ಅನಂತ್​ ಅಂಬಾನಿ ಮದುವೆ ಬಳಿಕ ಜಾನ್ವಿ ಕಪೂರ್​ಗೆ ಫುಡ್​ ಪಾಯ್ಸನ್​; ಆಸ್ಪತ್ರೆಗೆ ದಾಖಲು

ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಜಾನ್ವಿ ಕಪೂರ್​ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 3 ದಿನ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ ಎಂದು ವರದಿ ಆಗಿದೆ. ಜಾನ್ವಿ ಕಪೂರ್​ ಅವರಿಗೆ ಏಕಾಏಕಿ ಫುಡ್​ ಪಾಯ್ಸನ್​ ಆಗಲು ಕಾರಣ ಏನು ಎಂಬುದು ಕೂಡ ಗೊತ್ತಾಗಿದೆ. ಮುಂಬೈನಲ್ಲಿ ಅನಂತ್​ ಅಂಬಾನಿಯ ಮದುವೆ ಮುಗಿಸಿಕೊಂಡು, ಚೆನ್ನೈಗೆ ಬಂದು ಸೀ ಫುಡ್​ ಸೇವಿಸಿದ ಬಳಿಕ ಜಾನ್ವಿಗೆ ಆರೋಗ್ಯ ಕೈಕೊಟ್ಟಿತು.

ಅನಂತ್​ ಅಂಬಾನಿ ಮದುವೆ ಬಳಿಕ ಜಾನ್ವಿ ಕಪೂರ್​ಗೆ ಫುಡ್​ ಪಾಯ್ಸನ್​; ಆಸ್ಪತ್ರೆಗೆ ದಾಖಲು
ಜಾನ್ವಿ ಕಪೂರ್​

Updated on: Jul 18, 2024 | 10:56 PM

ಬಾಲಿವುಡ್ ನಟಿ ಜಾನ್ವಿ ಕಪೂರ್​ ಅವರ ಅಭಿಮಾನಿಗಳಿಗೆ ಇದು ಕಹಿ ಸುದ್ದಿ. ಜಾನ್ವಿ ಕಪೂರ್​ ಆರೋಗ್ಯದಲ್ಲಿ ಏರುಪೇರು ಆಗಿದೆ. ಈಗ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಟಿಗೆ ಫುಡ್​ ಪಾಯ್ಸನ್​ ಆಗಿದೆ ಎಂದು ಹೇಳಲಾಗುತ್ತಿದೆ. ಮೊದಲ ಹಂತದ ಚಿಕಿತ್ಸೆ ನೀಡಿರುವ ವೈದ್ಯರು ಮೂರು ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಇನ್ನೆರಡು ದಿನದಲ್ಲಿ ಅವರು ಡಿಸ್ಜಾರ್ಜ್​ ಆಗಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಅಷ್ಟಕ್ಕೂ ಜಾನ್ವಿ ಕಪೂರ್​ ಅವರಿಗೆ ಫುಡ್​ ಪಾಯ್ಸನ್​ ಆಗಲು ಕಾರಣು ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ..

ಇತ್ತೀಚೆಗೆ ನಡೆದ ಅನಂತ್​ ಅಂಬಾನಿ-ರಾಧಿಕಾ ಮರ್ಚೆಂಟ್​ ಮದುವೆಯಲ್ಲಿ ಜಾನ್ವಿ ಕಪೂರ್​ ಅವರು ಭಾಗಿ ಆಗಿದ್ದಾರೆ. ಮಿರಿಮಿರಿ ಮಿಂಚುವ ಬಟ್ಟೆ ಧರಿಸಿ ಅವರು ಎಂಜಾಯ್​ ಮಾಡಿದ್ದರು. ಆ ಮದುವೆ ಮುಗಿಸಿಕೊಂಡ ಬಳಿಕ ಅವರು ಚೆನ್ನೈಗೆ ತೆರಳಿದರು. ಅಲ್ಲಿ ಅವರ ಕುಟುಂಬಸ್ಥರ ಮನೆಗೆ ಹೋಗಿ ಸೀ ಫುಡ್​ ಸೇವಿಸಿದ್ದಾರೆ ಎನ್ನಲಾಗಿದೆ. ಅದರಿಂದಲೇ ಜಾನ್ವಿ ಕಪೂರ್​ ಅವರಿಗೆ ಫುಡ್​ ಪಾಯ್ಸನ್​ ಆಗಿದೆ.

ಚೆನ್ನೈನಲ್ಲಿ ಸೇವಿಸಿದ ಆಹಾರದಿಂದ ಜಾನ್ವಿ ಕಪೂರ್​ ಅವರಿಗೆ ತೊಂದರೆ ಆಗಿದೆ. ಚೆನ್ನೈ ನಿವಾಸದಲ್ಲಿ ಇರುವಾಗಲೇ ಅವರು ಅನಾರೋಗ್ಯದಿಂದ ಕುಸಿದು ಬಿದ್ದರು ಎನ್ನಲಾಗಿದೆ. ಆ ಬಳಿಕ ತಂದೆ ಬೋನಿ ಕಪೂರ್​ ಅವರು ಜಾನ್ವಿಯನ್ನು ಮುಂಬೈಗೆ ಕರೆದುಕೊಂಡು ಬಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು. ಸದ್ಯಕ್ಕೆ ಅಭಿಮಾನಿಗಳು ಆತಂಕಪಡುವ ಅಗತ್ಯವೇನಿಲ್ಲ ಎಂದು ಹೇಳಲಾಗುತ್ತಿದೆ. ಆದಷ್ಟು ಬೇಗ ಜಾನ್ವಿ ಕಪೂರ್​ ಚೇತರಿಸಿಕೊಳ್ಳಲಿ ಎಂದು ಫ್ಯಾನ್ಸ್​ ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ: ಒಂದಿನ ಬಂಗಾರ, ಇನ್ನೊಂದಿನ ವಜ್ರ; ಇದು ಜಾನ್ವಿ ಫ್ಯಾಷನ್​ ಥೀಮ್​

ನೆಪೋಕಿಡ್​ ಎಂಬ ಆರೋಪದ ನಡುವೆಯೂ ನಟಿ ಜಾನ್ವಿ ಕಪೂರ್​ ಅವರಿಗೆ ಒಳ್ಳೊಳ್ಳೆಯ ಅವಕಾಶಗಳು ಸಿಗುತ್ತಿವೆ. ಬಾಲಿವುಡ್​ನಲ್ಲಿ ಅವರು ಈಗಾಗಲೇ ಅನೇಕ ಸಿನಿಮಾಗಳನ್ನು ಮಾಡಿದ್ದಾರೆ. ಅಲ್ಲದೇ, ದಕ್ಷಿಣ ಭಾರತದಲ್ಲೂ ಅವರಿಗೆ ಚಾನ್ಸ್​ ಸಿಗುತ್ತಿದೆ. ಜೂನಿಯರ್​ ಎನ್​ಟಿಆರ್​ ನಟನೆಯ ‘ದೇವರ’ ಸಿನಿಮಾಗೆ ಜಾನ್ವಿ ಕಪೂರ್​ ನಾಯಕಿ ಆಗಿದ್ದು, ಆ ಮೂಲಕ ಅವರು ಟಾಲಿವುಡ್​ಗೆ ಎಂಟ್ರಿ ನೀಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us