ವಿದ್ಯಾರ್ಥಿಗಳ ಪ್ರತಿಭಟನೆ ಕುರಿತಾದ ಸಿನಿಮಾಗಳು: ಪಟ್ಟಿ ಇಲ್ಲಿದೆ

Updated on: Jul 25, 2026 | 9:49 PM

Upcoming Movie: ಸಿಜೆಪಿ (ಕಾಕ್ರೂಚ್ ಜನತಾ ಪಾರ್ಟಿ) ಪ್ರತಿಭಟನೆ ಅಂತ್ಯವಾಗಿದೆ. ವಿದ್ಯಾರ್ಥಿಗಳ ಪ್ರತಿಭಟನೆ ದೇಶ, ವಿದೇಶಗಳಲ್ಲಿ ಸದ್ದು-ಸುದ್ದಿ ಆಗಿದೆ. ಈ ಹಿಂದೆ ಸಹ ಹಲವು ವಿದ್ಯಾರ್ಥಿ ಪ್ರತಿಭಟನೆಗಳು ನಡೆದಿವೆ. ಆದರೆ ಜೆನ್-ಜಿಗಳು ಪ್ರತಿಭಟನೆಯ ಬಹಳ ಭಿನ್ನವಾಗಿತ್ತು, ಅಂತಿಮ ಜಯ ಜೆನ್-ಜಿಗಳಿಗೆ ದೊರಕಿದೆ. ಭಾರತೀಯ ಸಿನಿಮಾಗಳಲ್ಲಿ ಸಹ ವಿದ್ಯಾರ್ಥಿ ಪ್ರತಿಭಟನೆಯ ಬಗ್ಗೆ ಹಲವು ಸಿನಿಮಾಗಳು ಬಂದಿದ್ದು, ಅವುಗಳಲ್ಲಿ ಕೆಲ ಪ್ರಮುಖವಾದ ಸಿನಿಮಾಗಳ ಪಟ್ಟಿ ಇಲ್ಲಿದೆ...

1 / 7
ಆಮಿರ್ ಖಾನ್ ಸೇರಿದಂತೆ ಹಲವು ನಟ-ನಟಿಯರು ನಟಿಸಿದ್ದ ‘ರಂಗ್ ದೇ ಬಸಂತಿ’ ಸಿನಿಮಾ ಬಿಡುಗಡೆ ಆಗಿದ್ದು 2006 ರಲ್ಲಿ ಅಂದರೆ 20 ವರ್ಷದ ಹಿಂದೆ ಆದರೆ ಈಗಲೂ ಸಹ ಯುವ ಹೋರಾಟದ ವಿಷಯ ಬಂದಾಗ ಈ ಸಿನಿಮಾವನ್ನು ನೆನಪು ಮಾಡಿಕೊಳ್ಳಲಾಗುತ್ತದೆ. ಈಗ ಸಿಜೆಪಿ ಪ್ರತಿಭಟನೆ ವೇಳೆ ಸಹ ‘ರಂಗ್ ದೇ ಬಸಂತಿ’ ಸಿನಿಮಾದ ಹಾಡುಗಳನ್ನೇ ವಿಡಿಯೋಗಳಿಗೆ ಬಳಸಲಾಗಿತ್ತು. ಈ ಸಿನಿಮಾವನ್ನು ಅಮೆಜಾನ್ ಮತ್ತು ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಬಹುದು.

ಆಮಿರ್ ಖಾನ್ ಸೇರಿದಂತೆ ಹಲವು ನಟ-ನಟಿಯರು ನಟಿಸಿದ್ದ ‘ರಂಗ್ ದೇ ಬಸಂತಿ’ ಸಿನಿಮಾ ಬಿಡುಗಡೆ ಆಗಿದ್ದು 2006 ರಲ್ಲಿ ಅಂದರೆ 20 ವರ್ಷದ ಹಿಂದೆ ಆದರೆ ಈಗಲೂ ಸಹ ಯುವ ಹೋರಾಟದ ವಿಷಯ ಬಂದಾಗ ಈ ಸಿನಿಮಾವನ್ನು ನೆನಪು ಮಾಡಿಕೊಳ್ಳಲಾಗುತ್ತದೆ. ಈಗ ಸಿಜೆಪಿ ಪ್ರತಿಭಟನೆ ವೇಳೆ ಸಹ ‘ರಂಗ್ ದೇ ಬಸಂತಿ’ ಸಿನಿಮಾದ ಹಾಡುಗಳನ್ನೇ ವಿಡಿಯೋಗಳಿಗೆ ಬಳಸಲಾಗಿತ್ತು. ಈ ಸಿನಿಮಾವನ್ನು ಅಮೆಜಾನ್ ಮತ್ತು ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಬಹುದು.

2 / 7

‘ರಾಂಝನಾ’ ಪ್ರೇಕ್ಷಕರ ಮನದಲ್ಲಿ ಅದ್ಭುತ ಪ್ರೇಮಕಥಾ ಸಿನಿಮಾ ಆಗಿ ಉಳಿದುಕೊಂಡಿದೆ. ಆದರೆ ಈ ಪ್ರೇಮಕಥಾ ಸಿನಿಮಾದ ಮೂಲ ಧಾತು ವಿದ್ಯಾರ್ಥಿಗಳ ಹೋರಾಟದ ಗುಣ ಮತ್ತು ಬದಲಾವಣೆ ಮೇಲಿನ ಪ್ರೀತಿ. ದೆಹಲಿ ಯೂನಿವರ್ಸಿಟಿಯ ಯುವಕರು ಮಾಡುವ ವಿವಿಧ ಹೋರಾಟಗಳ ಕತೆಯನ್ನು ಹಾಗೂ ರಾಜಕೀಯವನ್ನು ಈ ಸಿನಿಮಾ ಒಳಗೊಂಡಿದೆ.

