ವಿವಾದಿತ ಯೂಟ್ಯೂಬರ್ ಜೊತೆ ಸುತ್ತಾಟ ಆರಂಭಿಸಿದ ಹಾರ್ದಿಕ್ ಮಾಜಿ ಪತ್ನಿ ನತಾಶಾ

|

Updated on: Oct 12, 2024 | 10:52 AM

ನತಾಶಾ ಅವರು ಸೈಬೀರಿಯಾದವರು. ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಜೊತೆಗಿನ ವಿಚ್ಛೇದನದ ಬಳಿಕ ಅವರು ಮರಳಿ ಸೈಬೀರಿಯಾಗೆ ತೆರಳಿದ್ದಾಗಿ ವರದಿ ಆಗಿತ್ತು. ಈಗ ಅವರು ಮರಳಿ ಮುಂಬೈಗೆ ಬಂದಿದ್ದು, ಎಲ್ವಿಶ್ ಯಾದವ್ ಜೊತೆಯಲ್ಲಿ ಸುತ್ತಾಟ ಆರಂಭಿಸಿದ್ದಾರೆ.

ವಿವಾದಿತ ಯೂಟ್ಯೂಬರ್ ಜೊತೆ ಸುತ್ತಾಟ ಆರಂಭಿಸಿದ ಹಾರ್ದಿಕ್ ಮಾಜಿ ಪತ್ನಿ ನತಾಶಾ
ನತಾಶಾ-ಎಲ್ವಿಶ್ ಯಾದವ್
Follow us on

ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಇತ್ತೀಚೆಗೆ ವಿಚ್ಛೇದನ ಪಡೆದು ಸುದ್ದಿ ಆಗಿದ್ದರು. ಈಗ ಅವರ ಹೆಸರು ಮತ್ತೆ ಚರ್ಚೆಗೆ ಬಂದಿದೆ. ನತಾಶಾ ಅವರು ಯೂಟ್ಯೂಬರ್ ಹಾಗೂ ಬಿಗ್ ಬಾಸ್ ಒಟಿಟಿ ವಿನ್ನರ್ ಎಲ್ವಿಶ್ ಯಾದವ್ ಜೊತೆ ಸುತ್ತಾಟ ನಡೆಸಿದ್ದಾರೆ. ಅವರ ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ.

ನತಾಶಾ ಅವರು ಸೈಬೀರಿಯಾದವರು. ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಜೊತೆಗಿನ ವಿಚ್ಛೇದನದ ಬಳಿಕ ಅವರು ಮರಳಿ ಸೈಬೀರಿಯಾಗೆ ತೆರಳಿದ್ದಾಗಿ ವರದಿ ಆಗಿತ್ತು. ಈಗ ಅವರು ಮರಳಿ ಮುಂಬೈಗೆ ಬಂದಿದ್ದು, ಎಲ್ವಿಶ್ ಯಾದವ್ ಜೊತೆಯಲ್ಲಿ ಸುತ್ತಾಟ ಆರಂಭಿಸಿದ್ದಾರೆ. ಇಬ್ಬರ ಮಧ್ಯೆ ಏನಾದರೂ ನಡೆಯುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಎಲ್ವಿಶ್ ಹಾಗೂ ನತಾಶಾ ಮುಂಬೈನ ಹೋಟೆಲ್ ಎದುರಲ್ಲಿ ಕಾರಿನಿಂದ ಹೊರ ಬರುತ್ತಿರುವ ವಿಡಿಯೋ ಇದೆ. ಅವರು ಒಂದೇ ಕಾರಿನಲ್ಲಿ ಆಗಮಿಸಿದ್ದಾರೆ ಎನ್ನಲಾಗಿದೆ. ಇಬ್ಬರೂ ಬೇರೆ ಬೇರೆ ಆಗಿ ಹೋಗುವ ಪ್ರಯತ್ನ ಮಾಡಿದರು. ಒಂದು ಹಂತದಲ್ಲಿ ಎಲ್ವಿಶ್ ಅವರು ಹಿಂದಿರುಗಿ ನೋಡಿ, ನತಾಶಾ ತಮ್ಮನ್ನು ಫಾಲೋ ಮಾಡುತ್ತಿದ್ದಾರೋ ಅಥವಾ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಂಡರು.

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವಿಡಿಯೋ ಬಗ್ಗೆ ಹಾರ್ದಿಕ್ ಪಾಂಡ್ಯ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಸಮಾಜದಲ್ಲಿ ಎಲ್ವಿಶ್ ಯಾದವ್​ಗೆ ಒಳ್ಳೆಯ ಹೆಸರು ಇಲ್ಲ. ಅವರು ಹಾವಿನ ವಿಷ ಸಂಗ್ರಹಿಸಿದ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದರು. ಅಲ್ಲದೆ, ಅವರ ಮೇಲೆ ಹಲ್ಲೆ ಮಾಡಿದ ಆರೋಪವೂ ಇದೆ.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಸ್ವಾರ್ಥ ಗುಣದಿಂದ ಬೇಸತ್ತು ವಿಚ್ಛೇದನ ನೀಡಿದ್ರಾ ನತಾಶಾ?

ಎಲ್ವಿಶ್ ಹಾಗೂ ನತಾಶಾ ಡೇಟಿಂಗ್ ಆರಂಭಿಸಿದರೇ ಅಥವಾ ಇದೊಂದು ಗೆಳೆತನದ ಭೇಟಿಯೇ ಎನ್ನುವ ಪ್ರಶ್ನೆ ಮೂಡಿದೆ. ವಿಚ್ಛೇದನದ ಬಳಿಕ ಸೆಲೆಬ್ರಿಟಿಗಳು ಮತ್ತೊಬ್ಬರ ಜೊತೆ ಡೇಟ್ ಮಾಡೋದು ಹೊಸದೇನು ಅಲ್ಲ. ಇದು ಅದೇ ರೀತಿಯೇ ಇರಬಹುದು ಎಂದು ಕೆಲವರು ಊಹಿಸಿದ್ದಾರೆ. ‘ಮೇಡ್ ಫಾರ್ ಈಚ್ ಒದರ್’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ‘ಚೀಟರ್’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಇಬ್ಬರೂ ಒಟ್ಟಾಗಿ ಹಾಡನ್ನು ಪ್ರಮೋಷನ್ ಮಾಡಲು ಇವರು ಒಂದಾಗಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.