ಭೂತಪ್ರೇತಗಳು ಇವೆ ಎನ್ನುವುದನ್ನು ಅನೇಕರು ನಂಬುತ್ತಾರೆ. ಇನ್ನೂ ಕೆಲವರು ನಂಬುವುದಿಲ್ಲ. ಕೆಲವರಿಗೆ ಈ ಬಗ್ಗೆ ಅನುಭವ ಕೂಡ ಆಗಿರುತ್ತದೆ. ಬಾಲಿವುಡ್ ಖ್ಯಾತ ನಟಿ ಹೇಮಾ ಮಾಲಿನಿಗೆ ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಹಿಂಗೊಂದು ಭಯಾನಕ ಅನುಭವ ಆಗಿತ್ತು. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಅಚ್ಚರಿ ಹೊರ ಹಾಕಿದ್ದಾರೆ.
ಹೇಮಾ ಮಾಲಿನಿ ಚಿತ್ರರಂಗಕ್ಕೆ ಬಂದ ಆರಂಭದ ದಿನಗಳು ಅವು. ಅವರು ಬಾಂದ್ರಾದ ಫ್ಲ್ಯಾಟ್ ಒಂದರಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಆದ ಘಟನೆ ಬಗ್ಗೆ ಕೆಲ ವರ್ಷಗಳ ಹಿಂದೆ ಹೇಳಿಕೊಂಡಿದ್ದರು. ‘ನಾನು ‘ಸಪ್ನೋಂ ಕಾ ಸೌದಾಗರ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದೆ. ಆಗಲೇ ‘ಅಭಿನೇತ್ರಿ’ ಸಿನಿಮಾ ನನಗೆ ಸಿಕ್ಕಿತ್ತು. ನಾನು ಆಗ ಬಾಂದ್ರಾ ಅಪಾರ್ಟ್ಮೆಂಟ್ನಲ್ಲಿದ್ದೆ. ಅಲ್ಲಿಂದ, ನಾವು ಜುಹುಗೆ ಶಿಫ್ಟ್ ಆದೆವು. ಆಗ ನಮಗೆ ವಿಚಿತ್ರ ಅನುಭವ ಆಗೋಕೆ ಆರಂಭವಾಯ್ತು’ ಎಂದಿದ್ದಾರೆ ಹೇಮಾ.
‘ಪ್ರತಿ ದಿನ ರಾತ್ರಿ ಯಾರೋ ನನ್ನನ್ನು ಉಸಿರುಗಟ್ಟಿಸುತ್ತಿದ್ದಾರೆ ಅನಿಸುತ್ತಿತ್ತು. ಉಸಿರಾಡಲು ಕಷ್ಟಪಡುತ್ತಿದೆ. ಒಂದೆರಡು ರಾತ್ರಿ ಈ ರೀತಿ ಆಗಿದ್ದರೆ ನಾವು ಹೇಗೋ ನಿರ್ಲಕ್ಷ್ಯ ಮಾಡಬಹುದಿತ್ತು. ಆದರೆ, ನಿತ್ಯ ರಾತ್ರಿ ಇದೇ ರೀತಿ ಆಗುತ್ತಿತ್ತು. ಈ ಕಾರಣಕ್ಕೆ ನಾವು ನಮ್ಮದೇ ಅಪಾರ್ಟ್ಮೆಂಟ್ ಕೊಂಡುಕೊಳ್ಳಲು ನಿರ್ಧರಿಸಿದೆವು’ ಎಂದು ಭಯಾನಕ ಅನುಭವ ಬಿಚ್ಚಿಟ್ಟಿದ್ದಾರೆ ಅವರು.
ನಂತರ ಹೇಮಾ ಮಾಲಿನಿ ಬೇರೆ ಮನೆಗೆ ಸ್ಥಳಾಂತರಗೊಂಡರು. ಆ ಸಮಯದಲ್ಲಿ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಡೇಟ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಸಾಕಷ್ಟು ಚರ್ಚೆ ಆಗಿತ್ತು. 1970ರಲ್ಲಿ ಮೊದಲ ಬಾರಿಗೆ ಇವರು ಒಂದೇ ಸಿನಿಮಾದಲ್ಲಿ ನಟಿಸಿದ್ದರು. ‘ತುಮ್ ಹಸೀನ್ ಮೈ ಜವಾನ್’ ಸಿನಿಮಾದಲ್ಲಿ ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ಒಟ್ಟಾಗಿ ಕೆಲಸ ಮಾಡಿದ್ದರು. ನಂತರ ಇಬ್ಬರೂ ಪ್ರೀತಿಯಲ್ಲಿ ಬಿದ್ದರು. ಆಗಲೇ ಧರ್ಮೇಂದ್ರ ಅವರಿಗೆ ಮದುವೆ ಆಗಿತ್ತು. 1980ರಲ್ಲಿ ಹೇಮಾ ಅವರನ್ನು ಧರ್ಮೇಂದ್ರ ಮದುವೆ ಆದರು.
ಇದನ್ನೂ ಓದಿ: ಬಾಲಿವುಡ್ನ ಯಾವೆಲ್ಲಾ ಖ್ಯಾತ ನಟರು ಕೂದಲು ಕಸಿ ಮಾಡಿಸಿಕೊಂಡಿದ್ದಾರೆ?; ಇಲ್ಲಿದೆ ಅಚ್ಚರಿಯ ಮಾಹಿತಿ