ಈ ವರ್ಷ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಈ ಸೆಲೆಬ್ರಿಟಿ ಮಕ್ಕಳು; ಮತ್ತೆ ಚರ್ಚೆಗೆ ಬಂತು ನೆಪೋಟಿಸಂ
ಈ ವರ್ಷ ಹಲವು ಸೆಲೆಬ್ರಿಟಿಗಳ ಮಕ್ಕಳು ಚಿತ್ರರಂಗಕ್ಕೆ ಬರೋಕೆ ರೆಡಿ ಆಗಿದ್ದಾರೆ. ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಮಗ ಇಬ್ರಾಹಿಮ್ ಅಲಿ ಖಾನ್ ಅವರಿಂದ ಹಿಡಿದು ರವೀನ್ ಟಂಡನ್ ಮಗಳು ರಾಶಾ ತಡಾನಿವರೆಗೆ ಅನೇಕರ ಬಣ್ಣದ ಬದುಕು ಆರಂಭಿಸಲು ರೆಡಿ ಆಗಿದ್ದಾರೆ.
ನೆಪೋಟಿಸಂ ಚರ್ಚೆ ಇಂದು ನಿನ್ನೆಯದಲ್ಲ. ಬಾಲಿವುಡ್ನಲ್ಲಿ ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಲೇ ಇರುತ್ತದೆ. ಸ್ಟಾರ್ ಕಲಾವಿದರು ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸುವ ಕೆಲಸವನ್ನು ಮಾಡುತ್ತಲೇ ಇದ್ದಾರೆ. ನೆಪೋಟಿಸಂ ಚರ್ಚೆ ಬಗ್ಗೆ ದೊಡ್ಡ ಸೆಲೆಬ್ರಿಟಿಗಳು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಈ ವರ್ಷ ಹಲವು ಸೆಲೆಬ್ರಿಟಿಗಳ ಮಕ್ಕಳು ಚಿತ್ರರಂಗಕ್ಕೆ ಬರೋಕೆ ರೆಡಿ ಆಗಿದ್ದಾರೆ. ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಮಗ ಇಬ್ರಾಹಿಮ್ ಅಲಿ ಖಾನ್ ಅವರಿಂದ ಹಿಡಿದು ರವೀನ್ ಟಂಡನ್ ಮಗಳು ರಾಶಾ ತಡಾನಿವರೆಗೆ (Rasha Thadani) ಅನೇಕರ ಬಣ್ಣದ ಬದುಕು ಆರಂಭಿಸಲು ರೆಡಿ ಆಗಿದ್ದಾರೆ. ಆ ಬಗ್ಗೆ ಈ ಸ್ಟೋರಿಯಲ್ಲಿದೆ ವಿವರ.
ಅಹಾನ್ ಪಾಂಡೆ
ಅನನ್ಯಾ ಪಾಂಡೆ ಸೋದರ ಸಂಬಂಧಿ ಅಹಾನ್ ಪಾಂಡೆ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಚಂಕಿ ಪಾಂಡೆ ಸಂಬಂಧಿಕರು ಎನ್ನುವ ಕಾರಣಕ್ಕೆ ಅವರಿಗೆ ಸುಲಭದಲ್ಲಿ ಅವಕಾಶ ಸಿಗುತ್ತಿದೆ. ಅವರ ಮೊದಲ ಸಿನಿಮಾಗೆ ಬಂಡವಾಳ ಹೂಡುತ್ತಿರುವುದು ಯಶ್ ರಾಜ್ ಫಿಲ್ಮ್ಸ್ ಎನ್ನಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಇಬ್ರಾಹಿಂ ಅಲಿ ಖಾನ್
