‘ನಾನು ಕಷ್ಟ ಅನುಭವಿಸಿದ್ದೆ ಎಂದಲ್ಲ ಹೇಳಲ್ಲ’; ಚಿನ್ನದ ಸ್ಪೂನ್ ಹಿಡಿದು ಹುಟ್ಟಿದ ಅಮಿತಾಭ್ ಮೊಮ್ಮಗಳ ಮಾತು

|

Updated on: Sep 22, 2023 | 2:41 PM

ಬಹುತೇಕ ಸ್ಟಾರ್ ಕಿಡ್​ಗಳ ಜೀವನ ಸೆಟಲ್ ಆಗಿರುತ್ತದೆ. ಸ್ಟಾರ್ ಕಿಡ್ ಅನನ್ಯಾ ಪಾಂಡೆ ಅವರು ‘ನಾನು ಚಿತ್ರರಂಗಕ್ಕೆ ಬರುವಾಗ ಸಾಕಷ್ಟು ಕಷ್ಟ ಅನುಭವಿಸಿದೆ’ ಎಂದು ಹೇಳಿ ಟ್ರೋಲ್ ಆಗಿದ್ದರು. ಆದರೆ, ನವ್ಯಾ ನವೇಲಿ ಆ ರೀತಿ ಅಲ್ಲ. ಅವರು ಇರುವ ವಿಚಾರವನ್ನು ನೇರವಾಗಿ ಒಪ್ಪಿಕೊಂಡಿದ್ದಾರೆ.

‘ನಾನು ಕಷ್ಟ ಅನುಭವಿಸಿದ್ದೆ ಎಂದಲ್ಲ ಹೇಳಲ್ಲ’; ಚಿನ್ನದ ಸ್ಪೂನ್ ಹಿಡಿದು ಹುಟ್ಟಿದ ಅಮಿತಾಭ್ ಮೊಮ್ಮಗಳ ಮಾತು
ನವ್ಯಾ-ಅಮಿತಾಭ್
Follow us on

ಸೆಲೆಬ್ರಿಟಿಗಳ ಮಕ್ಕಳು ಎಂದರೆ ಸಾಕು ಚಿತ್ರರಂಗದಲ್ಲಿ ಸುಲಭದಲ್ಲಿ ಅವಕಾಶ ಸಿಗುತ್ತದೆ. ಆದರೆ, ಎಲ್ಲಾ ಸೆಲೆಬ್ರಿಟಿ ಮಕ್ಕಳು ಸಿನಿಮಾ ಮಾಡೋಕೆ ಇಷ್ಟಪಡುವುದಿಲ್ಲ. ಕೆಲವರು ನಟನೆ ಬಿಟ್ಟು ಉದ್ಯಮದ ಕಡೆ ಮುಖ ಮಾಡಿದ್ದಿದೆ. ಅಮಿತಾಭ್ ಬಚ್ಚನ್ ಮೊಮ್ಮೊಗಳು, ಶ್ವೇತಾ ಬಚ್ಚನ್ ಮಗಳು ನವ್ಯಾ ನವೇಲಿ ಅವರು ಉದ್ಯಮದ ಕಡೆ ಒಲವು ಹೊಂದಿದ್ದಾರೆ. ಅವರು ಎನ್​ಜಿಒ ಕೂಡ ನಡೆಸುತ್ತಿದ್ದಾರೆ. ಅವರು ತಮ್ಮ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಯಾವುದೇ ಕಷ್ಟ ಅನುಭವಿಸಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ.

ಬಹುತೇಕ ಸ್ಟಾರ್ ಕಿಡ್​ಗಳ ಜೀವನ ಸೆಟಲ್ ಆಗಿರುತ್ತದೆ. ಸ್ಟಾರ್ ಕಿಡ್ ಅನನ್ಯಾ ಪಾಂಡೆ ಅವರು ‘ನಾನು ಚಿತ್ರರಂಗಕ್ಕೆ ಬರುವಾಗ ಸಾಕಷ್ಟು ಕಷ್ಟ ಅನುಭವಿಸಿದೆ’ ಎಂದು ಹೇಳಿ ಟ್ರೋಲ್ ಆಗಿದ್ದರು. ಆದರೆ, ನವ್ಯಾ ನವೇಲಿ ಆ ರೀತಿ ಅಲ್ಲ. ಅವರು ಇರುವ ವಿಚಾರವನ್ನು ನೇರವಾಗಿ ಒಪ್ಪಿಕೊಂಡಿದ್ದಾರೆ. ಈ ಮೂಲಕ ಮೆಚ್ಚುಗೆ ಪಡೆದಿದ್ದಾರೆ.

