ಫಿಟ್ನೆಸ್ ಟ್ರೇನರ್​ಗೆ ಈ ಸೆಲೆಬ್ರಿಟಿಗಳು ನೀಡುತ್ತಿದ್ದಾರೆ ದೊಡ್ಡ ಮೊತ್ತದ ಸಂಭಾವನೆ

| Updated By: ರಾಜೇಶ್ ದುಗ್ಗುಮನೆ

Updated on: Dec 29, 2023 | 10:37 AM

ದೀಪಿಕಾ ಪಡುಕೋಣೆ, ಮಲೈಕಾ ಅರೋರಾ. ಆಲಿಯಾ ಭಟ್ ಸೇರಿದಂತೆ ಅನೇಕರು ತಮ್ಮದೇ ಆದ ಪರ್ಸನಲ್​ ಟ್ರೇನರ್ ಹೊಂದಿದ್ದಾರೆ. ಈ ತರಬೇತುದಾರರಿಗೆ ಸೆಲೆಬ್ರಿಟಿಗಳು ದೊಡ್ಡ ಮೊತ್ತದ ಸಂಭಾವನೆ ನೀಡುತ್ತಾರೆ. ಆ ಬಗ್ಗೆ ಇಲ್ಲಿದೆ ವಿವರ.

ಫಿಟ್ನೆಸ್ ಟ್ರೇನರ್​ಗೆ ಈ ಸೆಲೆಬ್ರಿಟಿಗಳು ನೀಡುತ್ತಿದ್ದಾರೆ ದೊಡ್ಡ ಮೊತ್ತದ ಸಂಭಾವನೆ
ಫಿಟ್ನೆಸ್ ಟ್ರೇನರ್​ಗೆ ಈ ಸೆಲೆಬ್ರಿಟಿಗಳು ನೀಡುತ್ತಿದ್ದಾರೆ ದೊಡ್ಡ ಮೊತ್ತದ ಸಂಭಾವನೆ
Follow us on

ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಫಿಟ್ನೆಸ್​ಗೆ ಹೆಚ್ಚು ಒತ್ತು ನೀಡುತ್ತಾರೆ. ನಿತ್ಯ ಜಿಮ್​ನಲ್ಲಿ ಸಾಕಷ್ಟು ಸಮಯ ಕಳೆಯುತ್ತಾರೆ. ದೀಪಿಕಾ ಪಡುಕೋಣೆ, ಮಲೈಕಾ ಅರೋರಾ. ಆಲಿಯಾ ಭಟ್ (Alia Bhatt) ಸೇರಿದಂತೆ ಅನೇಕರು ತಮ್ಮದೇ ಆದ ಪರ್ಸನಲ್​ ಟ್ರೇನರ್ ಹೊಂದಿದ್ದಾರೆ. ಸಿನಿಮಾ ಶೂಟಿಂಗ್​ಗೆ ತೆರಳಿದ ಸಂದರ್ಭದಲ್ಲಿ ಕೆಲವೊಮ್ಮೆ ಇವರನ್ನೂ ಕರೆದುಕೊಂಡು ಹೋದ ಉದಾಹರಣೆ ಇದೆ. ಈ ತರಬೇತುದಾರರಿಗೆ ಸೆಲೆಬ್ರಿಟಿಗಳು ದೊಡ್ಡ ಮೊತ್ತದ ಸಂಭಾವನೆ ನೀಡುತ್ತಾರೆ. ಆ ಬಗ್ಗೆ ಇಲ್ಲಿದೆ ವಿವರ.

