AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಲಾಲ್ ಸಲಾಂ ಕಥೆ ಬೋರಿಂಗ್ ಆಗಿತ್ತು’; ತಮ್ಮದೇ ಸಿನಿಮಾ ಬಗ್ಗೆ ಎಆರ್ ರೆಹಮಾನ್ ಮಾತು

‘ಲಾಲ್ ಸಲಾಂ’ ಚಿತ್ರದಲ್ಲಿ ರಜನಿಕಾಂತ್ ಹೀರೋ ಅಲ್ಲ. ಅವರು ಮಾಡಿರುವುದು ಅತಿಥಿ ಪಾತ್ರ. ಆದರೆ, ಈ ಅತಿಥಿ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ. ಅವರು ಮುಸ್ಲಿಂ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಅನೇಕರು ಅವರನ್ನು ಟೀಕಿಸಿದ್ದಿದೆ. ಇದಕ್ಕೆಲ್ಲ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ.

‘ಲಾಲ್ ಸಲಾಂ ಕಥೆ ಬೋರಿಂಗ್ ಆಗಿತ್ತು’; ತಮ್ಮದೇ ಸಿನಿಮಾ ಬಗ್ಗೆ ಎಆರ್ ರೆಹಮಾನ್ ಮಾತು
ರೆಹಮಾನ್-ರಜನಿಕಾಂತ್
ರಾಜೇಶ್ ದುಗ್ಗುಮನೆ
|

Updated on: Feb 06, 2024 | 10:40 AM

Share

ರಜನಿಕಾಂತ್ (Rajinikanth) ನಟನೆಯ ‘ಲಾಲ್ ಸಲಾಂ’ ಸಿನಿಮಾ ಫೆಬ್ರವರಿ 9ರಂದು ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಕೆಲವರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನೂ ಕೆಲವರು ಈ ಸಿನಿಮಾ ಬೋರಿಂಗ್ ಇರಬಹುದು ಎಂದು ಭಾವಿಸಿದ್ದಾರೆ. ರಜನಿಕಾಂತ್ ಮಗಳು ಐಶ್ವರ್ಯಾ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಹೇಗಿದೆ ಎನ್ನುವ ಕುರಿತು ಈ ಚಿತ್ರದ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರು ಉತ್ತರಿಸಿದ್ದಾರೆ. ಚಿತ್ರದ ಕಥೆ ಕೇಳಿದಾಗ ಇದೊಂದು ಬೋರಿಂಗ್ ಸಿನಿಮಾ ಎಂದು ಅವರಿಗೆ ಅನಿಸಿತ್ತಂತೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

‘ಐಶ್ವರ್ಯಾ ಅವರು ಮೊದಲು ಕಥೆ ಹೇಳಿದಾಗ ಈ ಸಿನಿಮಾ ಬೋರಿಂಗ್ ಆಗಿ ಇರಲಿದೆ ಎಂದೇ ಅನಿಸಿತ್ತು. ನಾನು ಸಿನಿಮಾ ನೋಡಿದ ಬಳಿಕ ಭಾವನೆ ಬದಲಾಯಿತು. ಉಪದೇಶಕರ ಎಂದು ಭಾವಿಸಿದ ದೃಶ್ಯಗಳನ್ನು ಬಹಳ ಚಿಂತನಶೀಲವಾಗಿ ಕಟ್ಟಿಕೊಡಲಾಗಿದೆ. ಅವುಗಳು ಹೃದಯಸ್ಪರ್ಶಿಯಾಗಿತ್ತು. ಸಿನಿಮಾಗೆ ಡೈಲಾಗ್ ಬರೆದವರು ಯಾರು ಎಂದು ಕೇಳಿದೆ. ನಾನು ಡೈಲಾಗ್ ಬರೆದಿದ್ದೇನೆ. ಅಪ್ಪ ಸ್ವಲ್ಪ ಬದಲಾಯಿಸಿದರು ಎಂದು ಐಶ್ವರ್ಯಾ ಹೇಳಿದರು. ಅವರು (ರಜನಿಕಾಂತ್) ಎಲ್ಲವನ್ನೂ ಗೌರವಿಸುತ್ತಾರೆ. ಅವರು ಚೆನ್ನಾಗಿ ಸಂಶೋಧನೆ ಮಾಡಿದ್ದಾರೆ ಮತ್ತು ಅನೇಕ ಅಪರೂಪದ ವಿಷಯಗಳನ್ನು ಹೇಳಿದ್ದಾರೆ’ ಎಂದು ಹೇಳಿದ್ದಾರೆ ರೆಹಮಾನ್.

