Hema Malini: ‘ಸೀರೆಯ ಸೆರಗು ಜಾರಿ ಬೀಳಿಸುವ ಆಲೋಚನೆಯಲ್ಲಿ ಆ ನಿರ್ದೇಶಕ ಇದ್ದ’; ಹೇಮಾ ಮಾಲಿನಿ

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹೆಚ್ಚಿದೆ ಎನ್ನುವ ಆರೋಪ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಇದರ ಜೊತೆಗೆ ಖಾಸಗಿ ಭಾಗ ತೋರಿಸುವಂತೆ ನಿರ್ದೇಶಕರು ಒತ್ತಾಯ ಹೇರಿದರು ಎಂಬ ಆರೋಪವನ್ನೂ ಕೆಲವರು ಮಾಡಿದ್ದಿದೆ.

Hema Malini: ‘ಸೀರೆಯ ಸೆರಗು ಜಾರಿ ಬೀಳಿಸುವ ಆಲೋಚನೆಯಲ್ಲಿ ಆ ನಿರ್ದೇಶಕ ಇದ್ದ’; ಹೇಮಾ ಮಾಲಿನಿ
ಹೇಮಾ ಮಾಲಿನಿ

Updated on: Jul 10, 2023 | 11:44 AM

ಚಿತ್ರರಂಗದಲ್ಲಿ ಅನೇಕರಿಗೆ ಅನೇಕ ರೀತಿಯ ಅನುಭವ ಆಗಿರುತ್ತದೆ. ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದವರಿಗೂ ಅಹಿತಕರ ಅನುಭವ ಆದ ಉದಾಹರಣೆ ಇದೆ. ಹಿರಿಯ ನಟಿ, ಸಂಸದೆ ಹೇಮಾ ಮಾಲಿನಿಗೂ (Hema Malini) ಇದೇ ರೀತಿಯ ಅನುಭವ ಆಗಿತ್ತು. ಈ ಬಗ್ಗೆ ಅವರು ಈಗ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ನಿರ್ದೇಶಕನ ಕೆಟ್ಟ ಮನಸ್ಥಿತಿ ಯಾವ ರೀತಿಯಲ್ಲಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ. ಆದರೆ ಆ ನಿರ್ದೇಶಕನ ಹೆಸರನ್ನು ಅವರು ಎಲ್ಲಿಯೂ ರಿವೀಲ್ ಮಾಡಿಲ್ಲ. ಡೈರೆಕ್ಟರ್ ಹೆಸರನ್ನು ಅವರು ಹೇಳಬೇಕಿತ್ತು ಎಂದು ಫ್ಯಾನ್ಸ್ ಬಯಸಿದ್ದಾರೆ.

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹೆಚ್ಚಿದೆ ಎನ್ನುವ ಆರೋಪ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಇದರ ಜೊತೆಗೆ ಖಾಸಗಿ ಭಾಗ ತೋರಿಸುವಂತೆ ನಿರ್ದೇಶಕರು ಒತ್ತಾಯ ಹೇರಿದರು ಎಂಬ ಆರೋಪವನ್ನೂ ಕೆಲವರು ಮಾಡಿದ್ದಿದೆ. ನಟಿ ಹೇಮಾ ಮಾಲಿನಿ ಅವರು ಮಾಡಿರುವ ಆರೋಪ ಕೂಡ ಇದೇ ರೀತಿಯದ್ದು. ಅವರು ಸಂದರ್ಶನ ಒಂದರಲ್ಲಿ ಈ ಕುರಿತು ಹೇಳಿದ್ದಾರೆ.

‘ಒಂದು ದೃಶ್ಯದ ಶೂಟಿಂಗ್ ಇತ್ತು. ನಾನು ಸೀರೆ ಉಟ್ಟು ಬಂದಿದ್ದೆ. ನಾನು ನನ್ನ ಸೀರೆಯ ಸೆರಗಿಗೆ ಸದಾ ಪಿನ್ ಧರಿಸುತ್ತಿದ್ದೆ. ಆ ಪಿನ್ ತೆಗೆಯುವಂತೆ ನಿರ್ದೇಶಕರು ಹೇಳಿದರು. ಹಾಗಾದಲ್ಲಿ ಸೀರೆ ಬಿದ್ದು ಹೋಗುತ್ತದೆ ಎಂದು ನಾನು ಹೇಳಿದೆ. ‘ಅದೇ ಬೇಕಾಗಿರುವುದು’ ಎಂದು ನಿರ್ದೇಶಕರು ಹೇಳಿದರು’ ಎಂದಿದ್ದಾರೆ ಹೇಮಾ ಮಾಲಿನಿ. ಮುಂದೇನಾಯಿತು ಎಂಬ ವಿಚಾರವನ್ನು ಅವರು ರಿವೀಲ್ ಮಾಡಿಲ್ಲ.

ಇದನ್ನೂ ಓದಿ: ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದ ಟೀಸರ್ ಬಿಡುಗಡೆ ದಿನಾಂಕ ಘೋಷಣೆ

ಹೇಮಾ ಮಾಲಿನಿ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ‘ತುಮ್ ಹಸೀನ್ ಮೇ ಜವಾನ್’ (1970), ‘ರಾಜಾ ಜಾನಿ ಆ್ಯಂಡ್ ಸೀತಾ ಔರ್ ಗೀತಾ (1972), ‘ಶೋಲೆ’ (1975), ‘ಡ್ರೀಮ್ ಗರ್ಲ್​ ಆ್ಯಂಡ್ ‘ಕಿನಾರಾ’ (1977) ‘ಸೆತ್ತೇ ಪೇ ಸತ್ತಾ’ (1982) ಸೇರಿ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಅವರು ಮಥುರಾ ಕ್ಷೇತ್ರದಿಂದ ಸಂಸದೆ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us