ಹಾರ್ದಿಕ್ ಪಾಂಡ್ಯ ಸ್ವಾರ್ಥ ಗುಣದಿಂದ ಬೇಸತ್ತು ವಿಚ್ಛೇದನ ನೀಡಿದ್ರಾ ನತಾಶಾ?
Hardik Pandya: ಹಾರ್ದಿಕ್ ಪಾಂಡ್ಯಾ ಮತ್ತು ನತಾಶಾ ಸ್ಟಾಂಕೊವಿಕ್ ಪರಸ್ಪರ ದೂರಾಗಿದ್ದಾರೆ. ಅಂದಹಾಗೆ ನತಾಶಾ, ಹಾರ್ದಿಕ್ಗೆ ವಿಚ್ಛೇದನ ನೀಡಲು ಕಾರಣವೇನು?
ಹಾರ್ದಿಕ್ ಪಾಂಡ್ಯಾ ಹಾಗೂ ನತಾಶಾ ಮದುವೆ ಆದಾಗಿನಿಂದಲೂ ಸುದ್ದಿಯಲ್ಲಿ ಇದ್ದಾರೆ. ಮಗು ಹೊಂದಿದ ಬಳಿಕ ಇವರು ಮದುವೆ ಆಗುವ ನಿರ್ಧಾರ ತೆಗೆದುಕೊಂಡಿದ್ದರು. ಈಗ ಇಬ್ಬರೂ ಬೇರೆ ಆಗಿದ್ದಾರೆ. ಇವರು ಬೇರೆ ಆಗಿದ್ದು ಏಕೆ ಎನ್ನುವ ಪ್ರಶ್ನೆ ಅನೇಕರಿಗೆ ಇತ್ತು. ಇದಕ್ಕೆ ಉತ್ತರ ಸಿಕ್ಕಿದೆ. ಹಾರ್ದಿಕ್ ಪಾಂಡ್ಯ ಅವರ ಸ್ವಾರ್ಥ ತನವೇ ಇವರು ಬೇರೆ ಆಗಲು ಕಾರಣ ಎಂದು ಹೇಳಲಾಗುತ್ತಿದೆ. ಸದ್ಯ ಈ ಬಗ್ಗೆ ಕೆಲವು ಕಡೆಗಳಲ್ಲಿ ವರದಿಗಳು ಹರಿದಾಡಿವೆ. ಆದರೆ, ದಂಪತಿ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ನತಾಶಾ ಹಾಗೂ ಹಾರ್ದಿಕ್ ನಾಲ್ಕು ವರ್ಷಗಳ ಕಾಲ ಒಟ್ಟಿಗೆ ಇದ್ದರು. ಇವರಿಗೆ ಅಗಸ್ತ್ಯ ಹೆಸರಿನ ಮಗ ಕೂಡ ಇದ್ದಾನೆ. ಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ನತಾಶಾ ತೆಗೆದುಕೊಂಡಿದ್ದಾರೆ. ಈಗ ಅವರು ತಮ್ಮ ಹುಟ್ಟೂರಾದ ಸೈಬೀರಿಯಾಗೆ ತೆರಳಿದ್ದಾರೆ. ಈ ಮಧ್ಯೆ ಇವರ ವಿಚ್ಛೇದನಕ್ಕೆ ಕಾರಣ ಏನು ಎನ್ನುವ ಕುರಿತು ಚರ್ಚೆಗಳು ನಡೆಯುತ್ತಿವೆ.
ಹಾರ್ದಿಕ್ ಪಾಂಡ್ಯ ಯಾವಾಗಲೂ ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಿದ್ದರು. ಹಾರ್ದಿಕ್ ನಡೆದುಕೊಳ್ಳುತ್ತಿದ್ದನ್ನು ತಡೆದುಕೊಳ್ಳಲು ನತಾಶಾಗೆ ಸಾಧ್ಯವೇ ಆಗುತ್ತಿರಲಿಲ್ಲವಂತೆ. ಇಬ್ಬರ ಮಧ್ಯೆ ಸಾಕಷ್ಟು ಗ್ಯಾಪ್ ಇದೆ ಎಂಬುದು ಅವರ ಅರಿವಿಗೆ ಬಂದಿತ್ತು. ಹಾರ್ದಿಕ್ ಜೊತೆ ಹೊಂದಿಕೆ ಮಾಡಿಕೊಂಡು ಹೋಗಲು ಅವರು ಪ್ರಯತ್ನಿಸಿದ್ದರು. ಆದರೆ, ಸಾಧ್ಯವಾಗಿಲ್ಲ. ಒಂದು ಹಂತಕ್ಕೆ ಹೋದ ಬಳಿಕ ನತಾಶಾ ಎಲ್ಲವನ್ನೂ ಬಿಟ್ಟು ಸಾಗಲು ನಿರ್ಧರಿಸಿದರಂತೆ.
ಇದನ್ನೂ ಓದಿ:ಹಾರ್ದಿಕ್ ಜೊತೆ ಡೇಟಿಂಗ್ ಆರಂಭಿಸಿದ ಈ ಯುವತಿ ಯಾರು?
ಮದುವೆ ಆಗಿ ನಂತರ ಗಂಡನ ತೊರೆಯೋದು ದೊಡ್ಡ ನಿರ್ಧಾರ. ಇದಕ್ಕೂ ಮೊದಲು ಸಾಕಷ್ಟು ಯೋಚನೆ ಮಾಡಬೇಕಾಗುತ್ತದೆ. ಆ ಯೋಚನೆಯನ್ನು ನತಾಶಾ ಯೋಚಿಸಿ ತೆಗೆದುಕೊಂಡಿದ್ದಾರಂತೆ. ಒಮ್ಮೆ ತೆಗೆದುಕೊಂಡ ನಿರ್ಧಾರದಿಂದ ಹಿಂದೆ ಸರಿಯದೇ ಇರಲು ಅವರು ನಿರ್ಧರಿಸಿದರು. ನತಾಶಾಗೆ ಇದು ತುಂಬಾನೇ ನೋವು ನೀಡಿತ್ತು ಎನ್ನಲಾಗಿದೆ. ಯಾವಾಗಲೂ ದುಃಖದಲ್ಲಿ ಇರುವುದಕ್ಕಿಂತ ಬೇರೆ ಆಗೋದೇ ಉತ್ತಮ ಎಂದು ಅವರು ನಿರ್ಧರಿಸಿದ್ದರು.
ನತಾಶಾ ಹಾಗೂ ಹಾರ್ದಿಕ್ ಮೇ 2020ರಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡರು. 2023ರ ಫೆಬ್ರವರಿಯಲ್ಲಿ ಹಿಂದೂ ಹಾಗೂ ಕ್ರೈಸ್ತ ಸಮುದಾಯದ ರೀತಿ ಮದುವೆ ಆದರು. ಈ ವರ್ಷ ಜುಲೈನಲ್ಲಿ ಬೇರೆ ಆಗುವ ನಿರ್ಧಾರ ತೆಗೆದುಕೊಂಡರು. ಸದ್ಯ ಹಾರ್ದಿಕ್ ಟೀಂ ಇಂಡಿಯಾ ಪರ ಆಟ ಆಡುತ್ತಿದ್ದಾರೆ. ನತಾಶಾ ಅವರು ಭಾರತದ ಕೆಲ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಅವರು ಮಾಡೆಲ್ ಕೂಡ ಹೌದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:11 pm, Sat, 24 August 24