ಅದ್ದೂರಿಯಾಗಿ ನಡೆದ ಇರಾ ಖಾನ್ ಮದುವೆ; ಅಂಬಾನಿ ಸೇರಿ ಹಲವು ಸೆಲೆಬ್ರಿಟಿಗಳು ಭಾಗಿ

|

Updated on: Jan 04, 2024 | 8:18 AM

ಆಮಿರ್ ಖಾನ್ ಹಾಗೂ ರೀನಾ ದತ್ತ ಅವರ ಮಗಳು ಇರಾ. ಆಮಿರ್ ಹಾಗೂ ರೀನಾ ವಿಚ್ಛೇದನ ಪಡೆದಿದ್ದಾರೆ. ಆದರೆ, ಮಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಇಬ್ಬರೂ ಪಡೆದಿದ್ದಾರೆ. ಹೀಗಾಗಿ ಮದುವೆಗೆ ಇಬ್ಬರೂ ಆಗಮಿಸಿದ್ದರು.

ಅದ್ದೂರಿಯಾಗಿ ನಡೆದ ಇರಾ ಖಾನ್ ಮದುವೆ; ಅಂಬಾನಿ ಸೇರಿ ಹಲವು ಸೆಲೆಬ್ರಿಟಿಗಳು ಭಾಗಿ
ನುಪುರ್-ಆಮಿರ್-ಇರಾ
Follow us on

ಆಮಿರ್ ಖಾನ್ ಮಗಳು ಇರಾ ಖಾನ್ ಹಾಗೂ ಫಿಟ್ನೆಸ್​ ಟ್ರೇನರ್ ನೂಪುರ್ ಶಿಖಾರೆ ಅವರ ಮದುವೆ ಬುಧವಾರ (ಜನವರಿ 3) ಅದ್ದೂರಿಯಾಗಿ ನೆರವೇರಿದೆ. ಮುಂಬೈನ ಖಾಸಗಿ ಹೋಟೆಲ್​ನಲ್ಲಿ ಮದುವೆ ಆಯೋಜನೆ ಮಾಡಲಾಗಿತ್ತು. ಈ ವಿವಾಹ ಸಮಾರಂಭಕ್ಕೆ ಉದ್ಯಮಿಗಳಾದ ಮುಕೇಶ್ ಅಂಬಾನಿ (Mukesh Ambani), ನೀತಾ ಅಂಬಾನಿ ಹಾಗೂ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಆಮಿರ್ ಖಾನ್ ಹಾಗೂ ರೀನಾ ದತ್ತ ಅವರ ಮಗಳು ಇರಾ. ಆಮಿರ್ ಹಾಗೂ ರೀನಾ ವಿಚ್ಛೇದನ ಪಡೆದಿದ್ದಾರೆ. ಆದರೆ, ಮಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಇಬ್ಬರೂ ಪಡೆದಿದ್ದಾರೆ. ಹೀಗಾಗಿ ಮದುವೆಗೆ ಇಬ್ಬರೂ ಆಗಮಿಸಿದ್ದರು. ನವ ದಂಪತಿ ನೂಪುರ್ ಹಾಗೂ ಇರಾ ಜೊತೆ ಆಮಿರ್ ಖಾನ್ ಪೋಸ್​ ಕೊಟ್ಟಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.

ಕಳೆದ ಒಂದು ವಾರದಿಂದ ವಿವಾಹ ಪೂರ್ವ ಶಾಸ್ತ್ರಗಳು ಆರಂಭ ಆಗಿದ್ದವು. ಮೊದಲು ರಿಜಿಸ್ಟರ್ ಮ್ಯಾರೇಜ್ ಆದ ಈ ಜೋಡಿ, ಆ ಬಳಿಕ ಸಾಂಪ್ರದಾಯಿಕವಾಗಿ ವಿವಾಹ ಆದರು. ಈ ಮೂಲಕ ಪತಿ-ಪತ್ನಿಯರಾದರು. ಹಲವು ಸೆಲೆಬ್ರಿಟಿಗಳು ಮದುವೆಗೆ ಹಾಜರಿ ಹಾಕಿದ್ದಾರೆ. ಮದುವೆ ವೇಳೆ ಎಲ್ಲರೂ ಕುಣಿದು ಕುಪ್ಪಳಿಸಿದ್ದಾರೆ. ಮಗಳ ವಿವಾಹದಲ್ಲಿ ಮಾಜಿ ಪತ್ನಿ ಕಿರಣ್ ರಾವ್ ಅವರಿಗೆ ಆಮಿರ್ ಖಾನ್ ಕಿಸ್ ಮಾಡಿದ್ದಾರೆ.

ಇದನ್ನೂ ಓದಿ: ಆಮಿರ್ ಖಾನ್ ಪುತ್ರಿ ಇರಾ ಖಾನ್ ಮದುವೆಯಾಗುತ್ತಿರುವ ನೂಪುರ್ ಶಿಖರೆ ಯಾರು?

ಹೋಟೆಲ್​ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆದಿದೆ. ವಿಶೇಷ ಎಂದರೆ ಮುಂದಿನ ದಿನಗಳಲ್ಲಿ ಆಪ್ತರು ಹಾಗೂ ಸೆಲೆಬ್ರಿಟಿಗಳಿಗಾಗಿ ದೆಹಲಿ, ಜೋದ್​ಪುರ್ ಹಾಗೂ ಮುಂಬೈನಲ್ಲಿ ರಿಸೆಪ್ಷನ್ ಸಮಾರಂಭ ನಡೆಯಲಿದೆ. ಇರಾ ಖಾನ್ ಹಾಗೂ ನೂಪುರ್ ಶಿಖಾರೆ ಅವರು ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇರಾ ಖಿನ್ನತೆಗೆ ಒಳಗಾದಾಗ ನೂಪುರ್ ಅವರ ಬೆಂಬಲಕ್ಕೆ ನಿಂತಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:36 am, Thu, 4 January 24