‘ಧೂಮ್ 4’ ಚಿತ್ರದಲ್ಲಿ ಶಾರುಖ್ ಖಾನ್? ಇಲ್ಲಿದೆ ಅಸಲಿ ವಿಚಾರ
‘ಧೂಮ್’ ಸರಣಿಯಲ್ಲಿ ಕಥಾ ನಾಯಕನಿಗೆ ನೆಗೆಟಿವ್ ಶೇಡ್ ಇರುತ್ತದೆ. ಕಥಾ ನಾಯಕನೇ ರಾಬರಿ ಮಾಡುತ್ತಾನೆ. ಶಾರುಖ್ ಖಾನ್ ಅವರು ‘ಡಾನ್’ ಸಿನಿಮಾದಲ್ಲಿ ಇದೇ ರೀತಿಯ ಪಾತ್ರ ಮಾಡಿ ಗಮನ ಸೆಳೆದಿದ್ದರು. ‘ಧೂಮ್ 4’ ಚಿತ್ರದಲ್ಲಿ ಅವರು ಲೀಡ್ ರೋಲ್ ಮಾಡಬೇಕು ಎಂಬುದು ಅಭಿಮಾನಿಗಳ ಕೋರಿಕೆ ಆಗಿತ್ತು.
ಶಾರುಖ್ ಖಾನ್ (Shah Rukh Khan) ಅವರು ಆ್ಯಕ್ಷನ್ ಸಿನಿಮಾಗಳ ಮೂಲಕ ಈ ವರ್ಷ ದೊಡ್ಡ ಗೆಲುವು ಕಂಡಿದ್ದಾರೆ. ‘ಪಠಾಣ್’ ಹಾಗೂ ‘ಜವಾನ್’ ಸಿನಿಮಾಗಳು ಸೂಪರ್ ಹಿಟ್ ಆದವು. ‘ಡಂಕಿ’ ಸಿನಿಮಾ ವಿಮರ್ಶೆಯಲ್ಲಿ ಮೆಚ್ಚುಗೆ ಪಡೆದರೂ ಕಲೆಕ್ಷನ್ ಅಂದುಕೊಂಡ ಮಟ್ಟದಲ್ಲಿ ಆಗುತ್ತಿಲ್ಲ. ಸದ್ಯ ಶಾರುಖ್ ಖಾನ್ ಅವರು ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಅವರು ‘ಧೂಮ್ 4’ (Dhoom 4) ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಸುದ್ದಿ ಹರಿದಾಡಿತ್ತು. ಇದಕ್ಕೆ ಸ್ಪಷ್ಟನೆ ಸಿಕ್ಕಿದೆ.
‘ಧೂಮ್’ ಹಿಟ್ ಸರಣಿಗಳಲ್ಲಿ ಒಂದು. ‘ಧೂಮ್’ ಸಿನಿಮಾದಲ್ಲಿ ಜಾನ್ ಅಬ್ರಹಾಂ, ‘ಧೂಮ್ 2’ನಲ್ಲಿ ಹೃತಿಕ್ ರೋಷನ್, ‘ಧೂಮ್ 3’ ಚಿತ್ರದಲ್ಲಿ ಆಮಿರ್ ಖಾನ್ ಮುಖ್ಯಭೂಮಿಕೆ ನಿರ್ವಹಿಸಿದ್ದರು. ‘ಯಶ್ ರಾಜ್ ಫಿಲ್ಮ್ಸ್’ ಮೂಲಕ ಆದಿತ್ಯ ಚೋಪ್ರಾ ಅವರು ಈ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಅವರು ಈಗ ‘ಧೂಮ್ 4’ ಬಗ್ಗೆ ಆಲೋಚಿಸುತ್ತಿದ್ದಾರೆ ಎನ್ನಲಾಗಿದೆ.
