ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಇದೀಗ ಚಿತ್ರರಂಗಕ್ಕಿಂತ ಕಿರುತೆರೆ ಹಾಗೂ ಹಲವಾರು ಶೋಗಳಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಅವರ ಹೊಸ ಶೋದ ಪ್ರೋಮೋ ರಿಲೀಸ್ ಮಾಡಲಾಗಿದ್ದು ಕುತೂಹಲ ಮೂಡಿಸಿದೆ. ಯೋಗ ಹಾಗೂ ಫೆಟ್ನೆಸ್ ಬಗ್ಗೆ ಅಪಾರ ಕಾಳಜಿ ವಹಿಸುವ ಶಿಲ್ಪಾ ಅದೇ ವಿಷಯದ ಮೇಲೆ ಹೊಸ ಶೋ ನಡೆಸಿಕೊಡಲಿದ್ದಾರೆ. ವಿಶೇಷವೆಂದರೆ ಫಿಟ್ನೆಸ್ ಬಗ್ಗೆ ಬರುತ್ತಿರುವ ಮೊದಲ ಶೋ ಇದಾಗಿದೆ. ‘ಶೇಪ್ ಆಫ್ ಯು’ ಎಂಬ ಹೆಸರಿನಲ್ಲಿ ಪ್ರಸಾರವಾಗುವ ಈ ಶೋದ ಪ್ರೋಮೋ ರಿಲೀಸ್ ಮಾಡಲಾಗಿದೆ. ಬಾಲಿವುಡ್ನಲ್ಲಿ ಫಿಟ್ನೆಸ್ ವಿಚಾರಕ್ಕೆ ಗುರುತಿಸಿಕೊಂಡ ಹಲವು ಪ್ರತಿಭೆಗಳು ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಜಾನ್ ಅಬ್ರಹಾಂ, ಮಸಾಬಾ ಗುಪ್ತಾ, ಶೆಹ್ನಾಜ್ ಗಿಲ್, ಶಮಿತಾ ಶೆಟ್ಟಿ, ರಾಕುಲ್ ಪ್ರೀತ್ ಸಿಂಗ್, ಜಾಕ್ವೆಲಿನ್ ಫೆರ್ನಾಂಡಿಸ್ ಮೊದಲಾದವರು ಭಾಗವಹಿಸಿ ಫಿಟ್ನೆಸ್, ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ.
ಕೆಲಕಾಲದಿಂದ ಸುದ್ದಿಯಲ್ಲಿರುವ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫೆರ್ನಾಂಡಿಸ್, ತಮ್ಮ ಸುತ್ತ ಎದ್ದಿದ್ದ ವಿವಾದಗಳು ಹಾಗೂ ಆ ಸಮಯದಲ್ಲಿನ ಮಾನಸಿಕ ಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. ‘‘ನಾನು ಬಹುಶಃ ಒಂಟಿಯಾಗುತ್ತಿದ್ದೆ..’’ ಎಂದು ಜಾಕ್ವೆಲಿನ್ ಹೇಳಿದ್ದಾರೆ. ನಂತರ ಮಾತನಾಡುವ ಶಿಲ್ಪಾ, ‘‘ಕೇವಲ ಒಂದು ಜೀವನ ಇರುವುದು. ನಾವು ನಮ್ಮ ಜೀವನ ನಡೆಸುತ್ತೇವೆ. ವಿವಾದಗಳು ಸಾಮಾನ್ಯ’’ ಎಂದು ಹೇಳಿ ಸಮಾಧಾನ ಮಾಡಿದ್ದಾರೆ.
ಆದರೆ ಜಾಕ್ವೆಲಿನ್ ಮಾತುಕತೆಯ ಬಗ್ಗೆ ಗುಟ್ಟನ್ನು ಕಾಯ್ದುಕೊಳ್ಳಲಾಗಿದೆ. ಶಿಲ್ಪಾ ಹಾಗೂ ಜಾಕ್ವೆಲಿನ್ ಕುರಿತ ಪೂರ್ಣ ಎಪಿಸೋಡ್ ಸಿಕ್ಕಿದ ನಂತರವೇ ಈರ್ವರ ಮಾತುಕತೆಯ ಪೂರ್ತಿ ವಿಚಾರಗಳು ಲಭ್ಯವಾಗಲಿವೆ. ಪ್ರೋಮೋವನ್ನು ಶಿಲ್ಪಾ ಶೆಟ್ಟಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದೆ.
ಶಿಲ್ಪಾ ಹಂಚಿಕೊಂಡ ಪ್ರೋಮೋ ಇಲ್ಲಿದೆ:
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕಳೆದ ಕೆಲವು ಸಮಯದಿಂದ ವಿವಾದಿತ ವಿಚಾರಗಳಲ್ಲಿ ಸಿಲುಕಿಕೊಂಡಿದ್ದಾರೆ. ವಂಚಕ ಸುಕೇಶ್ ಚಂದ್ರಶೇಖರ್ ಜತೆಗಿನ ಚಿತ್ರಗಳು ವೈರಲ್ ಆದ ನಂತರ ಸುಕೇಶ್ ಹಾಗೂ ಜಾಕ್ವೆಲಿನ್ ಬಗೆಗಿನ ಹಲವು ವಿಚಾರಗಳು ಹೊರಬಿದ್ದಿದ್ದವು. ಈ ಎಲ್ಲದರ ಬಗ್ಗೆ ಜಾಕ್ವೆಲಿನ್ ಬಹಿರಂಗವಾಗಿ ಮಾತನಾಡಿದ್ದು ಕಡಿಮೆ. ಚಿತ್ರಗಳ ವಿಷಯಕ್ಕೆ ಬಂದರೆ ಜಾಕ್ವೆಲಿನ್ ‘ವಿಕ್ರಾಂತ್ ರೋಣ’ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ:
ವಂಚನೆ ಆರೋಪಿ ಜತೆಗಿನ ಖಾಸಗಿ ಫೋಟೋ ವೈರಲ್ ಆದ ಬಳಿಕ ಅಧ್ಯಾತ್ಮದ ಮೊರೆಹೋದ ಜಾಕ್ವೆಲಿನ್ ಫರ್ನಾಂಡಿಸ್
37 ಲಕ್ಷ ರೂಪಾಯಿ ವಂಚನೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಮೌನ ಮುರಿದ ಸೋನಾಕ್ಷಿ ಸಿನ್ಹಾ
Published On - 3:59 pm, Tue, 8 March 22