ಹೃತಿಕ್ ರೋಷನ್

ನಟ ಹೃತಿಕ್ ರೋಷನ್ ಅವರು ಬಾಲಿವುಡ್​ನ ಹ್ಯಾಂಡ್ಸಮ್ ಹಂಕ್. ಅವರು ಫಿಟ್ನೆಸ್​ಗೆ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ. ‘ವಾರ್’ ಚಿತ್ರದಲ್ಲಿ ಅವರ ಕಟ್ಟುಮಸ್ತಾದ ದೇಹ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಅವರಿಗೆ ಕ್ರಿಸ್ ಗೇಥಿನ್ ಅವರು ಟ್ರೇನಿಂಗ್ ನೀಡುತ್ತಾರೆ. ಇದಕ್ಕೆ ಪ್ರತಿಯಾಗಿ ಅವರು ಪ್ರತಿ ತಿಂಗಳು 20 ಲಕ್ಷ ರೂಪಾಯಿ ಪಡೆಯುತ್ತಾರೆ.  ಆಹಾರ ಕ್ರಮವನ್ನೂ ಅವರೇ ಸೂಚಿಸುತ್ತಾರೆ ಎನ್ನಲಾಗಿದೆ.

ಕತ್ರಿನಾ ಕೈಫ್

ನಟಿ ಕತ್ರಿನಾ ಕೈಫ್ ಅವರು ಫಿಟ್ನೆಸ್ ವಿಚಾರದಲ್ಲಿ ಅನೇಕರಿಗೆ ಮಾದರಿ. ಈ ವರ್ಷ ಅವರ ನಟನೆಯ ‘ಟೈಗರ್ 3’ ಸಿನಿಮಾ ರಿಲೀಸ್ ಆಗಿ ಮಿಶ್ರಪ್ರತಿಕ್ರಿಯೆ ಪಡೆಯಿತು. ಈ ಸಿನಿಮಾದಲ್ಲಿ ಕತ್ರಿನಾ ಅವರು ಆ್ಯಕ್ಷನ್ ಮೆರೆದಿದ್ದಾರೆ. ಕತ್ರಿನಾಗೆ ಯಾಸ್ಮಿನ್ ಕರಾಚಿವಾಲ ಟ್ರೇನ್ ಮಾಡುತ್ತಾರೆ. ಪ್ರತಿ ತಿಂಗಳು ಅವರಿಗೆ ಕತ್ರಿನಾ 45 ಸಾವಿರ ರೂಪಾಯಿ ಸಂಭಾವನೆ ನೀಡುತ್ತಾರೆ.

ಆಲಿಯಾ ಭಟ್

ನಟಿ ಆಲಿಯಾ ಭಟ್ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಗ್ಲಾಮರ್ ಹಾಗೂ ಆ್ಯಕ್ಷನ್ ಎರಡೂ ರೀತಿಯ ಸಿನಿಮಾಗಳಿಗೆ ಅವರು ಹೊಂದಿಕೆ ಆಗುತ್ತಾರೆ. ಆಲಿಯಾ ಭಟ್ ಅವರಿಗೂ ಟ್ರೇನಿಂಗ್ ನೀಡೋದು ಯಾಸ್ಮಿನ್. ಆಲಿಯಾ ಕೂಡ 45 ಸಾವಿರ ರೂಪಾಯಿ ಹಣ ನೀಡುತ್ತಿದ್ದಾರೆ.

ಕರೀನಾ ಕಪೂರ್

ಕರೀನಾ ಕಪೂರ್ ಅವರು ಫಿಟ್ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಅವರು ಮಗು ಜನಿಸಿದ ಬಳಿಕವೂ ಗ್ಲಾಮರ್ ಕಾಯ್ದುಕೊಂಡಿದ್ದಾರೆ. ಅವರಿಗೆ ತರಬೇತಿ ನೀಡೋದು ನಮ್ರತಾ ಪುರೋಹಿತ್. ಕರೀನಾ ಕಪೂರ್ ಜಿಮ್​ನಲ್ಲಿ ತರಬೇತಿ ಪಡೆಯಲು ನಮ್ರತಾಗೆ 65 ಸಾವಿರ ರೂಪಾಯಿ ಸಂಭಾವನೆ ನೀಡುತ್ತಾರೆ. ವಿಶೇಷ ಎಂದರೆ ನಮ್ರತಾ ಅವರು ಯುವರಾಜ್ ಸಿಂಗ್, ಮಲೈಕಾ ಅರೋರಾ, ಸೋನಾಕ್ಷಿ ಸಿನ್ಹಾ, ಸಾರಾ ಅಲಿ ಖಾನ್ ಅವರಿಗೂ ತರಬೇತಿ ನೀಡುತ್ತಾರೆ. ಅವರಿಂದ ದೊಡ್ಡ ಮೊತ್ತದ ಹಣ ಪಡೆಯುತ್ತಾರೆ.

