ಮತ್ತೊಂದು ತೆಲುಗು ಆಫರ್ ಬಾಚಿಕೊಂಡ ಜಾನ್ವಿ ಕಪೂರ್; ಸ್ಟಾರ್ ಹೀರೋ ಜೊತೆ ನಟನೆ

‘ಗೇಮ್ ಚೇಂಜರ್’ ಸಿನಿಮಾ ಕೆಲಸಗಳಲ್ಲಿ ರಾಮ್​ ಚರಣ್ ಬ್ಯುಸಿ ಇದ್ದಾರೆ. ಇದಾದ ಬಳಿಕ ಅವರು ‘RC 16’ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ‘ಉಪ್ಪೇನ’ ಖ್ಯಾತಿಯ ಬುಚ್ಚಿ ಬಾಬು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ಜಾನ್ವಿ ಕಪೂರ್ ನಾಯಕಿಯಾಗಿ ಫೈನಲ್ ಆಗಿದ್ದಾರೆ ಎಂದು ವರದಿ ಆಗಿದೆ.

ಮತ್ತೊಂದು ತೆಲುಗು ಆಫರ್ ಬಾಚಿಕೊಂಡ ಜಾನ್ವಿ ಕಪೂರ್; ಸ್ಟಾರ್ ಹೀರೋ ಜೊತೆ ನಟನೆ
ಜಾನ್ವಿ

Updated on: Feb 07, 2024 | 7:28 AM

ಶ್ರೀದೇವಿ (Sridevi) ಅವರು ಬಾಲಿವುಡ್ ಜೊತೆ ದಕ್ಷಿಣ ಭಾರತದಲ್ಲೂ ನಟಿಸಿ ಫೇಮಸ್ ಆಗಿದ್ದರು. ಈಗ ಅವರ ಮಗಳು ಜಾನ್ವಿ ಕಪೂರ್ ಕೂಡ ಇದನ್ನು ಫಾಲೋ ಮಾಡುತ್ತಿದ್ದಾರೆ. ಅವರು ದಕ್ಷಿಣ ಭಾರತದಲ್ಲೇ ಹೆಚ್ಚು ಬ್ಯುಸಿ ಆಗಲು ನಿರ್ಧರಿಸಿದಂತೆ ಇದೆ. ಈಗಾಲೇ ಅವರು ಜೂನಿಯರ್​ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ  (Devara Movie) ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಅವರು ಮತ್ತೊಂದು ತೆಲುಗು ಸಿನಿಮಾಗೆ ಸಹಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿ ಆಗಿದ್ದಾರೆ.

ಜಾನ್ವಿ ಕಪೂರ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಹಿಂದಿ ಸಿನಿಮಾ ಮೂಲಕ. ‘ದಡಕ್’ ಅವರ ನಟನೆಯ ಮೊದಲ ಸಿನಿಮಾ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿತು. ಇದಾದ ಬಳಿಕ ಜಾನ್ವಿ ಕಪೂರ್ ಅವರಿಗೆ ಹೇಳಿಕೊಳ್ಳುವಂತಹ ಗೆಲುವು ಸಿಗಲಿಲ್ಲ. ಅವರಿಗೆ ನಟನೆಯೇ ಬರುವುದಿಲ್ಲ ಎಂದು ಅನೇಕರು ಟೀಕೆ ಮಾಡಿದ್ದಿದೆ. ಈ ಟೀಕೆಗಳನ್ನು ನಿರ್ಲಕ್ಷಿಸಿ ಅವರು ಹೊಸ ಹೊಸ ಆಫರ್ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈಗ ರಾಮ್ ಚರಣ್ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಅವರಿಗೆ ಸಿಕ್ಕಿದೆ.

ರಾಮ್​ ಚರಣ್ ಸದ್ಯ ‘ಗೇಮ್ ಚೇಂಜರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಅವರು ‘RC 16’ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ‘ಉಪ್ಪೇನ’ ಖ್ಯಾತಿಯ ಬುಚ್ಚಿ ಬಾಬು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ಜಾನ್ವಿ ಕಪೂರ್ ನಾಯಕಿಯಾಗಿ ಫೈನಲ್ ಆಗಿದ್ದಾರೆ ಎಂದು ವರದಿ ಆಗಿದೆ. ಹಳ್ಳಿಯಲ್ಲಿ ನಡೆಯೋ ಕಥೆ ಇದಾಗಿದ್ದು, ಜಾನ್ವಿ ಡಿಗ್ಲಾಮ್ ಲುಕ್​ನಲ್ಲಿ ಮಿಂಚಲು ರೆಡಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಬುಚ್ಚಿ ಬಾಬು ಅವರು ಸಿನಿಮಾದ ಕಥೆಯನ್ನು ಜಾನ್ವಿ ಕಪೂರ್ ಅವರಿಗೆ ಹೇಳಿದ್ದಾರೆ. ಅವರು ಈ ಕಥೆಯನ್ನು ಸಾಕಷ್ಟು ಇಷ್ಟಪಟ್ಟಿದ್ದಾರೆ. ಮತ್ತೊಂದು ತೆಲುಗು ಸಿನಿಮಾ ಸಿಕ್ಕಿದ್ದಕ್ಕೆ ಅವರು ಖುಷಿಯಾಗಿದ್ದಾರೆ. ಈ ಮೊದಲು ರವೀನಾ ಟಂಡನ್ ಮಗಳು ರಾಶಾ ತಡಾನಿ ಅವರು ಈ ಚಿತ್ರಕ್ಕೆ ನಾಯಕಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ, ವಯಸ್ಸಿನ ಅಂತರವನ್ನು ಗಮನದಲ್ಲಿ ಇಟ್ಟುಕೊಂಡು ಅವರನ್ನು ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ‘ಲಾಲ್ ಸಲಾಂ ಕಥೆ ಬೋರಿಂಗ್ ಆಗಿತ್ತು’; ತಮ್ಮದೇ ಸಿನಿಮಾ ಬಗ್ಗೆ ಎಆರ್ ರೆಹಮಾನ್ ಮಾತು 

ಈ ಚಿತ್ರಕ್ಕೆ ಖ್ಯಾತ ಸಂಗೀತ ಸಂಯೋಜಕ ಎಆರ್ ರೆಹಮಾನ್ ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಈಗಾಗಲೇ ಇದರ ಕೆಲಸಗಳು ಆರಂಭ ಆಗಿವೆ. ನಿರ್ದೇಶಕರಿಗೆ ಈಗಾಗಲೇ ಕೆಲವು ಟ್ಯೂನ್​ಗಳನ್ನು ಅವರು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