ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ನೀಡಿದ ಬಾಲಿವುಡ್​​ ಸೆಲೆಬ್ರಿಟಿಗಳಿವರು

Updated on: Jul 25, 2026 | 4:05 PM

Bollywood celebrities in CJP Protest: ದೆಹಲಿಯ ‘ಜಂತರ್ ಮಂತರ್’ನಲ್ಲಿ ಸಿಜಿಪಿ (ಕಾಕ್ರೂಚ್ ಜನತಾ ಪಾರ್ಟಿ) ನಡೆಸಿದ ಅವಿರತ ಹೋರಾಟಕ್ಕೆ ಜಯ ದೊರಕಿದೆ. ವಿದ್ಯಾರ್ಥಿಗಳ ಅತಿ ಮುಖ್ಯ ಬೇಡಿಕೆ ಈಡೇರಿದೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ವಿದ್ಯಾರ್ಥಿಗಳ ಹೋರಾಟಕ್ಕೆ ಭಾರಿ ಬೆಂಬಲ ವ್ಯಕ್ತವಾಗಿತ್ತು. ವಿಶೇಷವಾಗಿ ಬಾಲಿವುಡ್​ ಸೆಲೆಬ್ರಿಟಿಗಳು ಹಲವರು ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ವಿದ್ಯಾರ್ಥಿಗಳ ಪರವಾಗಿ ನಿಂತ ಬಾಲಿವುಡ್ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ...

1 / 10
Shabana Naseerudhin

Shabana Naseerudhin

2 / 10
ನಟ ಇಮ್ರಾನ್ ಖಾನ್ ಸಹ ವಿದ್ಯಾರ್ಥಿಗಳಿಗೆ ಬೆಂಬಲ ಘೋಷಿಸಿದ ನಟರಲ್ಲಿ ಮೊದಲಿಗರುಗಳಲ್ಲಿ ಒಬ್ಬರು. ಅವರೂ ಸಹ ಖುದ್ದು ಜಂತರ್ ಮಂಥರ್​​ಗೆ ಹೋಗಿ ವಿದ್ಯಾರ್ಥಿಗಳಿಗೆ ಬೆಂಬಲ ಘೋಷಿಸಿದ್ದು ಮಾತ್ರವೇ ಅಲ್ಲದೆ, ಮೌನವಾಗಿರುವ ಬಾಲಿವುಡ್​ ನಟ-ನಟಿಯರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ‘ಧುರಂಧರ್’ ನಟಿ ಆಯೆಷಾ ಖಾನ್ ಸಹ ವಿದ್ಯಾರ್ಥಿಗಳ ಜೊತೆಗೂಡಿ ಪ್ರತಿಭಟನೆ ನಡೆಸಿದ್ದರು, ಅವರನ್ನು ಪೊಲೀಸರು ವಶಕ್ಕೆ ಸಹ ಪಡೆದುಕೊಂಡಿದ್ದರು.

3 / 10
ವಿದ್ಯಾರ್ಥಿಗಳ ಮೇಲೆ ಹಲ್ಲೆ ಸುದ್ದಿ ಹೊರಬರುತ್ತಿದ್ದಂತೆ ನಟಿ ಸೊನಾಕ್ಷಿ ಸಿನ್ಹ ಮೊದಲಿಗೆ ವಿಡಿಯೋ ಮಾಡಿ ಘಟನೆಯನ್ನು ಖಂಡಿಸಿದ್ದು ಮಾತ್ರವಲ್ಲದೆ ತಾವು ವಿದ್ಯಾರ್ಥಿಗಳ ಪರ ಇರುವುದಾಗಿ ಬಹಿರಂಗವಾಗಿ ಘೋಷಿಸಿದರು. ನಟಿ ಹುಮಾ ಖುರೇಷಿ ಸಹ ತಮ್ಮ ಸಹೋದರನ ಜೊತೆ ಸೇರಿ ಖುದ್ದು ಜಂತರ್ ಮಂಥರ್​​ಗೆ ಹೋಗಿ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

