‘ದಕ್ಷಿಣ ಭಾರತದ ನಟಿಯರು ಮರ ಸುತ್ತುವ ಪಾತ್ರಕ್ಕೆ ಸೀಮಿತ’; ಮತ್ತೆ ಶುರುವಾಯ್ತು ಚರ್ಚೆ

ಈ ಟ್ವೀಟ್ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹತ್ತಿಸಿದೆ. ಈ ಕುರಿತು ಪರ ವಿರೋಧ ಚರ್ಚೆ ಆಗುತ್ತಿದೆ. ಅನೇಕರು ಇತರ ಬಾಲಿವುಡ್ ನಟಿಯರನ್ನು ಯಾವ ರೀತಿಯಲ್ಲಿ ತೋರಿಸಲಾಗಿದೆ ಎಂಬುದನ್ನು ಫೋಟೋ ಸಮೇತ ಬಿಚ್ಚಿಟ್ಟಿದ್ದಾರೆ.

‘ದಕ್ಷಿಣ ಭಾರತದ ನಟಿಯರು ಮರ ಸುತ್ತುವ ಪಾತ್ರಕ್ಕೆ ಸೀಮಿತ’; ಮತ್ತೆ ಶುರುವಾಯ್ತು ಚರ್ಚೆ
ರಶ್ಮಿಕಾ ಮಂದಣ್ಣ
Follow us
ರಾಜೇಶ್ ದುಗ್ಗುಮನೆ
|

Updated on:Mar 09, 2023 | 6:34 AM

ದಕ್ಷಿಣ ಭಾರತ ಹಾಗೂ ಬಾಲಿವುಡ್ ಎಂಬ ಚರ್ಚೆ ಈ ಮೊದಲಿನಿಂದಲೂ ಇದೆ. ಈ ಮೊದಲು ಬಾಲಿವುಡ್ (Bollywood) ಶ್ರೇಷ್ಠ ಎನ್ನುವ ನಂಬಿಕೆ ಅನೇಕರಲ್ಲಿತ್ತು. ಇತ್ತೀಚೆಗೆ ದಕ್ಷಿಣದ ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿ, ಬಾಲಿವುಡ್​ ಸಿನಿಮಾಗಳು ಸೋಲು ಕಾಣಲು ಆರಂಭಿಸಿವೆ. ಇದರಿಂದ ದಕ್ಷಿಣದ ಸಿನಿಮಾಗಳನ್ನು ಅನೇಕರು ಕೊಂಡಾಡುತ್ತಿದ್ದಾರೆ. ಹೀಗಿರುವಾಗಲೇ ದಕ್ಷಿಣ ಚಿತ್ರರಂಗದವರು (South Cinema Industry) ನಟಿಯರನ್ನು ಕೆಟ್ಟದಾಗಿ ತೋರಿಸುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ.

ಒಂದು ಟ್ವೀಟ್​ನಿಂದ ಶುರುವಾಯ್ತು ಚರ್ಚೆ

ಹರ್ಮಿಂದರ್ ಹೆಸರಿನ ಬಾಲಿವುಡ್ ಬಾಕ್ಸ್ ಆಫೀಸ್ ಪಂಡಿತನೋರ್ವ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಕೆಜಿಎಫ್​’, ‘ಕಾಂತಾರ’ ಹಾಗೂ ‘ಪುಷ್ಪ’ ಚಿತ್ರದಲ್ಲಿ ಬರುವ ಕೆಲವೇ ಕೆಲವು ದೃಶ್ಯಗಳ ಫೋಟೋನ ಸೇರಿಸಿ ಹರ್ಮಿಂದರ್ ಪೋಸ್ಟ್ ಮಾಡಿದ್ದಾರೆ. ನಾಯಕನ ಜೊತೆ ಆಪ್ತವಾಗಿರುವ ದೃಶ್ಯಗಳು ಇದಾಗಿದೆ. ಇದಕ್ಕೆ ‘ದಕ್ಷಿಣದ ಸಿನಿಮಾಗಳಲ್ಲಿ ಮಹಿಳೆಯರ ಪಾತ್ರ’ ಎಂದು ಬರೆಯಲಾಗಿದೆ. ಮತ್ತೊಂದು ಕಡೆ ದೀಪಿಕಾ ಪಡುಕೋಣೆ ಆ್ಯಕ್ಷನ್ ಮೆರೆಯುತ್ತಿರುವ ಫೋಟೋ ಇದೆ. ಇದಕ್ಕೆ ‘ಬಾಲಿವುಡ್​ನಲ್ಲಿ ಮಹಿಳೆಯರಿಗೆ ಸಿಗುವ ಪಾತ್ರ’ ಎಂದು ಬರೆಯಲಾಗಿದೆ.

