AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೀರೋ ಆದ ಕಾಮಿಡಿ ಕಿಲಾಡಿ ಖ್ಯಾತಿಯ ಹರೀಶ್; ‘ಚಂದ್ರಹಾಸ’ ಟ್ರೇಲರ್ ನೋಡಿ

‘ಚಂದ್ರಹಾಸ‌’ ಸಿನಿಮಾದಲ್ಲಿ ಕಾಮಿಡಿ ಕಿಲಾಡಿ ಖ್ಯಾತಿಯ ಹರೀಶ್ ಹಿರಿಯೂರು ಅವರು ಹೀರೋ ಆಗಿದ್ದಾರೆ. ಗೆಳೆಯನ ಸಿನಿಮಾಗೆ ವಿಶ್ ಮಾಡಲು ಕಾಮಿಡಿ ಕಿಲಾಡಿಗಳು ಖ್ಯಾತಿಯ ಹುಲಿ ಕಾರ್ತಿಕ್, ನವಾಜ್ ಸೇರಿದಂತೆ ಅನೇಕರು ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಸಿನಿಮಾಗೆ ಪೂರ್ಣಚಂದ್ರ ಅವರು ಸಂಗೀತ ನೀಡಿದ್ದಾರೆ.

ಹೀರೋ ಆದ ಕಾಮಿಡಿ ಕಿಲಾಡಿ ಖ್ಯಾತಿಯ ಹರೀಶ್; ‘ಚಂದ್ರಹಾಸ’ ಟ್ರೇಲರ್ ನೋಡಿ
Chayashree U, Harish Hiriyur
ಮದನ್​ ಕುಮಾರ್​
|

Updated on: Sep 24, 2026 | 5:33 PM

Share

‘ಚಂದ್ರಹಾಸ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಹರೀಶ್ ಹಿರಿಯೂರು ಅವರು ನಾಯಕ ನಟನಾಗಿ ಅಭಿನಯಿಸಿರುವ ಈ ಸಿನಿಮಾಗೆ ಆನಂದ್ ಕಲಕಬಂಡಿ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಬಸನಗೌಡ ಪಟೀಲ್ ಅವರು ‘ಅಮರಶ್ರೀ ಕಂಬೈನ್ಸ್’ ಬ್ಯಾನರ್‌ ಮೂಲಕ ಬಂಡವಾಳ ಹೂಡಿದ್ದಾರೆ. ಈಗಾಗಲೇ ಹಾಡುಗಳ ಮೂಲಕ ಗಮನ ಸೆಳೆದಿರುವ ‘ಚಂದ್ರಹಾಸ’ ಚಿತ್ರತಂಡ ಇದೀಗ ಟ್ರೇಲರ್ ಬಿಡುಗಡೆ ಮಾಡಿದೆ. ಅಕ್ಟೋಬರ್ 23ರಂದು ಈ ಸಿನಿಮಾ ರಿಲೀಸ್ ಆಗಲಿದೆ.

ಬಹುತೇಕ ಎಲ್ಲರೂ ಹೊಸಬರೇ ಸೇರಿಕೊಂಡು ಮಾಡಿರುವ ಸಿನಿಮಾ. ಆದರೆ ನಟನೆ ಅವರಿಗೆ ಹೊಸದೇನಲ್ಲ. ಯಾಕೆಂದರೆ ಎಲ್ಲರೂ ರಂಗಭೂಮಿಯಲ್ಲಿ ಪಳಗಿದವರು. ನಾಯಕ ಹರೀಶ್ ಹಿರಿಯೂರು ರಂಗಭೂಮಿ ಜೊತೆಗೆ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದವರು. ಇದೀಗ ಮೊದಲ ಬಾರಿಗೆ ಹೀರೋ ಆಗಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

‘ಚಂದ್ರಹಾಸ’ ಸಿನಿಮಾ ಟ್ರೇಲರ್:

ಚಂದ್ರ ಎನ್ನುವ ಗೆಳೆಯ ಜೊತೆಯಲ್ಲಿದ್ದರೆ, ಜೀವನ ನಗುವಿನಿಂದ ಕೂಡಿರುತ್ತೆ ಎನ್ನುವುದು ಈ ಸಿನಿಮಾದ ಒನ್ ಲೈನ್ ಸ್ಟೋರಿ. ಹಾಗಾಗಿ ‘ಚಂದ್ರಹಾಸ’ ಎಂದು ಶೀರ್ಷಿಕೆ ಇಡಲಾಗಿದೆ. ಕಾಮಿಡಿ, ಗೆಳೆತನ, ಎಮೋಷನ್, ಮಧ್ಯಮ ವರ್ಗದವರ ಜೀವನ ಜಂಜಾಟ ಎಲ್ಲವೂ ಈ ಸಿನಿಮಾದಲ್ಲಿ ಇರಲಿದೆ. ಟ್ರೇಲರ್ ರಿಲೀಸ್ ಮಾಡಿ ಮಾತನಾಡಿದ ನಿರ್ದೇಶಕ ಆನಂದ್, ‘ಚಂದ್ರಹಾಸ ಕಥೆ ಸುಮ್ಮನೆ ಹುಟ್ಟಿದ್ದಲ್ಲ. ಸಿನಿಮಾದ ಹಲವಾರು ಪಾತ್ರಗಳು ಜೀವನದಲ್ಲಿ ನೋಡಿದ ಪಾತ್ರಗಳೇ ಆಗಿವೆ. ಪ್ರತಿಯೊಬ್ಬರು ಕಾಡುವಂತಹ ಸಿನಿಮಾ ಇದು. ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ’ ಎಂದರು.

