ಅದ್ಧೂರಿ ಬಿಡುಗಡೆಗೆ ಸಜ್ಜಾದ ‘ರುದ್ರಾಭಿಷೇಕಂ’: ಸಿನಿಮಾದ ವಿಶೇಷತೆಗಳೇನು?
ವಿಜಯ್ ರಾಘವೇಂದ್ರ ನಟನೆ ಮಾಡಿರುವ ‘ರುದ್ರಾಭಿಷೇಕಂ’ ಸಿನಿಮಾ ನಾಳೆ (ಸೆಪ್ಟೆಂಬರ್ 25) ರಿಲೀಸ್ ಆಗುತ್ತಿದೆ. ಸಿನಿಮಾನಲ್ಲಿ ಸಾಕಷ್ಟು ವಿಶೇಷತೆಗಳಿವೆ. ವೀರಗಾಸೆ ಕಲೆಯನ್ನು ಪಾತ್ರವನ್ನಾಗಿ ಬಳಸಲಾಗಿದೆ. ಸಿನಿಮಾನಲ್ಲಿ ವೀರಭದ್ರ ಸ್ವಾಮಿಯ ಮಹಿಮೆಯನ್ನು ಸಾರಲಾಗಿದೆ. ಈ ಸಿನಿಮಾವನ್ನು ಒಂಬತ್ತು ಮಂದಿ ರೈತರು ನಿರ್ಮಿಸುವುದು ಮತ್ತೊಂದು ವಿಶೇಷ.

ವಿಜಯ್ ರಾಘವೇಂದ್ರ ನಟನೆಯ ‘ರುದ್ರಾಭಿಷೇಕಂ’ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಒಂದರ ಹಿಂದೊಂದು ಕೌಟುಂಬಿಕ ಸಿನಿಮಾ, ಥ್ರಿಲ್ಲರ್ ಸಿನಿಮಾಗಳಲ್ಲಿ ನಟಿಸಿದ್ದ ವಿಜಯ್ ರಾಘವೇಂದ್ರ ‘ರುದ್ರಾಭಿಷೇಕಂ’ನಲ್ಲಿ ಮೂರು ಭಿನ್ನ ಪಾತ್ರಗಳಲ್ಲಿ ನಟನೆ ಮಾಡಿದ್ದು, ಕೌಟುಂಬಿಕ, ಹಾರರ್, ಥ್ರಿಲ್ಲರ್, ಆಕ್ಷನ್ ಅಂಶಗಳನ್ನು ಒಟ್ಟಿಗೆ ಒಳಗೊಂಡ ಸಿನಿಮಾ ಇದಾಗಿದೆ. ಸಿನಿಮಾ ನಾಳೆ (ಸೆಪ್ಟೆಂಬರ್ 25) ಬಲು ಅದ್ಧೂರಿಯಾಗಿ ರಿಲೀಸ್ ಆಗಲು ಸಜ್ಜಾಗಿದೆ.
ವಿಜಯ್ ರಾಘವೇಂದ್ರ ನಟನೆಯ ‘ರುದ್ರಾಭಿಷೇಕಂ’ ಸಿನಿಮಾ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ವಿಜಯ್ ರಾಘವೇಂದ್ರ ಮೂರು ಭಿನ್ನ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾನಲ್ಲಿ ಜನಪದ ಕಲೆಯಾದ ವೀರಗಾಸೆಗೆ ಪ್ರಾಮುಖ್ಯತೆ ನೀಡಲಾಗಿದ್ದು, ವೀರಗಾಸೆಯನ್ನು ಒಂದು ಪಾತ್ರವನ್ನಾಗಿ ತೋರಿಸಲಾಗಿದೆ. ಜೊತೆಗೆ ವೀರಗಾಸೆಯ ಹಾಡೊಂದು ಸಹ ಇದೆ. ಸಿನಿಮಾನಲ್ಲಿ ವೀರಭದ್ರ ಸ್ವಾಮಿಯ ಮಹಿಮೆ, ವಿಶೇಷತೆಯ ಬಗ್ಗೆ ತೋರಿಸಲಾಗಿದೆ. ಸಿನಿಮಾ ಕತೆಯ ಮುಖ್ಯ ಧಾತುವೇ ವೀರಭದ್ರ ಸ್ವಾಮಿ ಆಗಿರುವುದು ವಿಶೇಷ.
