ಆಮಿರ್​ ಖಾನ್​ ಮಗಳು ಇರಾ ಖಾನ್​ ಮದುವೆ; ಮುಂಬೈ ಖಾಸಗಿ ಹೋಟೆಲ್​ನಲ್ಲಿ ವಿವಾಹ ಸಮಾರಂಭ

ಇಂದು (ಜ.3) ಸಂಜೆ 7 ಗಂಟೆಗೆ ಮದುವೆ ನಡೆಯಲಿದೆ. ಒಂದು ವಾರ ಮುಂಚೆಯೇ ವಿವಾಹಪೂರ್ವ ಕಾರ್ಯಗಳಿಗೆ ಚಾಲನೆ ನೀಡಲಾಗಿತ್ತು. ಅದರಲ್ಲಿ ಕುಟುಂಬದವರು ಮತ್ತು ಆಪ್ತರು ಭಾಗಿ ಆಗಿದ್ದರು. ಆಮಿರ್ ಖಾನ್​ ಮತ್ತ ಮಾಜಿ ಪತ್ನಿ ರೀನಾ ದತ್ತ ಅವರ ಮನೆಯನ್ನು ವಿದ್ಯುತ್​ ದೀಪಗಳಿಂದ ಅಲಂಕರಿಸಲಾಗಿದೆ.

ಆಮಿರ್​ ಖಾನ್​ ಮಗಳು ಇರಾ ಖಾನ್​ ಮದುವೆ; ಮುಂಬೈ ಖಾಸಗಿ ಹೋಟೆಲ್​ನಲ್ಲಿ ವಿವಾಹ ಸಮಾರಂಭ
ನೂಪುರ್​ ಶಿಖಾರೆ, ಇರಾ ಖಾನ್​
Follow us
ಮದನ್​ ಕುಮಾರ್​
|

Updated on: Jan 03, 2024 | 12:53 PM

ಬಾಲಿವುಡ್​ನ ಖ್ಯಾತ ನಟ ಆಮಿರ್​ ಖಾನ್ (Aamir Khan)​ ಅವರ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣ ಆಗಿದೆ. ಅದಕ್ಕೆ ಕಾರಣ ಆಮಿರ್​ ಖಾನ್​ ಪುತ್ರಿ ಇರಾ ಖಾನ್​ ವಿವಾಹ. ಹೌದು, ಇಂದು (ಜನವರಿ 3) ಇರಾ ಖಾನ್​ ಅವರು ಮದುವೆ ಆಗುತ್ತಿದ್ದಾರೆ. ಸೆಲೆಬ್ರಿಟಿಗಳ ಫಿಟ್ನೆಸ್​ ಟ್ರೇನರ್​ ಆಗಿ ಗುರುತಿಸಿಕೊಂಡಿರುವ ನೂಪುರ್​ ಶಿಖಾರೆ (Nupur Shikhare) ಜೊತೆ ಇರಾ ಖಾನ್​ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮುಂಬೈನ ಖಾಸಗಿ ಹೋಟೆಲ್​ನಲ್ಲಿ ಇರಾ ಖಾನ್​ ಮದುವೆ (Ira Khan Wedding) ನಡೆಯುತ್ತಿದ್ದು, ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಲಿದ್ದಾರೆ. ಪರಸ್ಪರ ಪ್ರೀತಿಸಿ ಇರಾ ಖಾನ್​ ಮತ್ತು ನೂಪುರ್​ ಶಿಖಾರೆ ಮದುವೆ ಆಗುತ್ತಿದ್ದಾರೆ.

