AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

37 ಲಕ್ಷ ರೂಪಾಯಿ ವಂಚನೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಮೌನ ಮುರಿದ ಸೋನಾಕ್ಷಿ ಸಿನ್ಹಾ

ದೆಹಲಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವೊಂದರ ಆಯೋಜಕರಿಂದ 37 ಲಕ್ಷ ರೂಪಾಯಿ ಪಡೆದುಕೊಂಡಿದ್ದ ಸೋನಾಕ್ಷಿ ಸಿನ್ಹಾ ಅವರು ನಂತರ ಆ ಕಾರ್ಯಕ್ರಮಕ್ಕೆ ಹಾಜರಾಗದೇ ತಪ್ಪಿಸಿಕೊಂಡಿದ್ದರು ಎನ್ನಲಾಗಿತ್ತು.

37 ಲಕ್ಷ ರೂಪಾಯಿ ವಂಚನೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಮೌನ ಮುರಿದ ಸೋನಾಕ್ಷಿ ಸಿನ್ಹಾ
ಸೋನಾಕ್ಷಿ ಸಿನ್ಹಾ
TV9 Web
| Edited By: |

Updated on: Mar 08, 2022 | 3:05 PM

Share

ಸೋನಾಕ್ಷಿ ಸಿನ್ಹಾ (Sonakshi Sinha) ಅವರಿಗೆ ಇತ್ತೀಚೆಗೆ ನಟನೆಯಲ್ಲಿ ಅಷ್ಟಾಗಿ ಯಶಸ್ಸು ಸಿಗುತ್ತಿಲ್ಲ. ಸ್ಟಾರ್​ ಕಿಡ್ ಆದರೂ ಅವರಿಗೆ ಹೇಳಿಕೊಳ್ಳುವಂಥ ಆಫರ್​ಗಳು ಬರುತ್ತಿಲ್ಲ. ಈ ಮಧ್ಯೆ ಅವರು ವಿವಾದದ ಮೂಲಕವೂ ಸುದ್ದಿಯಾಗಿದ್ದರು. ಸೋನಾಕ್ಷಿ ಸಿನ್ಹಾ ವಿರುದ್ಧ ಜಾಮೀನು ರಹಿತ ಅರೆಸ್ಟ್​ ವಾರೆಂಟ್ (Arrest Warrant)​ ಜಾರಿ ಮಾಡಲಾಗಿದೆ ಎಂದು ಇತ್ತೀಚೆಗೆ ವರದಿ ಆಗಿತ್ತು. ಈ ಬಗ್ಗೆ ಸೋನಾಕ್ಷಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸುದ್ದಿ ನಕಲಿ ಎಂದು ಹೇಳಿರುವ ಸೋನಾಕ್ಷಿ, ಆರೋಪ ಮಾಡಿರುವ ವ್ಯಕ್ತಿ ಜನಪ್ರಿಯತೆ ಪಡೆದುಕೊಳ್ಳೋಕೆ ಈ ರೀತಿ ಮಾಡಿದ್ದಾರೆ ಎಂದಿದ್ದಾರೆ ಸೋನಾಕ್ಷಿ ಸಿನ್ಹಾ.

ದೆಹಲಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವೊಂದರ ಆಯೋಜಕರಿಂದ 37 ಲಕ್ಷ ರೂಪಾಯಿ ಪಡೆದುಕೊಂಡಿದ್ದ ಸೋನಾಕ್ಷಿ ಸಿನ್ಹಾ ಅವರು ನಂತರ ಆ ಕಾರ್ಯಕ್ರಮಕ್ಕೆ ಹಾಜರಾಗದೇ ತಪ್ಪಿಸಿಕೊಂಡಿದ್ದರು ಎನ್ನಲಾಗಿತ್ತು. ಮುಂಗಡವಾಗಿ ಪಡೆದಿದ್ದ ಹಣವನ್ನು ವಾಪಸ್​ ನೀಡಲು ಕೂಡ ಅವರು ಒಪ್ಪಿಕೊಂಡಿರಲಿಲ್ಲ. ಹಾಗಾಗಿ ಅವರ ವಿರುದ್ಧ ಕೇಸ್​ ದಾಖಲಾಗಿತ್ತು. ನಟಿಯಿಂದ ವಂಚನೆ ಆಗಿದೆ ಎಂದು ಆರೋಪಿಸಿ ಕಾರ್ಯಕ್ರಮದ ಆಯೋಜಕ ಪ್ರಮೋದ್​ ಶರ್ಮಾ ಎಂಬುವವರು ಕಾನೂನು ಹೋರಾಟ ಮಾಡುತ್ತಿದ್ದಾರೆ. ಈ ಪ್ರಕರಣದ ಸಂಬಂಧ ಸೋನಾಕ್ಷಿ ಸಿನ್ಹಾ ವಿರುದ್ಧ ಜಾಮೀನು ರಹಿತ ಅರೆಸ್ಟ್​ ವಾರೆಂಟ್​ ಜಾರಿ ಮಾಡಲಾಗಿದೆ ಎಂದು ವರದಿ ಆಗಿತ್ತು.