4 / 10
ಬಹುತೇಕ ಸೆಲೆಬ್ರಿಟಿಗಳು ಪ್ರತಿಭಟನೆಗೆ ಬೆಂಬಲ ಕೊಡಲು ಮೀನಾ-ಮೇಷ ಎಣಿಸುತ್ತಿದ್ದ ಸಂದರ್ಭದಲ್ಲಿ ನಟ ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣದ ಮೂಲಕ ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ಖಂಡಿಸಿದರು. ಸೋನಂ ವಾಂಕ್ಚುಕ್ ಅವರ ಉಪವಾಸ ಸತ್ಯಾಗ್ರಹ ಅಂತ್ಯ ಮಾಡುವಂತೆ ಮಾಡಿದರು. ಸಲ್ಮಾನ್ ಖಾನ್ ಬೆಂಬಲದ ಬಳಿಕ ದಂಡು ದಂಡಾಗಿ ಬಾಲಿವುಡ್ ಸೆಲೆಬ್ರಿಟಿಗಳು ವಿದ್ಯಾರ್ಥಿಗಳಿಗೆ ಬೆಂಬಲ ಕೊಡಲು ಆರಂಭಿಸಿದರು. ಈ ಪ್ರತಿಭಟೆನೆಗೆ ಭರಪೂರ ಬಾಲಿವುಡ್ ಬೆಂಬಲ ಸಿಗುವಲ್ಲಿ ಸಲ್ಮಾನ್ ಖಾನ್ ಪಾತ್ರ ಮುಖ್ಯವಾದುದು ಎನ್ನಬಹುದು.

5 / 10
ನಟ ಹೃತಿಕ್ ರೋಷನ್ ಸಹ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲಿಸಿದ ಮೊದಲಿಗರಲ್ಲಿ ಒಬ್ಬರು. ಸೋನಂ ವಾಕ್ಚುಕ್ ಅವರ ಉಪವಾಸ ಸತ್ಯಾಗ್ರಹಕ್ಕೆ ಅವರು ಬೆಂಬಲ ವ್ಯಕ್ತಪಡಿಸಿ ವಾರದ ಹಿಂದೆ ಪೋಸ್ಟ್ ಹಂಚಿಕೊಂಡಿದ್ದರು. ನಟ ಸೋನು ಸೂದ್ ಸಹ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದರು. ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿದ್ದರು.

6 / 10
ನಟಿ ದಿಯಾ ಮಿರ್ಜಾ, ಸಿಜಿಪೆಗೆ ಬೆಂಬಲ ವ್ಯಕ್ತಪಡಿಸುತ್ತಾ ಕಟುವಾಗಿ ಸರ್ಕಾರವನ್ನು ಟೀಕೆ ಮಾಡಿದ್ದರು. ಮೋದಿಯವರ ಇತ್ತೀಚೆಗಿನ ವಿಡಿಯೋ ಸಂದೇಶವನ್ನೂ ಟೀಕಿಸಿದ್ದ ದಿಯಾ, ‘ಇಷ್ಟು ಮಾತನಾಡಲು 47 ದಿನ ಬೇಕಾಯ್ತೆ?’ ಎಂದು ಪ್ರಶ್ನೆ ಮಾಡಿದ್ದರು. ನಟಿ ಪ್ರೀತಿ ಜಿಂಟಾ ಸಹ ವಿದ್ಯಾರ್ಥಿಗಳ ಪರ ತಾವಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದರು.

7 / 10
ಯಾವ ವಿವಾದಕ್ಕೂ ತಲೆ ಹಾಕದ ಖ್ಯಾತ ಗಾಯಕ ಅರಿಜಿತ್ ಸಿಂಗ್ ಅವರು ಸಹ ಮೌನ ಮುರಿದು ವಿದ್ಯಾರ್ಥಿಗಳಿಗೆ ಬೆಂಬಲ ಘೋಷಿಸಿದರು. ಅವರ ಬೆಂಬಲವನ್ನು ವಿರೋಧಿಸಿ ಅಭಿಮಾನಿಗಳಿಗೆ, ತಮ್ಮ ಹಾಡುಗಳನ್ನು ಡಿಲೀಟ್ ಮಾಡುವಂತೆ ಮನವಿ ಮಾಡಿದ್ದರು. ಖ್ಯಾತ ಗಾಯಕ, ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ ಸಹ ಮೊದಲಿನಿಂದಲೂ ವಿದ್ಯಾರ್ಥಿಗಳ ಪರ ನಿಂತಿದ್ದರು.

