ಹಿಂದಿ ಚಿತ್ರರಂಗದಲ್ಲಿ ಹಾಸ್ಯ ಪಾತ್ರ ಹಾಗೂ ಪೋಷಕ ಪಾತ್ರಗಳ ಮೂಲಕ ಗಮನ ಸೆಳೆದ ನಟ ರಾಜು ಶ್ರೀವಾತ್ಸವ (Raju Srivastava) ಅವರಿಗೆ ಇಂದು (ಆಗಸ್ಟ್ 10) ಹೃದಯಾಘಾತ ಆಗಿದೆ. ಅವರು ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಈ ವೇಳೆ ಅವರಿಗೆ ಸಣ್ಣ ಪ್ರಮಾಣದಲ್ಲಿ ಹೃದಯಾಘಾತ ಉಂಟಾಗಿದೆ. ಅವರನ್ನು ದೆಹಲಿಯ ಎಐಐಎಂಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರು ಚೇತರಿಕೆ ಕಾಣುತ್ತಿದ್ದಾರೆ ಎಂದು ತಂಡದವರು ತಿಳಿಸಿದ್ದಾರೆ. ಈ ಬೆಳವಣಿಗೆಯಿಂದ ರಾಜು ಫ್ಯಾನ್ಸ್ ವಲಯದಲ್ಲಿ ಆತಂಕ ಮನೆ ಮಾಡಿದೆ.
‘ರಾಜು ಅವರಿಗೆ ಹೃದಯಾಘಾತ ಆಗಿರುವುದು ನಿಜ. ಜಿಮ್ನಲ್ಲಿ ಅವರು ಕಸರತ್ತು ನಡೆಸುತ್ತಿದ್ದರು. ಅವರು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಯಾವುದೇ ಆತಂಕ ಬೇಡ ಎಂದು’ ಅವರ ತಂಡದವರು ಈ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ.
ದಕ್ಷಿಣ ದೆಹಲಿಯಲ್ಲಿರುವ ಜಿಮ್ನಲ್ಲಿ ರಾಜು ಅವರು ವರ್ಕೌಟ್ ಮಾಡುತ್ತಿದ್ದರು. ಅವರಿಗೆ ಏನೋ ಸರಿ ಇಲ್ಲ ಎನಿಸಿದೆ. ಆ ಸಂದರ್ಭದಲ್ಲೇ ರಾಜು ನೆಲಕ್ಕೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರು ಬೇಗ ಗುಣಮುಖರಾಗಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ. ಇತ್ತೀಚೆಗೆ ಹಲವು ನಟರಿಗೆ ಹೃದಯಾಘಾತವಾಗಿದೆ. ಇದೇ ಸಂದರ್ಭದಲ್ಲಿ ರಾಜು ಅವರಿಗೂ ಹಾರ್ಟ್ ಅಟ್ಯಾಕ್ ಆಗಿದ್ದು ಸಾಕಷ್ಟು ಆತಂಕ ಮೂಡಿಸಿದೆ.
ಇದನ್ನೂ ಓದಿ: ‘ನಾನು ತಳ್ಳಿದ್ರೆ 25 ಅಡಿ ದೂರ ಹೋಗಿ ಬೀಳ್ತೀಯಾ’; ಆವಾಜ್ ಹಾಕಲು ಬಂದ ಉದಯ್ಗೆ ಗುರೂಜಿ ಎಚ್ಚರಿಕೆ
ಹಿಂದಿ ಚಿತ್ರರಂಗದಿಂದ ರಾಜು ಶ್ರೀವಾತ್ಸವ್ ಬಣ್ಣದ ಬದುಕು ಆರಂಭಿಸಿದರು. ‘ಮೈನೆ ಪ್ಯಾರ್ ಕಿಯಾ’, ‘ಬಾಜಿಗರ್’, ‘ಬಾಂಬೆ ಟು ಗೋವಾ’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ನಂತರ ಸ್ಟ್ಯಾಂಡಪ್ ಕಾಮಿಡಿಯನ್ ಆಗಿಯೂ ಗುರುತಿಸಿಕೊಂಡರು. ‘ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್’ನಲ್ಲಿ ಎರಡನೇ ರನ್ನರ್ ಅಪ್ ಆದರು. ಇನ್ನು, ರಿಯಾಲಿಟಿ ಶೋನಲ್ಲೂ ಶ್ರೀವಾತ್ಸವ್ ಭಾಗವಹಿಸಿದ್ದರು. ಹಿಂದಿ ಬಿಗ್ ಬಾಸ್ನ ಮೂರನೇ ಸೀಸನ್ಗೆ ಅವರು ಸ್ಪರ್ಧಿ ಆಗಿದ್ದರು. ‘ಕಾಮಿಡಿ ಕಾ ಮಹಾ ಮುಕ್ಬಾಲ್’, ‘ನಾಚ್ ಬಲಿಯೇ’ ರಿಯಾಲಿಟಿ ಶೋನ ಆರನೇ ಸೀಸನ್ಗೆ ಅವರು ಸ್ಪರ್ಧಿ ಆಗಿದ್ದರು.
Published On - 3:30 pm, Wed, 10 August 22