ಬಸವಂತಗೌಡ ಪಾಟೀಲ್ ನಿರ್ಮಿಸಿರುವ ಈ ಚಿತ್ರಕ್ಕೆ ಬಸಣ್ಣ ಕಮತ್ತರ್ ಸಹ-ನಿರ್ಮಾಪಕರಾಗಿದ್ದಾರೆ. ನಾಯಕ ಹರೀಶ್ ಅವರಿಗೆ ಜೋಡಿಯಾಗಿ ನಟಿ ಛಾಯಾಶ್ರೀ ಉಮೇಶ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ನಿಂಗರಾಜು ಮಂಡ್ಯ, ಸಂತೋಷ್ ಕೆರಿ, ಸೂರ್ಯಕಲ, ಕಳಕಪ್ಪ ತಲವಾರ್, ಜ್ಯೋತಿ ಮಂಗಳೂರು ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ‘ಕಾಮಿಡಿ ಕಿಲಾಡಿಗಳು’ ಆಡಿಷನ್​ಗೆ ರಿಷಬ್ ಗೆಟಪ್​ನಲ್ಲೇ ಬಂದ ಸ್ಪರ್ಧಿ; ಜಗ್ಗೇಶ್ ಶಾಕ್

ನಾಯಕಿ ಛಾಯಾಶ್ರೀ ಮಾತನಾಡಿ, ‘ಶ್ರೀದೇವಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪಾಸಿಟಿವ್ ಜೊತೆಗಿನ ನೆಗೆಟಿವ್ ಶೇಡ್ ಕೂಡ ಇದೆ. ನಟನಾ ತಂಡದಿಂದ ಬಂದಿದ್ದು ನಾನು, ಮಂಡ್ಯ ರಮೇಶ್ ಸರ್ ನನ್ನ ಗುರುಗಳು’ ಎಂದು ಹೇಳಿದರು. ನಾಯಕ ಹರೀಶ್ ಮಾತನಾಡಿ, ‘ಈ ಸಿನಿಮಾ ಮೂಲಕ ನನಗೆ ರಂಗರತ್ನ ಎನ್ನುವ ಬಿರುದು ಕೊಟ್ಟಿದ್ದಾರೆ. ರಂಗಭೂಮಿಯಿಂದ ಬಂದವನಾಗಿದ್ದರಿಂದ ಇದು ನನಗೆ ಬಹಳ ಖುಷಿಯಾಯಿತು’ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
ಎಲ್ ನಿನೋ ಕಂಟಕ: ಮುಂದಿನ 6 ತಿಂಗಳಲ್ಲಿ 4.5 ಲಕ್ಷ ಮಂದಿ ಸಾವು ಭೀತಿ
ಎಲ್ ನಿನೋ ಕಂಟಕ: ಮುಂದಿನ 6 ತಿಂಗಳಲ್ಲಿ 4.5 ಲಕ್ಷ ಮಂದಿ ಸಾವು ಭೀತಿ
ನ್ಯಾಯ ಕೇಳಲು ಬಂದ ಜನರಿಗೆ ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ಆವಾಜ್
ನ್ಯಾಯ ಕೇಳಲು ಬಂದ ಜನರಿಗೆ ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ಆವಾಜ್
ಬೆಂಗಳೂರು ಕಸ ಸಾಗಾಣಿಕೆ ಟೆಂಡರ್‌ನಲ್ಲಿ ಭಾರಿ ಅಕ್ರಮ ಆರೋಪ: ಇಡಿಗೆ ದೂರು
ಬೆಂಗಳೂರು ಕಸ ಸಾಗಾಣಿಕೆ ಟೆಂಡರ್‌ನಲ್ಲಿ ಭಾರಿ ಅಕ್ರಮ ಆರೋಪ: ಇಡಿಗೆ ದೂರು
ಬರ ಪಟ್ಟಿಗೆ ಹೊಸದಾಗಿ 29 ತಾಲೂಕುಗಳ ಸೇರ್ಪಡೆ
ಬರ ಪಟ್ಟಿಗೆ ಹೊಸದಾಗಿ 29 ತಾಲೂಕುಗಳ ಸೇರ್ಪಡೆ
LIVE: ವಿಧಾನ ಪರಿಷತ್​​ ಕಲಾಪದ ನಾಲ್ಕನೇ ದಿನದ ನೇರಪ್ರಸಾರ
LIVE: ವಿಧಾನ ಪರಿಷತ್​​ ಕಲಾಪದ ನಾಲ್ಕನೇ ದಿನದ ನೇರಪ್ರಸಾರ
ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದು ಯಾರು?
ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದು ಯಾರು?
ಮಾತಿಗಿಂತ ಕ್ರಿಯೆ ಮುಖ್ಯ, ಸೇವೆಯೇ ನಮ್ಮ ಪರಮ ಧರ್ಮ: ನರೇಂದ್ರ ಮೋದಿ
ಮಾತಿಗಿಂತ ಕ್ರಿಯೆ ಮುಖ್ಯ, ಸೇವೆಯೇ ನಮ್ಮ ಪರಮ ಧರ್ಮ: ನರೇಂದ್ರ ಮೋದಿ
ಗಿರಿನಗರದಲ್ಲಿ ಕಾಂಪೌಂಡ್ ಗೋಡೆ ಕುಸಿತ: ಅದೃಷ್ಟವಶಾತ್ ತಪ್ಪಿದ ದೊಡ್ಡ ದುರಂತ
ಗಿರಿನಗರದಲ್ಲಿ ಕಾಂಪೌಂಡ್ ಗೋಡೆ ಕುಸಿತ: ಅದೃಷ್ಟವಶಾತ್ ತಪ್ಪಿದ ದೊಡ್ಡ ದುರಂತ