‘ಯಶ್ ರಾಜ್ ಫಿಲ್ಮ್ಸ್’ ಹಾಗೂ ಶಾರುಖ್ ಖಾನ್ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಈ ವರ್ಷ ರಿಲೀಸ್ ಆದ ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾವನ್ನು ಯಶ್ ರಾಜ್ ಫಿಲ್ಮ್ಸ್ ನಿರ್ಮಾಣ ಮಾಡಿತ್ತು. ಈಗ ಆದಿತ್ಯ ಚೋಪ್ರಾ ಅವರು ‘ಧೂಮ್ 4’ ಚಿತ್ರಕ್ಕೆ ಶಾರುಖ್ ಖಾನ್ ಅವರನ್ನು ಅಪ್ರೋಚ್ ಮಾಡಿದ್ದಾರೆ ಎಂದು ವರದಿ ಆಗಿದೆ. ಆದರೆ, ಇದರಲ್ಲಿ ಸತ್ಯ ಇಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ: ‘ವಯಸ್ಸಿಗೆ ತಕ್ಕ ಪಾತ್ರ ಮಾಡ್ತೀನಿ’: ಮುಂದಿನ ಪ್ಲ್ಯಾನ್ ತಿಳಿಸಿದ ಶಾರುಖ್ ಖಾನ್
‘ಧೂಮ್’ ಸರಣಿಯಲ್ಲಿ ಕಥಾ ನಾಯಕನಿಗೆ ನೆಗೆಟಿವ್ ಶೇಡ್ ಇರುತ್ತದೆ. ಕಥಾ ನಾಯಕನೇ ರಾಬರಿ ಮಾಡುತ್ತಾನೆ. ಶಾರುಖ್ ಖಾನ್ ಅವರು ‘ಡಾನ್’ ಸಿನಿಮಾದಲ್ಲಿ ಇದೇ ರೀತಿಯ ಪಾತ್ರ ಮಾಡಿ ಗಮನ ಸೆಳೆದಿದ್ದರು. ‘ಧೂಮ್ 4’ ಚಿತ್ರದಲ್ಲಿ ಅವರು ಲೀಡ್ ರೋಲ್ ಮಾಡಬೇಕು ಎಂಬುದು ಅಭಿಮಾನಿಗಳ ಕೋರಿಕೆ ಆಗಿತ್ತು. ಶಾರುಖ್ ಹಾಗೂ ರಾಮ್ ಚರಣ್ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ವರದಿ ಆಗಿತ್ತು. ಆದರೆ, ಸದ್ಯ ಯಾವುದೂ ಫೈನಲ್ ಆಗಿಲ್ಲ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಇದನ್ನೂ ಓದಿ: ‘ಡಂಕಿ’ ಸಿನಿಮಾದ ಬಜೆಟ್ ಎಷ್ಟು ಅಂತ ಕೇಳಿದವರಿಗೆ ಶಾರುಖ್ ಖಾನ್ ಕೊಟ್ಟ ಉತ್ತರ ಏನು?
ಶಾರುಖ್ ಖಾನ್ ಅವರ ನಟನೆಯ ‘ಡಂಕಿ’ ಸಿನಿಮಾ ಡಿಸೆಂಬರ್ 21ರಂದು ರಿಲೀಸ್ ಆಯಿತು. ಏಳು ದಿನದಲ್ಲಿ ಈ ಚಿತ್ರ 150 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಸಿನಿಮಾದಿಂದ ಶಾರುಖ್ ಖಾನ್ ಅವರು ಸಾಧಾರಣ ಗೆಲುವು ಕಂಡಿದ್ದಾರೆ. ರಾಜ್ಕುಮಾರ್ ಹಿರಾನಿ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಶಾರುಖ್ ಖಾನ್ ಜೊತೆಗೆ ತಾಪ್ಸೀ ಪನ್ನು, ವಿಕ್ಕಿ ಕೌಶಲ್, ಬೊಮನ್ ಇರಾನಿ ಮೊದಲಾದವರು ನಟಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.