‘ನನ್ನ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ ಎಂಬ ವದಂತಿ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಈ ವಿಚಾರ ಸುಳ್ಳು. ನನಗೆ ಕಿರುಕುಳ ನೀಡಲು ಪ್ರಯತ್ನಿಸುತ್ತಿರುವ ದುಷ್ಟ ವ್ಯಕ್ತಿಯ ಕೆಲಸ ಇದು. ಪತ್ರಕರ್ತರು ಈ ನಕಲಿ ಸುದ್ದಿಯನ್ನು ಪ್ರಕಟಿಸಬೇಡಿ. ಪ್ರಚಾರ ಪಡೆಯಲು ಆ ವ್ಯಕ್ತಿ ಮಾಡುತ್ತಿರುವ ಕುತಂತ್ರ ಇದು’ ಎಂದು ಸೋನಾಕ್ಷಿ ಹೇಳಿದ್ದಾರೆ.

‘ಆ ವ್ಯಕ್ತಿ ಇಂತಹ ದುರುದ್ದೇಶಪೂರಿತ ಲೇಖನಗಳನ್ನು ಹಾಕಿಸುವ ಮೂಲಕ ನನ್ನ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ. ದಯವಿಟ್ಟು ಈ ಕಿರುಕುಳ ನೀಡುವ ದಂಧೆಯಲ್ಲಿ ಪಾಲ್ಗೊಳ್ಳಬೇಡಿ. ನನ್ನ ಕಾನೂನು ತಂಡವು ಅವರ ವಿರುದ್ಧ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ನನ್ನ ವಿರುದ್ಧ ಯಾವುದೇ ವಾರಂಟ್​ ಜಾರಿಯಾಗಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ ಅವರು.

ಸೋನಾಕ್ಷಿ ಸಿನ್ಹಾ ಮದುವೆ ಗಾಸಿಪ್​:

ನಟ ಸಲ್ಮಾನ್​ ಖಾನ್ ಅವರ ಮದುವೆ ಬಗ್ಗೆ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಮೋಸ್ಟ್​ ಎಲಿಜಬಲ್​ ಬ್ಯಾಚುಲರ್​ ಎನಿಸಿಕೊಂಡಿರುವ ಅವರು ಹಲವರ ಜೊತೆ ಡೇಟಿಂಗ್​ ಮಾಡಿದ್ದರು. ಆದರೆ ಯಾರೂ ಕೂಡ ಸಲ್ಲು ಜೊತೆ ಮದುವೆ ಆಗಲು ಮುಂದೆ ಬರಲಿಲ್ಲ. ಸಲ್ಮಾನ್​ ಖಾನ್​ ಮತ್ತು ಸೋನಾಕ್ಷಿ ಸಿನ್ಹಾ ಅವರು ಮದುವೆ ಆಗಿದ್ದಾರೆ ಎಂಬ ಗಾಳಿ ಸುದ್ದಿ ಇತ್ತೀಚೆಗೆ ಹರಡಿತ್ತು. ಅದಕ್ಕೆ ಕಾರಣ ಆಗಿರುವುದು ಒಂದೇ ಒಂದು ಫೋಟೋ. ಸಲ್ಮಾನ್​ ಖಾನ್​ ಮತ್ತು ಸೋನಾಕ್ಷಿ ಸಿನ್ಹಾ ಅವರು ನವ ದಂಪತಿಯ ರೀತಿಯಲ್ಲಿ ಮದುವೆ ಡ್ರೆಸ್​ನಲ್ಲಿ ಕಾಣಿಸಿಕೊಂಡಿರುವ ಒಂದು ಫೋಟೋ ವೈರಲ್​ ಆಗಿತ್ತು. ಈ ಜೋಡಿಯ ನಡುವೆ ಉತ್ತಮ ಒಡನಾಟ ಇದೆ ಎಂಬುದು ನಿಜ. ಆದರೆ ಮದುವೆ ಆಗಿದ್ದಾರೆ ಎಂಬುದೆಲ್ಲ ಬರೀ ಕಟ್ಟುಕಥೆ. ಅದೊಂದು ಎಡಿಟೆಡ್​ ಫೋಟೋ. ಬೇರೆ ಯಾರದ್ದೋ ಮದುವೆ ಫೋಟೋಗೆ ಸೋನಾಕ್ಷಿ ಸಿನ್ಹಾ ಹಾಗೂ ಸಲ್ಮಾನ್​ ಖಾನ್​ ಅವರ ಮುಖವನ್ನು ಎಡಿಟ್​ ಮಾಡಿ ಆ ರೀತಿ ವೈರಲ್​ ಮಾಡಲಾಗಿತ್ತು. ಅದನ್ನು ನಿಜ ಎಂದು ನಂಬಿಕೊಂಡವರು ನಂತರ ಸತ್ಯ ಏನೆಂಬುದು ತಿಳಿದು ಪೆಚ್ಚಾಗಿದ್ದರು.

ಇದನ್ನೂ ಓದಿ: ಜಹೀರ್ ಇಕ್ಬಾಲ್​ ಜತೆ ಸೋನಾಕ್ಷಿ ಸಿನ್ಹಾ ಡೇಟಿಂಗ್? ವೈರಲ್​ ಆಗುತ್ತಿದೆ ಫೋಟೋ

ಗಂಡ-ಹೆಂಡತಿ ವೇಷದಲ್ಲಿ ಸೋನಾಕ್ಷಿ-ಸಲ್ಮಾನ್​ ಖಾನ್​; ನಕಲಿ ಫೋಟೋ ನೋಡಿ ಯಾಮಾರಿದ ನೆಟ್ಟಿಗರು​

Follow Us
TV9 Web
TV9 Web

TV9 Kannada

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