ಆಮಿರ್ ಖಾನ್ ಅವರಿಗೆ (Aamir Khan) ಬಾಲಿವುಡ್ನಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಪ್ರತಿ ಸಿನಿಮಾಗೆ ಮಾಡುವ ಸಿದ್ಧತೆ ಅಷ್ಟಿಷ್ಟಲ್ಲ. ಆಮಿರ್ ಖಾನ್ ಕುಟುಂಬದ ವಿಚಾರದಿಂದಲೂ ಸಾಕಷ್ಟು ಸುದ್ದಿ ಆಗುತ್ತಾರೆ. ಕಳೆದ ವರ್ಷ ಕಿರಣ್ ರಾವ್ ಅವರ ಜತೆಗೆ ಆಮಿರ್ ವಿಚ್ಛೇದನ ಪಡೆದರು. ಹಾಗಂತ ಕಿರಣ್ ಅವರಿಂದ ಆಮಿರ್ ದೂರವಾಗಿಲ್ಲ. ಅವರ ಜತೆ ಸ್ನೇಹವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಇನ್ನು, ಆಮಿರ್ ಮಗಳು ಇರಾ (Ira Khan) ಕೂಡ ಸಖತ್ ಸುದ್ದಿಯಲ್ಲಿರುತ್ತಾರೆ. ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡದ ಹೊರತಾಗಿಯೂ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈಗ ಇರಾ ತಾವು ಎಂಕ್ಸೈಟಿ ಅಟ್ಯಾಕ್ನಿಂದ ಬಳಲುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಎಂಕ್ಸೈಟಿ ಸಮಸ್ಯೆ ಅನೇಕರಿಗೆ ಇರುತ್ತದೆ. ಒತ್ತಡ ಮೊದಲಾದ ಕಾರಣಗಳಿಂದ ಇದು ಹುಟ್ಟಿಕೊಳ್ಳುತ್ತದೆ. ಇದು ಮಿತಿಮೀರಿದರೆ ಚಿಕಿತ್ಸೆ ಅತ್ಯವಶ್ಯಕ. ಇದನ್ನು ಓಪನ್ ಆಗಿ ಹೇಳಿಕೊಳ್ಳೋಕೆ ಅನೇಕರು ಹಿಂದೇಟು ಹಾಕುತ್ತಾರೆ. ಅನೇಕ ಸೆಲೆಬ್ರಿಟಿಗಳು ಈ ವಿಚಾರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಈಗ ಇರಾ ಕೂಡ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಈ ಸಮಸ್ಯೆಯಿಂದ ಹೊರಬರಲಾಗದೆ ಒದ್ದಾಡುತ್ತಿದ್ದಾರೆ.
ಕನ್ನಡಿ ಎದುರು ಫೋಟೋ ತೆಗೆಯುತ್ತಾ ನಿಂತಿರುವ ಚಿತ್ರವನ್ನು ಇರಾ ಹಂಚಿಕೊಂಡಿದ್ದಾರೆ. ‘ನನಗೆ ಆ್ಯಂಕ್ಸೈಟಿ ಸಮಸ್ಯೆ ಕಾಡುತ್ತಿದೆ. ನನಗೆ ಅಳುವ ಸಮಸ್ಯೆ ಇತ್ತು. ಆದರೆ, ಯಾವತ್ತೂ ಈ ರೀತಿ ಆಗಿರಲಿಲ್ಲ. ಆ್ಯಂಕ್ಸೈಟಿ ಮತ್ತು ಆ್ಯಂಕ್ಸೈಟಿ ಅಟ್ಯಾಕ್ ಮಧ್ಯೆ ವ್ಯತ್ಯಾಸವಿದೆ. ಆ್ಯಂಕ್ಸೈಟಿ ಅಟ್ಯಾಕ್ಗೆ ಒಂದಷ್ಟು ಲಕ್ಷಗಣಳಿವೆ. ಎದೆ ಬಡಿತ ಹೆಚ್ಚುವುದು, ಉಸಿರಾಟದ ತೊಂದರೆ, ಅಳುವುದು. ಜತೆಗೆ ಎಲ್ಲವೂ ಮುಗಿದಂತೆ ಭಾಸವಾಗುತ್ತದೆ. ಮೊದಲು ತಿಂಗಳಿಗೆ ಒಮ್ಮೆ ಹೀಗೆ ಆಗುತ್ತಿತ್ತು. ಈಗ ನಿತ್ಯವೂ ಹೀಗೇ ಆಗುತ್ತಿದೆ’ ಎಂದಿದ್ದಾರೆ ಅವರು.
‘ನನಗೆ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ಹೆದರಿಕೆಗಳೇನು ಎಂಬುದನ್ನು ನಾನು ಆಲೋಚಿಸುತ್ತಿರುತ್ತೇನೆ. ನನ್ನ ಜತೆಗೆ ನಾನು ಮಾತನಾಡಿಕೊಳ್ಳುತ್ತೇನೆ. ಅದು ಒಮ್ಮೆ ನಿಮ್ಮ ಮೇಲೆ ದಾಳಿ ಮಾಡಿದರೆ ಅದನ್ನು ನಿಲ್ಲಿಸಲು ದಾರಿಗಳು ಸಿಗುವುದಿಲ್ಲ. ಆ್ಯಂಕ್ಸೈಟಿ ಅಟ್ಯಾಕ್ ಆಯಿತು. ಆಗ ಸ್ನಾನ ಮಾಡಿದೆ. ನಾನು ಸ್ನಾನದ ನಂತರ ತೆಗೆದ ಫೋಟೋ ಇದು. ಸ್ನಾನ ಮಾಡುವುದು ನನಗೆ ಖುಷಿ ನೀಡುತ್ತದೆ’ ಎಂದು ಅವರು ಬರೆದುಕೊಂಡಿದ್ದಾರೆ.
1986ರಲ್ಲಿ ನಟಿ ರೀನಾ ದತ್ತ ಜೊತೆ ಆಮಿರ್ ಖಾನ್ ಮೊದಲ ಮದುವೆ ಆಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು (ಪುತ್ರ ಜುನೈದ್, ಪುತ್ರಿ ಇರಾ) ಜನಿಸಿದರು. 2002ರಲ್ಲಿ ಆಮಿರ್ ಮತ್ತು ರೀನಾ ಡಿವೋರ್ಸ್ ಪಡೆದುಕೊಂಡರು. ಇಬ್ಬರ ಮಕ್ಕಳ ಜವಾಬ್ದಾರಿಯನ್ನು ರೀನಾ ಹೊತ್ತುಕೊಂಡರು.
ಇದನ್ನೂ ಓದಿ: ಸ್ವಿಮ್ಮಿಂಗ್ಪೂಲ್ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಆಮಿರ್ ಮಗಳು ಇರಾ ಖಾನ್
ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಪುತ್ರಿ ಇರಾ ಖಾನ್ ಹೊಸ ಲವ್ ಸ್ಟೋರಿ, ಪ್ರೀತಿಯಲ್ಲಿರೋ ಹುಡುಗ ಯಾರು ಗೊತ್ತಾ?
Published On - 3:09 pm, Sun, 1 May 22