ಬಾಯ್​ಫ್ರೆಂಡ್ ಜೊತೆ ಇಲಿಯಾನಾ ಸುತ್ತಾಟ; ನಟಿಯ ಮಗುವಿಗೆ ತಂದೆ ಇವರೇನಾ?  

ಇಲಿಯಾನಾ ಬಾಲಿವುಡ್​ಗೆ ತೆರಳಿದ ಸಂದರ್ಭದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಕೀಳಾಗಿ ಮಾತನಾಡಿದ್ದರು. ಈ ವಿಚಾರದಲ್ಲಿ ಅವರು ಸಾಕಷ್ಟು ಟೀಕೆ ಎದುರಿಸಿದ್ದರು. ಈಗ ಇಲಿಯಾನ ವೈಯಕ್ತಿಕ ಜೀವನ ಚರ್ಚೆಯಲ್ಲಿದೆ.

ಬಾಯ್​ಫ್ರೆಂಡ್ ಜೊತೆ ಇಲಿಯಾನಾ ಸುತ್ತಾಟ; ನಟಿಯ ಮಗುವಿಗೆ ತಂದೆ ಇವರೇನಾ?  
ಇಲಿಯಾನಾ
Follow us
ರಾಜೇಶ್ ದುಗ್ಗುಮನೆ
|

Updated on: Jun 03, 2023 | 7:00 AM

ನಟಿ ಇಲಿಯಾನಾ ಡಿಕ್ರೂಜ್ (Ileana D’Cruz) ಅವರು ಆಗಾಗ ಸುದ್ದಿ ಆಗುತ್ತಿರುತ್ತಾರೆ. ಈಗ ಅವರ ಹೆಸರು ಸಾಕಷ್ಟು ಚರ್ಚೆಯಲ್ಲಿದೆ. ಇದಕ್ಕೆ ಕಾರಣ ಅವರು ಪ್ರೆಗ್ನೆಂಟ್ ಆಗಿದ್ದು ಹಾಗೂ ಮಗುವಿನ ತಂದೆ ಯಾರು ಎಂಬುದನ್ನು ರಿವೀಲ್ ಮಾಡದೇ ಇರುವುದು. ಈ ಕಾರಣಕ್ಕೆ ಅವರು ಸಾಕಷ್ಟು ಚರ್ಚೆಯಲ್ಲಿದ್ದಾರೆ. ಈಗ ಇಲಿಯಾನಾ ಬಾಯ್​ಫ್ರೆಂಡ್ ಜೊತೆ ಸಮಯ ಕಳೆದಿದ್ದಾರೆ. ಅವರ ಕೈ ಫೋಟೋ ಹಂಚಿಕೊಂಡಿದ್ದಾರೆ. ಆದರೆ, ಎಲ್ಲಿಯೂ ಅವರು ಹೆಸರನ್ನು ರಿವೀಲ್ ಮಾಡಿಲ್ಲ. ಈ ಮೂಲಕ ಅವರು ಗುಟ್ಟನ್ನು ಮುಂದುವರಿಸಿದ್ದಾರೆ.

ಇಲಿಯಾನಾ ಬಾಲಿವುಡ್​ಗೆ ತೆರಳಿದ ಸಂದರ್ಭದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಕೀಳಾಗಿ ಮಾತನಾಡಿದ್ದರು. ಈ ವಿಚಾರದಲ್ಲಿ ಅವರು ಸಾಕಷ್ಟು ಟೀಕೆ ಎದುರಿಸಿದ್ದರು. ಈಗ ಇಲಿಯಾನ ವೈಯಕ್ತಿಕ ಜೀವನ ಚರ್ಚೆಯಲ್ಲಿದೆ. ಕತ್ರಿನಾ ಕೈಫ್ ಸಹೋದರ ಸೆಬಾಸ್ಟಿಯನ್ ಜತೆ ಇಲಿಯಾನಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ, ಇದನ್ನು ಅವರು ಒಪ್ಪಿಕೊಂಡಿಲ್ಲ. ಹೀಗಿರುವಾಗಲೇ ಅವರು ಪ್ರೆಗ್ನೆಂಟ್ ಆಗಿದ್ದಾರೆ. ಮಗುವಿನ ತಂದೆ ಸೆಬಾಸ್ಟಿಯನ್ ಇರಬಹುದು ಎಂದು ಎಲ್ಲರೂ ಊಹಿಸುತ್ತಿದ್ದಾರೆ.

ಈ ಮೊದಲು ಕೂಡ ಇಲಿಯಾನಾ ಡಿಕ್ರೂಸ್​ ಅವರು ಒಂದು ಫೋಟೋ ಹಂಚಿಕೊಂಡಿದ್ದರು. ‘ಬಂಪ್​ ಅಲರ್ಟ್​’ ಎಂದು ಅದಕ್ಕೆ ಕ್ಯಾಪ್ಷನ್​ ನೀಡಿದ್ದರು. ಅದನ್ನು ನೋಡಿ ಸಾವಿರಾರು ಜನರು ಕಮೆಂಟ್​ ಮಾಡಿದ್ದರು. ‘ಎಲ್ಲಿಯತನಕ ಈ ವಿಚಾರ ಮುಚ್ಚಿಡುತ್ತೀರಿ ಇಲಿಯಾನಾ? ಈಗ ನೀವು ಆ ವ್ಯಕ್ತಿಯ ಹೆಸರು ಬಹಿರಂಗಪಡಿಸಲು ಸೂಕ್ತ ಸಮಯ ಬಂದಿದೆ’ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದರು. ಈಗ ಇಲಿಯಾನಾ ಪಾರ್ಟ್ನರ್ ಕೈನ ತೋರಿಸಿದ್ದಾರೆ. ಈ ಮೂಲಕ ತಾವು ಬಾಯ್​ಫ್ರೆಂಡ್ ಜೊತೆ ಹಾಯಾಗಿ ಇದ್ದೇನೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ತಾಯಿ ಆಗುತ್ತಿರುವ ನಟಿ ಇಲಿಯಾನಾ ಡಿಕ್ರೂಸ್​​ಗೆ ಖುಷಿಯೋ ಖುಷಿ; ತಂದೆ ಯಾರೆಂಬ ಸುಳಿವು ಇನ್ನೂ ಸಿಕ್ಕಿಲ್ಲ

ಇಲಿಯಾನಾ ಡಿಕ್ರೂಸ್​​ ಅವರು ಈ ಹಿಂದೆ ಆಸ್ಟ್ರೇಲಿಯಾದ ಫೋಟೋಗ್ರಾಫರ್​ ಆ್ಯಂಡ್ರ್ಯೂ ನೀಬೋನ್​ ಜೊತೆ ಡೇಟಿಂಗ್​ ನಡೆಸುತ್ತಿದ್ದರು. ಇಬ್ಬರು ಮದುವೆ ಆದ ಬಗ್ಗೆ ಸೂಕ್ತ ಪರಾವೆ ಸಿಗಲಿಲ್ಲ. ನಂತರ ಈ ಜೋಡಿ ಬ್ರೇಕಪ್​ ಮಾಡಿಕೊಂಡಿತು ಎಂದು ವರದಿ ಆಯಿತು. ಆ ಬಳಿಕ ಅವರು ಕತ್ರಿನಾ ಕೈಫ್​ ಸಹೋದರ ಸೆಬ್ಬಾಸ್ಟಿಯನ್​ ಲೊರಾನ್​ ಮಿಶಾಲ್​ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ ಎಂದು ಕೂಡ ಗಾಸಿಪ್ ಹಬ್ಬಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