8 / 10
ಸ್ಟಾರ್ ನಟಿ ಕರೀನಾ ಕಪೂರ್ ಅವರು ವಿದ್ಯಾರ್ಥಿಗಳ ಮೇಲೆ ಹಲ್ಲೆಯ ಬಳಿಕ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ‘ಇನ್ನು ನನ್ನಿಂದ ಸುಮ್ಮನಿರಲು ಆಗುವುದಿಲ್ಲ’ ಎಂದರು. ಬಳಿಕ ನಟಿ ಆಲಿಯಾ ಭಟ್ ಸಹ ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದರು. ‘ವಿದ್ಯಾರ್ಥಿಗಳ ಧೈರ್ಯ ನನ್ನನ್ನು ಭಾವುಕಗೊಳಿಸಿದೆ’ ಎಂದರು.

9 / 10
‘3 ಇಡಿಯಟ್ಸ್’ ನಟ ಓಮಿ ವೈದ್ಯ ಅವರು ವಿಡಿಯೋ ಮಾಡಿ ಸೋನಂ ವಾಂಕ್ಚುಕ್ ಅವರಿಗೆ ಬೆಂಬಲ ಘೋಷಿಸಿದರು. ಆಮಿರ್ ಖಾನ್, ಮಾಧವನ್ ಅವರು ಬೆಂಬಲ ಘೋಷಿಸಬೇಕು ಎಂದು ಮನವಿ ಮಾಡಿದರು. ಎಫ್​​ಟಿಟಿಐ ವಿದ್ಯಾರ್ಥಿಗಳು ನಟ ಆರ್ ಮಾಧವನ್ ವಿರುದ್ಧ ಟ್ರೋಲಿಂಗ್ ಆರಂಭಿಸಿದ ಬಳಿಕ ಮಾಧವನ್ ಅವರು ಸಾಮಾಜಿಕ ಜಾಲತಾಣದ ಮೂಲಕ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

10 / 10
ಹಿರಿಯ ನಟ ಪಿಯೂಶ್ ಮಿಶ್ರಾ ಮೋದಿ ಅವರಿಗಾಗಿ ವಿಡಿಯೋ ಮಾಡಿ, ಮಕ್ಕಳ ಮನವಿ ಆಲಿಸುವಂತೆ ಮನವಿ ಮಾಡಿದ್ದರು. ನಿರ್ದೇಶಕ ಅನುರಾಗ್ ಕಶ್ಯಪ್ ಸಹ ವಿದ್ಯಾರ್ಥಿಗಳ ಪರ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು. ಪೊಲೀಸರ ಲಾಠಿ ಪ್ರಹಾರ ವಿರೋಧಿಸಿ ಅವರು ಮರಾಠಿ ಪದ್ಯವೊಂದನ್ನು ಅವರು ಹಂಚಿಕೊಂಡಿದ್ದರು. ಇವರಷ್ಟೆ ಅಲ್ಲದೆ ಇನ್ನೂ ಹಲವಾರು ಬಾಲಿವುಡ್ ಸಿನಿಮಾ ಸೆಲೆಬ್ರಿಟಿಗಳು ವಿದ್ಯಾರ್ಥಿಗಳ ಪ್ರತಿಭಟನೆಗೆ, ಸೋನಂ ವಾಂಕ್ಚುಕ್ ಅವರ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ನಟ ವರುಣ್ ಧವನ್ ಸಹ ಬೆಂಬಲ ವ್ಯಕ್ತಪಡಿಸಿದ್ದರು.

Follow Us