ಇಂದು (ಜ.3) ಸಂಜೆ 7 ಗಂಟೆಗೆ ಮದುವೆ ನಡೆಯಲಿದೆ. ಒಂದು ವಾರ ಮುಂಚೆಯೇ ವಿವಾಹಪೂರ್ವ ಕಾರ್ಯಗಳಿಗೆ ಚಾಲನೆ ನೀಡಲಾಗಿತ್ತು. ಅದರಲ್ಲಿ ಕುಟುಂಬದವರು ಮತ್ತು ಆಪ್ತರು ಭಾಗಿ ಆಗಿದ್ದರು. ಆ ಸಂದರ್ಭದ ಫೋಟೋ ಮತ್ತು ವಿಡಿಯೋಗಳು ವೈರಲ್​ ಆಗಿದ್ದವು. ಆಮಿರ್ ಖಾನ್​ ಅವರ ಮೊದಲ ಪತ್ನಿ ರೀನಾ ದತ್ತ ಅವರ ಪುತ್ರಿಯೇ ಇರಾ ಖಾನ್​. ಮಗಳ ಮದುವೆಗಾಗಿ ಆಮಿರ್​ ಖಾನ್​ ಅವರು ಸಿನಿಮಾ ಕೆಲಸಗಳಿಂದ ಬ್ರೇಕ್​ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಆಮಿರ್ ಖಾನ್ ಪುತ್ರಿ ಇರಾ ಖಾನ್ ಮದುವೆಯಾಗುತ್ತಿರುವ ನೂಪುರ್ ಶಿಖರೆ ಯಾರು?

ಆಮಿರ್ ಖಾನ್​ ಮತ್ತ ರೀನಾ ದತ್ತ ಅವರ ಮನೆಯನ್ನು ವಿದ್ಯುತ್​ ದೀಪಗಳಿಂದ ಅಲಂಕರಿಸಲಾಗಿದೆ. ಕೋರ್ಟ್​ ಮ್ಯಾರೇಜ್​ ಜೊತೆಗೆ ಮಹಾರಾಷ್ಟ್ರದ ಸಂಪ್ರದಾಯಿಕ ಶೈಲಿಯಲ್ಲಿ ಇರಾ ಖಾನ್​ ಮದುವೆ ನಡೆಯುತ್ತಿದೆ. ದೇಶದ ಬೇರೆ ಬೇರೆ ನಗರಗಳಲ್ಲಿ ಇರುವ ಅವರ ಸಂಬಂಧಿಕರು ಮದುವೆ ಸಲುವಾಗಿ ಮುಂಬೈಗೆ ಆಗಮಿಸಿದ್ದಾರೆ. ಆಮಿರ್​ ಖಾನ್​ ಅವರ 2ನೇ ಮಾಜಿ ಪತ್ನಿ ಕಿರಣ್​ ರಾವ್​ ಕೂಡ ವಿವಾಹಪೂರ್ವ ಕಾರ್ಯಗಳಲ್ಲಿ ಹಾಜರಿ ಹಾಕಿದ್ದಾರೆ. ಈ ಕ್ಷಣದ ಫೋಟೋ ಮತ್ತು ವಿಡಿಯೋಗಳು ವೈರಲ್​ ಆಗಿವೆ.

View this post on Instagram

A post shared by Popeye ⚓ (@nupur_popeye)

ಮದುವೆ ಬಳಿಕ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲು ಪ್ಲ್ಯಾನ್​ ಮಾಡಲಾಗಿದೆ ಎಂದು ವರದಿ ಆಗಿದೆ. ಆ ರಿಸೆಪ್ಷನ್​ನಲ್ಲಿ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಲಿದ್ದಾರೆ. ಸ್ಟಾರ್​ ಕಿಡ್​ ಆಗಿದ್ದರೂ ಕೂಡ ಇರಾ ಖಾನ್ ಅವರು ಚಿತ್ರರಂಗಕ್ಕೆ ಎಂಟ್ರಿ ನೀಡಿಲ್ಲ. ನಟಿ ಆಗಬೇಕು ಎಂಬ ಉತ್ಸಾಹ ಅವರಿಗೆ ಇಲ್ಲ. ಈ ಹಿಂದೆ ಅವರು ಖಿನ್ನತೆಗೆ ಒಳಾಗಾಗಿದ್ದರು. ಆ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
ತಾಳಿ ಕಟ್ಟುವಾಗ ಮೂರು ಗಂಟು ಹಾಕುವುದು ಏಕೆ? ಅದರ ಮಹತ್ವ ತಿಳಿಯಿರಿ
ತಾಳಿ ಕಟ್ಟುವಾಗ ಮೂರು ಗಂಟು ಹಾಕುವುದು ಏಕೆ? ಅದರ ಮಹತ್ವ ತಿಳಿಯಿರಿ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ
ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು