಂದ ಅವರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿತ್ತು. ಈ ವಿಡಿಯೋದಲ್ಲಿ ಸ್ಪಷ್ಟನೆ ನೀಡಿದ್ದು, ವಿಚ್ಛೇದನದ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
‘ಗೋವಿಂದ ಹಾಗೂ ನಾನು ಕಳೆದ 12 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ನಾನು 12 ವರ್ಷಗಳಿಂದ ಒಬ್ಬಳೇ ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದೇನೆ’ ಎಂದು ಸುನಿತಾ ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿತ್ತು. ಆದರೆ, ವಿಚ್ಛೇದನದ ಮಾತೇ ಇಲ್ಲ ಎಂದು ಸುನಿತಾ ಅಹುಜಾ ಅವರು ಸ್ಪಷ್ಟಪಡಿಸಿದ್ದಾರೆ.
‘ನಾವು ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ಇದಕ್ಕೆ ಕಾರಣವೂ ಇದೆ. ಗೋವಿಂದ ಅವರು ರಾಜಕೀಯ ಸೇರುವಾಗ ನಮ್ಮ ಮಗಳು ದೊಡ್ಡವಳಾಗುತ್ತಿದ್ದಳು. ನಮ್ಮ ಮನೆಗೆ ಪಕ್ಷದ ಕಾರ್ಯಕರ್ತರು ಆಗಾಗ ಭೇಟಿ ಕೊಡುತ್ತಾ ಇದ್ದರು. ನಾವು ಮನೆಯಲ್ಲಿ ಶಾರ್ಟ್ಸ್ ಹಾಕಿಕೊಂಡು ಓಡಾಡುತ್ತೇವೆ. ಇದಕ್ಕೆ ಸ್ವಲ್ಪ ಅಡ್ಡಿ ಆಯಿತು. ಹೀಗಾಗಿ ಮನೆಯ ಸಮೀಪ ಒಂದು ಕಚೇರಿ ಮಾಡಿದೆವು. ನನ್ನ ಹಾಗೂ ಗೋವಿಂದ ಅವರನ್ನು ಪ್ರತ್ಯೇಕ ಮಾಡಲು ಯಾರಿಗಾದರೂ ಧೈರ್ಯ ಇದ್ದರೆ ಅವರು ಮುಂದೆ ಬರಲಿ’ ಎಂದು ಅವರು ಚಾಲೆಂಜ್ ಮಾಡಿದ್ದಾರೆ.
ಇದನ್ನೂ ಓದಿ: 37 ವರ್ಷ ಸಂಸಾರ ಮಾಡಿ ಈಗ ವಿಚ್ಛೇದನ ಪಡೆಯಲು ಮುಂದಾದ ನಟ ಗೋವಿಂದ?
ಗೋವಿಂದ ಹಾಗೂ ಸುನಿತಾ 1987ರಲ್ಲಿ ವಿವಾಹ ಆದರು. ಟೀನಾ 1988ರಲ್ಲಿ ಜನಿಸಿದರು. ಈ ದಂಪತಿಗೆ ಯಶ್ವರ್ಧನ್ ಹೆಸರಿನ ಮಗ ಇದ್ದಾನೆ. ಗೋವಿಂದ ಅವರು ಸೋಶಿಯಲ್ ಮೀಡಿಯಾದಲ್ಲಿ ಕುಟುಂಬದ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಗೋವಿಂದ ಅವರು ನಟಿಯ ಜೊತೆ ರಿಲೇಶನ್ಶಿಪ್ ಹೊಂದಿದ್ದಾರೆ ಎಂದು ವರದಿ ಆಗಿತ್ತು. ಆದರೆ, ಈ ವಿಚಾರ ಇನ್ನೂ ಅಧಿಕೃತ ಆಗಿಲ್ಲ. ಇದನ್ನು ಎಲ್ಲರೂ ಅಲ್ಲಗಳೆಯುತ್ತಲೇ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.