ದೀಪಿಕಾ ಪಡುಕೋಣೆ

ನಟಿ ದೀಪಿಕಾ ಪಡುಕೋಣೆ ಅವರಿಗೆ ಸಖತ್ ಬೇಡಿಕೆ ಇದೆ. ‘ಫೈಟರ್’ ಸಿನಿಮಾದಲ್ಲಿ ದೀಪಿಕಾ ನಟಿಸಿದ್ದಾರೆ. ಅವರನ್ನು ಯಾಸ್ಮಿನ್ ಕರಾಚಿವಾಲ ಅವರು ಟ್ರೇನ್ ಮಾಡುತ್ತಾರೆ. ಜಿಮ್​ನಲ್ಲಿ ಪ್ರತಿ ವರ್ಕೌಟ್​ನ ಹೇಳಿ ಮಾಡಿಸುತ್ತಾರೆ. ಇದಕ್ಕಾಗಿ ಅವರು 45 ಸಾವಿರ ರೂಪಾಯಿ ಪಡೆಯುತ್ತಾರೆ.

ಇದನ್ನೂ ಓದಿ: ‘ಬಿಗ್ ಬಾಸ್ ಬಾಗಿಲು ತೆಗೆಯಿರಿ’; ತಂದೆ-ತಾಯಿ ನೋಡಿ ಗಳಗಳನೆ ಅತ್ತ ಪ್ರತಾಪ್

ಜಾಕ್ವೆಲಿನ್ ಫರ್ನಾಂಡಿಸ್

ಜಾಕ್ವೆಲಿನ್ ಫರ್ನಾಂಡಿಸ್ ಅವರು ಜಿಮ್​ನಲ್ಲಿ ಹೆಚ್ಚು ಹೊತ್ತು ಕಳೆಯಲು ಇಷ್ಟಪಡುತ್ತಾರೆ. ಅವರಿಗೆ ಸಿನಿ ಜೋರ್ಡೈನ್ ಟ್ರೇನ್ ಮಾಡುತ್ತಾರೆ. ಇದಕ್ಕಾಗಿ ಅವರು 30 ಸಾವಿರ ರೂಪಾಯಿ ನೀಡುತ್ತಿದ್ದಾರೆ.

ಕಂಗನಾ ರಣಾವತ್

‘ಎಮರ್ಜೆನ್ಸಿ’ ಚಿತ್ರದಲ್ಲಿ ನಟಿ ಕಂಗನಾ ರಣಾವತ್ ನಟಿಸುತ್ತಿದ್ದಾರೆ. ಅವರು ಸ್ಟ್ರಿಕ್ಟ್ ಡಯಟ್ ಮಾಡುತ್ತಾರೆ. ಇವರಿಗೆ ಫಿಟ್ನೆಸ್ ತರಬೇತಿ ನೀಡೋದು ಯೋಗೇಶ್ ಭತೀಜಾ. ಅವರಿಗೆ ಪ್ರತಿ ತಿಂಗಳು 45 ಸಾವಿ ರೂಪಾಯಿ ಸಿಗುತ್ತಿದೆ.

ಮಲೈಕಾ ಅರೋರಾ

ಮಲೈಕಾ ಅರೋರಾ ಅವರು ಸಖತ್ ಫಿಟ್ ಆ್ಯಂಡ್ ಗ್ಲಾಮರ್ ಆಗಿದ್ದಾರೆ. ಅವರ ಅನೇಕರಿಗೆ ಮಾದರಿ. ಅವರಿಗೆ ನಮ್ರತಾ ಪುರೋಹಿತ್ ಟ್ರೇನಿಂಗ್ ನೀಡುತ್ತಾರೆ. ಅವರಿಗೆ ಪ್ರತಿ ತಿಂಗಳಿಗೆ 73 ಸಾವಿರ ರೂಪಾಯಿ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:49 am, Fri, 29 December 23