ನಟಿ ಆಲಿಯಾ ಭಟ್ (Alia Bhatt) ಅವರದ್ದು ಈಗ ಹ್ಯಾಪಿ ಫ್ಯಾಮಿಲಿ. ಕೈತುಂಬ ಕೆಲಸ, ಸಾಕಷ್ಟು ಕಾಳಜಿ ತೋರುವ ಗಂಡ, ಮುದ್ದಾದ ಮಗಳು. ಇವರು ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಈಗ ಆಲಿಯಾ ಭಟ್ ಅವರು ಒಂದು ತಪ್ಪೊಪ್ಪಿಗೆ ನೀಡಿದ್ದಾರೆ. ತಾವು ಮಾಡಿರೋ ತಪ್ಪನ್ನು ಮಗಳಿಗೆ ಮಾಡೋಕೆ ಬಿಡಲ್ಲ ಎಂದು ಅವರು ಓಪನ್ ಆಗಿ ಹೇಳಿದ್ದಾರೆ. ಅಷ್ಟಕ್ಕೂ ಅವರಿಗೆ ಕಾಡುತ್ತಿರುವ ಬೇಸರ ಏನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
‘ನಾನು ಹಾಲಿವುಡ್ನ ಹಾರ್ಟ್ ಆಫ ಸ್ಟೋನ್ ಸಿನಿಮಾ ಶೂಟಿಂಗ್ಗಾಗಿ ಲಂಡನ್ನಲ್ಲಿ ಇದ್ದೆ. ನಾನು ಮೂರು ದಿನ ನಿದ್ದೆ ಮಾಡಿರಲಿಲ್ಲ. ನಾನು ಒಳ್ಳೆಯ ಮಗಳಲ್ಲ ಎನ್ನುವ ಭಾವನೆ ನನ್ನನ್ನು ಕಾಡುತ್ತಿತ್ತು’ ಎಂದಿದ್ದಾರೆ ಆಲಿಯಾ ಭಟ್. ಮಗಳನ್ನು 20 ವರ್ಷದವರೆಗೆ ಮನೆಯಿಂದ ಹೊರಗೆ ಹೋಗಿ ಬೇರೆ ಕಡೆ ಸೆಟಲ್ ಆಗೋಕೆ ಬಿಡಲ್ಲ ಎಂಬರ್ಥದಲ್ಲೂ ಆಲಿಯಾ ಮಾತನಾಡಿದ್ದಾರೆ.
‘ನಾನು ಮನೆಯಿಂದ ಹೊರಗೆ ಹೋದಾಗ ನನಗೆ 23 ವರ್ಷ. ಶೂಟಿಂಗ್ ಕಾರಣದಿಂದ ಮನೆಯಿಂದ ದೂರವೇ ಇರುತ್ತಿದ್ದೆ. ಯಾವ ನಗರ ಅನ್ನೋದು ಕೂಡ ನನಗೆ ಗೊತ್ತಿರುತ್ತಿರಲಿಲ್ಲ. ನಾನು ಮನೆಯನ್ನು ಬೇಗ ತೊರೆದೆ ಎಂದು ನನಗೆ ಅನಿಸೋಕೆ ಆರಂಭವಾಯಿತು. ಇದನ್ನು ನನ್ನ ಮಗಳಿಗೆ ಆಗೋಕೆ ಬಿಡಲ್ಲ’ ಎಂದಿದ್ದಾರೆ ಆಲಿಯಾ ಭಟ್.
‘ನಾನು ಭವಿಷ್ಯದ ಬಗ್ಗೆ ಆಲೋಚಿಸುವ ವ್ಯಕ್ತಿ. ಆದರೆ, ರಾಹಾ ವಿಚಾರದಲ್ಲಿ ಹಾಗಾಗುತ್ತಿಲ್ಲ. ರಹಾಗೆ ಕೆಳಗೆ ಬೀಳಲು ಅವಕಾಶವೇ ಕೊಡದೆ ಇದ್ದರೆ ಅವಳಿಗೆ ಹೇಗೆ ಎದ್ದೇಳಬೇಕು ಎಂಬುದೇ ಗೊತ್ತಾಗುವುದಿಲ್ಲ ಎಂದು ನನ್ನ ತಂದೆ ಯಾವಾಗಲೂ ನನಗೆ ಹೇಳುತ್ತಾ ಇರುತ್ತಾರೆ’ ಎಂದು ಆಲಿಯಾ ವಿವರಿಸಿದ್ದಾರೆ.
ಇದನ್ನೂ ಓದಿ: Met Gala 2024: ಸೀರೆಯಲ್ಲಿ ಮೆಟ್ ಗಾಲಾ ರೆಡ್ ಕಾರ್ಪೆಟ್ನಲ್ಲಿ ಮಿಂಚಿದ ಆಲಿಯಾ ಭಟ್
ಆಲಿಯಾ ಭಟ್ ಅವರು ಮದುವೆ ಹಾಗೂ ಮಗುವಿಗಾಗಿ ಎರಡು ವರ್ಷ ನಟನೆಯಿಂದ ದೂರ ಇದ್ದರು. ಈಗ ಅವರು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಅವರ ಮುಂದಿನ ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆ್ಯಂಡ್ ವಾರ್’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.