ಸೈಫ್ ಅಲಿ ಖಾನ್ ಮಗ ಗೂ ಸಾರಾ ಅಲಿ ಖಾನ್ ಸಹೋದರ ಇಬ್ರಾಹಿಂ ಅಲಿ ಖಾನ್ ಕೂಡ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಈ ಚಿತ್ರಕ್ಕೆ ‘ಸರ್ಜಮೀನ್’ ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರದಲ್ಲಿ ಕಾಜೋಲ್ ಹಾಗೂ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಕೂಡ ಇದ್ದಾರೆ. ಈ ಚಿತ್ರವನ್ನು ಕಯೋಜೆ ಇರಾನಿ ನಿರ್ದೇಶನ ಮಾಡುತ್ತಿದ್ದಾರೆ. ಹಲವು ಸ್ಟಾರ್ ಕಿಡಗಳನ್ನು ಬಣ್ಣದ ಲೋಕಕ್ಕೆ ಪರಿಚಯಿಸಿರೋ ಕರಣ್ ಜೋಹರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಜುನೈದ್ ಖಾನ್
ಆಮಿರ್ ಖಾನ್ ಅವರ ಮಗ ಜುನೈದ್ ಖಾನ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರಕ್ಕೆ ‘ಮಹರಾಜ್’ ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರದಲ್ಲಿ ಶಾರ್ವಣಿ ವಾಘ್, ಶಾಲಿನಿ ಪಾಂಡೆ, ಜೈದೀಪ್ ಮೊದಲಾದವರು ನಟಿಸುತ್ತಿದ್ದಾರೆ. ಈ ಚಿತ್ರವನ್ನು ಆದಿತ್ಯ ಚೋಪ್ರಾ ನಿರ್ದೇಶನ ಮಾಡುತ್ತಿದ್ದಾರೆ. ಅವರೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್ ಜಪಾನ್ನಲ್ಲಿ ನಡೆಯುತ್ತಿದೆ. ಆಮಿರ್ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ ಎನ್ನಲಾಗುತ್ತಿದೆ.
ಪಾಶ್ಮಿನಾ ರೋಶನ್
ರೋಹಿತ್ ಸರಫ್ ಅವರ ಸಿನಿಮಾದಲ್ಲಿ ಪಾಶ್ಮಿನಾ ರೋಶನ್ ನಟಿಸುತ್ತಿದ್ದಾರೆ. ಪಾಶ್ಮಿನಾ ಅವರು ಖ್ಯಾತ ಸಂಗೀತ ಸಂಯೋಜಕ ರಾಜೇಶ್ ರೋಷನ್ ಅವರ ಮಗಳು. ಈ ಚಿತ್ರಕ್ಕೆ ‘ಇಶ್ಕ್ ವಿಶ್ಕ್ ರೀಬೌಂಡ್’ ಎಂದು ಶೀರ್ಷಿಕೆ ಇಡಲಾಗಿದೆ. ಇದರ ಜೊತೆ ಅವರು ಟೈಗರ್ ಶ್ರಾಫ್ ಜೊತೆಯೂ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ಹೀರೋ ನಂಬರ್ 1’ ಎಂದು ಶೀರ್ಷಿಕೆ ಇಡಲಾಗಿದೆ. ‘ಮಿಷನ್ ಮಂಗಳ್’ ನಿರ್ದೇಶಕ ಜಗನ್ ಶಕ್ತಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ರಾಶಾ ತಡಾನಿ
ರಾಶಾ ತಡಾನಿ ಅವರಿಗೆ ದೊಡ್ಡ ಹಿನ್ನೆಲೆ ಇದೆ. ಅವರ ತಾಯಿ ರವೀನಾ ಟಂಡನ್ ದೊಡ್ಡ ನಟಿ. ಅವರ ತಂದೆ ಅನಿಲ್ ತಡಾನಿ ಖ್ಯಾತ ಹಂಚಿಕೆದಾರರು. ಹೀಗಾಗಿ, ಅವರಿಗೆ ಚಿತ್ರರಂಗಕ್ಕೆ ಕಾಲಿಡೋದು ದೊಡ್ಡ ವಿಚಾರವೇ ಅಲ್ಲ. ‘ಕೇದಾರ್ನಾಥ್’ ಸಿನಿಮಾ ನಿರ್ದೇಶಕ ಅಭಿಷೇಕ್ ಕಪೂರ್ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ರಾಶಾ ನಟಿಸಲಿದ್ದಾರೆ.
ಇದನ್ನೂ ಓದಿ: ಮೂರು ಪ್ರೇಮ ಪ್ರಕರಣ, ಆದರೂ ಟಬು ಮದುವೆ ಆಗಲಿಲ್ಲ; ಇದಕ್ಕೆಲ್ಲ ಅಜಯ್ ದೇವಗನ್ ಕಾರಣ ