ನಟಿ ಕತ್ರಿನಾ ಕೈಫ್ (Katrina Kaif) ಅವರ ಖಾಸಗಿ ಜೀವನದ ಬಗ್ಗೆ ಹಲವು ಬಗೆಯ ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲಿ ಅವರ ಪ್ರೆಗ್ನೆನ್ಸಿ ಬಗ್ಗೆ ಹೆಚ್ಚು ಗಾಸಿಪ್ ಹಬ್ಬಿದೆ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ (Vicky Kaushal) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಎರಡು ವರ್ಷ ಕಳೆಯುತ್ತಿದೆ. ಈಗ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇದ್ದಾರೆ ಎಂದು ಅನೇಕರು ಊಹಿಸುತ್ತಿದ್ದಾರೆ. ಇತ್ತೀಚೆಗೆ ಕತ್ರಿನಾ ಕೈಫ್ ಅವರು ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಪ್ರೆಗ್ನೆಂಟ್ (Katrina Kaif Pregnant) ಆಗಿರುವ ಕಾರಣದಿಂದಲೇ ಅವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಹೈದರಾಬಾದ್ಗೆ ಬಂದಿದ್ದ ಅವರು ಹೊಟ್ಟೆ ಕಾಣದ ರೀತಿಯಲ್ಲಿ ದುಪ್ಪಟ್ಟ ಮುಚ್ಚಿಕೊಂಡಿದ್ದರು. ಆ ವಿಡಿಯೋ ವೈರಲ್ ಆಗಿದೆ.
ನಟಿಯರ ಬೇಬಿ ಬಂಪ್ ಕಾಣಿಸಿದರೆ ಪ್ರೆಗ್ನೆನ್ಸಿ ಸುದ್ದಿ ಎಲ್ಲ ಕಡೆ ಹರಡುತ್ತದೆ. ಕತ್ರಿನಾ ಕೈಫ್ ಅವರು ಅದೇ ಕಾರಣಕ್ಕಾಗಿ ದುಪ್ಪಟ್ಟ ಮುಚ್ಚಿಕೊಂಡು ಹೊಟ್ಟೆ ಕಾಣದ ರೀತಿಯಲ್ಲಿ ನಡೆದು ಹೋಗಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಹಲವು ಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಒಂದು ವೇಳೆ ಅವರು ಗರ್ಭಿಣಿ ಆಗಿರುವುದು ನಿಜವೇ ಆಗಿದ್ದರೆ ಅವರಿಗೆ ಅಭಿನಂದನೆಗಳು ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಕತ್ರಿನಾ ಕೈಫ್ ಅವರು ಯಾವ ರೀತಿ ಪ್ರತಿಕ್ರಿಯೆ ನೀಡಬಹುದು ಎಂಬ ಕೌತುಕ ಮೂಡಿದೆ.
Katrina Kaif for a Kalyan event in Patna
byu/Serious_Yak509 inBollyBlindsNGossip
ಈ ಮೊದಲು ಕೂಡ ಕತ್ರಿನಾ ಕೈಫ್ ಅವರ ಪ್ರೆಗ್ನೆನ್ಸಿ ಬಗ್ಗೆ ಗಾಸಿಪ್ ಹರಡಿತ್ತು. ಅದನ್ನು ಅವರ ಆಪ್ತ ಮೂಲಗಳು ತಳ್ಳಿ ಹಾಕಿದ್ದವು. ಆದರೆ ಈಗ ಮತ್ತೆ ಅಂತಹ ವದಂತಿ ಹಬ್ಬಿದೆ. ಕತ್ರಿನಾ ಕೈಫ್ ನಟಿಸಿರುವ ‘ಟೈಗರ್ 3’ ಸಿನಿಮಾದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅದಕ್ಕಾಗಿ ಅವರು ಇನ್ಮುಂದೆ ಪದೇಪದೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳಬೇಕಿರುವುದು ಅನಿವಾರ್ಯ. ಆಗಲಾದರೂ ಸತ್ಯ ಏನೆಂಬುದು ಗೊತ್ತಾಗುತ್ತದೆ ಎಂದು ಫ್ಯಾನ್ಸ್ ನಿರೀಕ್ಷಿಸಿದ್ದಾರೆ.
ಇದನ್ನೂ ಓದಿ: ‘ಟೈಗರ್ 3’ ಸಿನಿಮಾದಲ್ಲಿ ಬೆಂಕಿಯ ರೀತಿ ಇದೆ ನಟಿ ಕತ್ರಿನಾ ಕೈಫ್ ಪಾತ್ರ
ಮದುವೆ ಬಳಿಕ ಕತ್ರಿನಾ ಕೈಫ್ ಅವರ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವಲ್ಲಿ ಅವರು ಹಿಂದೇಟು ಹಾಕುತ್ತಿದ್ದಾರೆ. ಮಗು ಪಡೆದು, ಸಂಸಾರದ ಕಡೆಗೆ ಹೆಚ್ಚು ಗಮನ ನೀಡುವ ಸಲುವಾಗಿಯೇ ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬ ಗುಮಾನಿ ವ್ಯಕ್ತವಾಗಿದೆ. ‘ಟೈಗರ್ 3’ ಸಿನಿಮಾ ದೀಪಾವಳಿ ಪ್ರಯುಕ್ತ ನವೆಂಬರ್ 12ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ ಕತ್ರಿನಾ ನಟಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:48 pm, Wed, 18 October 23