3 / 7

‘ಆರಕ್ಷಣ್’ ಬಹಳ ಜನಪ್ರಿಯ ಸಿನಿಮಾ ಅಲ್ಲ. ಆದರೆ ಈ ಸಿನಿಮಾನಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳು, ಶಿಕ್ಷಣ ಸಂಸ್ಥೆಗಳ ಲಾಭಿ, ಶಿಕ್ಷಣ ಕ್ಷೇತ್ರದಲ್ಲಿ ರಿಸರ್ವೇಶನ್ ಇನ್ನೂ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಸಿನಿಮಾನಲ್ಲಿ ಅಮಿತಾಬ್ ಬಚ್ಚನ್, ಸೈಫ್ ಅಲಿ ಖಾನ್ ಮತ್ತು ದೀಪಿಕಾ ನಟಿಸಿದ್ದಾರೆ. ಸಿನಿಮಾವನ್ನು ಅಮೆಜಾನ್ ಮತ್ತು ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಬಹುದಾಗಿದೆ.

4 / 7

ಅನುರಾಗ್ ಕಶ್ಯಪ್ ನಿರ್ದೇಶನ ಮಾಡಿರುವ ಈ ಸಿನಿಮಾ ವಿದ್ಯಾರ್ಥಿಗಳನ್ನು ರಾಜಕಾರಣಿಗಳು ಬಳಸಿಕೊಳ್ಳು ರೀತಿಯನ್ನು ತೋರಿಸುತ್ತದೆ. ರಾಜಕೀಯದ ಬಗ್ಗೆ ನಿರ್ಮಾಣವಾದ ಭಾರತೀಯ ಸಿನಿಮಾಗಳಲ್ಲೇ ಅತ್ಯುತ್ತಮ ಸಿನಿಮಾ ಎನಿಸಿಕೊಳ್ಳುವ ಗುಲಾಲ್ ಸಿನಿಮಾದ ‘ಆರಂಭಹೇ’ ಹಾಡನ್ನು ಈಗಲೂ ಪ್ರತಿಭಟನೆಗಳಲ್ಲಿ ಬಳಸಿಕೊಳ್ಳಲಾಗುತ್ತದೆ.

5 / 7

ಇರ್ಫಾನ್ ಖಾನ್, ಜಿಮ್ಮಿ ಶೇರ್ಗಿಲ್ ಇನ್ನೂ ಕೆಲವರು ನಟಿಸಿರುವ ‘ಹಾಸಿಲ್’ ಸಿನಿಮಾ ಸ್ಟೂಡೆಂಟ್ ಪಾಲಿಟಿಕ್ಸ್​​ನ ಒಳ-ಹೊರಗುಗಳನ್ನು ತೋರಿಸಿದ್ದ ಸಿನಿಮಾ. ಸ್ವಚ್ಛ ಉದ್ದೇಶದಿಂದ ಹೋರಾಟಕ್ಕೆ ಧುಮುಕುವ ವಿದ್ಯಾರ್ಥಿ ಆ ನಂತರ ರಾಜಕಾರಣದ ಬಲೆಯೊಳಗೆ ಸಿಕ್ಕಿಕೊಳ್ಳು ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

6 / 7

ದಕ್ಷಿಣದಲ್ಲಿ ಸಂಪೂರ್ಣವಾಗಿ ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆಯೇ ಆಧಾರವಾದ ಸಿನಿಮಾಗಳ ಸಂಖ್ಯೆ ಕಡಿಮೆ. ಆದರೆ ತೆಲುಗಿನ ‘ಶಿವ’, ಮಲಯಾಳಂನ ‘ಪೂಮರಂ’, ‘ಜನ ಗಣ ಮನ’, ಇತ್ತೀಚೆಗೆ ಬಿಡುಗಡೆ ಆದ ‘ಪರಾಶಕ್ತಿ’, ಕನ್ನಡದ ‘ಕಂಠಿ’ ಇನ್ನೂ ಕೆಲ ಸಿನಿಮಾಗಳನ್ನು ಹೆಸರಿಸಬಹುದು.

7 / 7

‘ಯುವ’ ಮಣಿರತ್ನಂ ನಿರ್ದೇಶನದ ಸಿನಿಮಾ. ಇಡೀ ಸಿನಿಮಾ ಇರುವುದೇ ವಿದ್ಯಾರ್ಥಿಗಳ ಬಗ್ಗೆ. ಸಿನಿಮಾದ ನಾಯಕ ಅಭಿಷೇಕ್ ಬಚ್ಚನ್. ವಿದ್ಯಾರ್ಥಿಗಳು ಹೋರಾಟದ ಮೂಲಕ ಸಂಘಟನೆ ಮಾಡಿ ಕೊನೆಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಲೋಕಸಭೆ ಪ್ರವೇಶಿಸುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಈ ಸಿನಿಮಾವನ್ನು ಹಿಂದಿ ಮತ್ತು ತಮಿಳಿನಲ್ಲಿ ಯೂಟ್ಯೂಬ್​​ನಲ್ಲೇ ವೀಕ್ಷಿಸಬಹುದು.

Loading...
Unable to load recommendations.
Follow Us