ಇದನ್ನೂ ಓದಿ:ಎರಡನೇ ಕೇಸ್ ಮೂಲಕ ಬಂದ ಸೀತಾರಾಮ್; ಮತ್ತೆ ಖಾಕಿ ತೊಟ್ಟ ವಿಜಯ್ ರಾಘವೇಂದ್ರ
‘ರುದ್ರಾಭಿಷೇಕಂ’ ಸಿನಿಮಾವನ್ನು ಒಂಬತ್ತು ಮಂದಿ ರೈತರು ನಿರ್ಮಾಣ ಮಾಡಿದ್ದಾರೆ. ಸಿನಿಮಾ ಮೇಲಿನ ಆಸಕ್ತಿ, ಒಳ್ಳೆಯ ಗ್ರಾಮೀಣ ಸೊಗಡಿನ ಕತೆಯುಳ್ಳ ಸಿನಿಮಾ ನಿರ್ಮಾಣ ಮಾಡಬೇಕೆಂಬ ಆಸಕ್ತಿಯಿಂದ ಒಂಬತ್ತು ಮಂದಿ ರೈತರು ಸೇರಿ ‘ರುದ್ರಾಭಿಷೇಕಂ’ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಲಾಯರ್ ಜಯರಾಂ, ದಿನ್ನೂರು ವೆಂಕಟೇಶ್, ಕಾಕಚಕ್ಕಂಡನಹಳ್ಳಿ ಮಂಜುನಾಥ್, ಬಿ. ಚಿದಾನಂದ ಮೂರ್ತಿ, ಅಶ್ವತ್ಥ ನಾರಾಯಣ, ಸ ರೆಶೇಶ್ ಬಾಬು, ಶಿವಕುಮಾರ್, ರವಿ, ವಸಂತ್ಕುಮಾರ್ ಅವರುಗಳು ಈ ಸಿನಿಮಾದ ನಿರ್ಮಾಪಕರು.
ವಸಂತ್ ಕುಮಾರ್ ನಿರ್ದೇಶನ ಮಾಡಿರುವ ಈ ಸಿನಿಮಾನಲ್ಲಿ ವಿಜಯ್ ರಾಘವೇಂದ್ರ ಎದುರು ನಾಯಕಿಯಾಗಿ ಪ್ರಿಯಾಂಕಾ ತಿಮ್ಮೇಶ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾನಲ್ಲಿ ಕಲಾವಿದರಾದ ಬಾಲು ರಾಜವಾಡಿ, ವಿ ಮನೋಹರ್, ಶಂಕರ್ ನಾರಾಯಣ್, ಮಮತಾ ತುರುವೇಕೆರೆ, ನವನೀತ ಶೆಟ್ಟಿ, ಮನು ಬುಲೆಟ್, ವಿನು, ವಿನಯ್ ರಾಜ್, ಸನತ್ ಕುಮಾರ್, ವಸಂತ್ ಕುಮಾರ್, ಶಿವಕುಮಾರ್ ಅವರುಗಳು ನಟಿಸಿದ್ದಾರೆ. ಸಿನಿಮಾಕ್ಕೆ ವಿ ಮನೋಹರ್ ಸಂಗೀತಾ ನೀಡಿದ್ದಾರೆ. ‘ರುದ್ರಾಭಿಷೇಕಂ’ ಸಿನಿಮಾ ಸೆಪ್ಟೆಂಬರ್ 25ರಂದು ಅಂದರೆ ನಾಳೆ ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