ನವ್ಯಾ ಅವರು ಎನ್​ಜಿಒ ನಡೆಸುತ್ತಿದ್ದಾರೆ. ಇದರ ಜೊತೆಗೆ ತಂದೆಯ ಉದ್ಯಮಕ್ಕೂ ಸಹಾಯ ಮಾಡುತ್ತಿದ್ದಾರೆ. ಅವರು ನಿಖಿಲ್ ಕಾಮತ್ ಅವರ ಪಾಡ್​ಕಾಸ್ಟ್​ನಲ್ಲಿ ಮಾತನಾಡಿದ್ದಾರೆ. ‘ನನಗೆ ಕಷ್ಟದ ದಿನಗಳು ಇದ್ದವು ಎಂದು ನಾನು ಹೇಳಲಾರೆ. ನನಗೆ ಅದರ ಅನುಭವವೇ ಆಗಿಲ್ಲ. ನಾನು ಶಿಕ್ಷಣ ಮುಗಿಸುವಾಗ 21 ವರ್ಷ. ನನಗೆ ಇದನ್ನು ಮಾಡಬೇಕು ಎಂದು ನಾನು ಹೇಳಿದೆ. ಅದು ಹಾಗೆಯೇ ಆಯಿತು. ಇಷ್ಟು ಸುಲಭದಲ್ಲಿ ಯಾರಿಗೂ ಅವಕಾಶ ಸಿಗುವುದಿಲ್ಲ’ ಎಂದಿದ್ದಾರೆ ನವ್ಯಾ.

‘ನನಗೆ ದೊಡ್ಡ ಅಡ್ವಾಂಟೇಜ್ ಇದೆ. ಎಲ್ಲವನ್ನೂ ನಾನು ತುಂಬಾ ಸುಲಭವಾಗಿ ಪಡೆದಿದ್ದೆನೆ. ಅದರೊಂದಿಗೆ ಒಂದಷ್ಟು ಒತ್ತಡಗಳು ಬರುತ್ತವೆ. ಆದರೆ ನಾನು ಅದರ ಬಗ್ಗೆ ದೂರಲಾರೆ’ ಎಂದಿದ್ದಾರೆ ನವ್ಯಾ. ಅವರು ಇಷ್ಟು ಪ್ರಬುದ್ಧರಾಗಿ ಮಾತನಾಡಿದ್ದು ಅನೇಕರಿಗೆ ಇಷ್ಟವಾಗಿದೆ.

ಇದನ್ನೂ ಓದಿ: ‘ಇಂಡಿಯಾ’ ಹೆಸರು ಬದಲಾವಣೆ ಚರ್ಚೆ ಬೆನ್ನಲ್ಲೇ ‘ಭಾರತ್​ ಮಾತಾ ಕಿ ಜೈ’ ಎಂದ ಅಮಿತಾಭ್​ ಬಚ್ಚನ್​

ಅಮಿತಾಭ್ ಮಗಳು ಶ್ವೇತಾ. ಅವರು ಉದ್ಯಮಿ ನಿಖಿಲ್ ನಂದಾ ಅವರನ್ನು ವಿವಾಹ ಆದರು. ನವ್ಯಾ ಅವರು 12ನೇ ತರಗತಿವರೆಗೆ ದೆಹಲಿಯಲ್ಲಿ ಶಿಕ್ಷಣ ಪಡೆದರು. ಆ ಬಳಿಕ ಇಂಗ್ಲೆಂಡ್ ಹಾಗೂ ಅಮೆರಿಕದಲ್ಲಿ ಅವರು ಶಿಕ್ಷಣ ಪಡೆದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