‘ನಾನು ಸೂಪರ್​ಸ್ಟಾರ್​ನ ಮಗಳು. ಓರ್ವ ಸೂಪರ್​ಸ್ಟಾರ್​ನ ಮಗಳಾಗಿ ಇರೋದು ನಿಜಕ್ಕೂ ಕಠಿಣ. ನಾನು ಏನೇ ಮಾಡಿದರೂ ಟೀಕೆ ಎದುರಿಸಬೇಕಾಗುತ್ತದೆ. ಡ್ಯಾನ್ಸ್ ಮಾಡಿದರೆ, ಸಿನಿಮಾ ಮಾಡಿದರೆ, ಒಂದಷ್ಟು ಬಟ್ಟೆ ಹಾಕಿದ್ದಕ್ಕೆ ಹೀಗೆ ಎಲ್ಲದಕ್ಕೂ ಟೀಕೆ ಎದುರಿಸಬೇಕಾಗುತ್ತದೆ’ ಎಂದಿದ್ದಾರೆ ಐಶ್ವರ್ಯಾ.

‘ಲಾಲ್ ಸಲಾಂ’ ಸಿನಿಮಾದಲ್ಲಿ ರಜನಿಕಾಂತ್ ಅವರು ಹೀರೋ ಅಲ್ಲ. ಅವರದ್ದು ಅತಿಥಿ ಪಾತ್ರ ಮಾತ್ರ. ಆದರೆ, ಈ ಅತಿಥಿ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ. ಅವರು ಮುಸ್ಲಿಂ ವ್ಯಕ್ತಿಯ ಪಾತ್ರ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಅನೇಕರು ಅವರನ್ನು ಟೀಕಿಸಿದ್ದಿದೆ. ಈ ಚಿತ್ರದಲ್ಲಿ ವಿಷ್ಣು ವಿಶಾಲ್, ವಿಕ್ರಾಂತ್, ಧನ್ಯಾ ಬಾಲಕೃಷ್ಣನ್, ವಿವೇಕ್​ ಪ್ರಸನ್ನ, ಕೆಎಸ್ ರವಿಕುಮಾರ್ ಮೊದಲಾದವರು ನಟಿಸಿದ್ದಾರೆ.

ಇದನ್ನೂ ಓದಿ: ರಜನೀಕಾಂತ್ ನಟನೆಯ ‘ಲಾಲ್ ಸಲಾಂ’ ಸಿನಿಮಾದ ಹಾರ್ಡ್ ಡಿಸ್ಕ್ ನಾಪತ್ತೆ! ಮುಂದೇನು ಗತಿ 

ಈ ಚಿತ್ರದ ಒಂದು ಹಾಡಿಗೆ ಎಐ ತಂತ್ರಜ್ಞಾನ ಬಳಕೆ ಮಾಡಿ ಗಾಯಕರಾದ ಬಂಬ ಭಾಗ್ಯ ಹಾಗೂ ಶಾಮುಲ್ ಹಮೀದ್ ಅವರ ಧ್ವನಿಯನ್ನು ಮರು ಸೃಷ್ಟಿ ಮಾಡಲಾಗಿದೆ. ಈ ಬಗ್ಗೆ ಚರ್ಚೆಗಳು ನಡೆದಿವೆ. ಅನೇಕರು ಸಂಗೀತ ಸಂಯೋಜಕ ಎಆರ್ ರೆಹಮಾನ್ ಅವರನ್ನು ಈವಿಚಾರದಲ್ಲಿ ಟೀಕೆ ಮಾಡಿದ್ದಾರೆ. ಆದರೆ, ರೆಹಮಾನ್ ಅವರು ಈ ವಿಚಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