ಸಿಟ್ಟಾದ ನೆಟ್ಟಿಗರು

ಈ ಟ್ವೀಟ್ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹತ್ತಿಸಿದೆ. ಈ ಕುರಿತು ಪರ ವಿರೋಧ ಚರ್ಚೆ ಆಗುತ್ತಿದೆ. ಅನೇಕರು ಇತರ ಬಾಲಿವುಡ್ ನಟಿಯರನ್ನು ಯಾವ ರೀತಿಯಲ್ಲಿ ತೋರಿಸಲಾಗಿದೆ ಎಂಬುದನ್ನು ಫೋಟೋ ಸಮೇತ ಬಿಚ್ಚಿಟ್ಟಿದ್ದಾರೆ. ದೀಪಿಕಾ ಪಡುಕೋಣೆ ಅವರು ‘ಪಠಾಣ್​’ ಸಿನಿಮಾದಲ್ಲಿ ಕೇಸರಿ ಬಣ್ಣದ ಬಿಕಿನಿ ಧರಿಸಿದ್ದರು. ಇದು ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಇದನ್ನು ಅನೇಕರು ವಿರೋಧಿಸಿದ್ದರು. ಈ ಫೋಟೋಗಳನ್ನು ಹಾಕಿ ‘ಇದು ನಿಮ್ಮ ಬಾಲಿವುಡ್ ಮಂದಿಯ ಆಲೋಚನೆ’ ಎಂದು ಹೇಳಲಾಗಿದೆ.

ಮಹಿಳಾ ಪ್ರಧಾನ ಸಿನಿಮಾಗಳ ಹೆಸರು ನೀಡಿದ ಫ್ಯಾನ್ಸ್

ಈ ಟ್ವೀಟ್​ಗೆ ಸಾಕಷ್ಟು ಕಮೆಂಟ್​ಗಳು ಬಂದಿವೆ. ದಕ್ಷಿಣ ಭಾರತದಲ್ಲಿ ಸಾಕಷ್ಟು ಮಹಿಳಾ ಪ್ರಧಾನ ಸಿನಿಮಾಗಳು ಬಂದಿವೆ. ಅರುಂಧತಿ, ರುದ್ರಮಹಾದೇವಿ, ಮಹಾನಟಿ, ನಾತಿಚರಾಮಿ ಹೀಗೆ ಮಹಿಳಾ ಪ್ರಧಾನ ಸಿನಿಮಾಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವರ ಹೆಸರನ್ನು ಹಾಕುವ ಕೆಲಸ ಆಗಿದೆ.

ಬಾಲಿವುಡ್ ಕಡಿಮೆ ಇಲ್ಲ

ದಕ್ಷಿಣ ಭಾರತದ ಸಿನಿಮಾಗಳಂತೆಯೆ ಬಾಲಿವುಡ್​ನಲ್ಲೂ ನಟಿಯರನ್ನು ಕೇವಲ ಮರಸುತ್ತುವುದಕ್ಕೆ ಸೀಮಿತ ಮಾಡಿದ ಸಾಕಷ್ಟು ಸಿನಿಮಾಗಳಿವೆ. ಬಿಕಿನಿ ಶೋ ಮಾಡಿಸಿ ಮೂಲೆಗುಂಪು ಮಾಡಿದ ಚಿತ್ರಗಳೂ ಇವೆ. ದಕ್ಷಿಣ ಭಾರತದಲ್ಲೂ ಆ ರೀತಿಯ ಪಾತ್ರಗಳು ಸಿಗುತ್ತವೆ. ಕೆಲವೇ ಕೆಲವು ಸಿನಿಮಾಗಳನ್ನು ಆಯ್ಕೆಮಾಡಿಕೊಂಡು ಈ ರೀತಿ ಹೇಳುವುದು ಎಷ್ಟು ಸರಿ ಎಂಬ ಅಭಿಪ್ರಾಯ ಕೆಲವರದ್ದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:30 am, Thu, 9 March 23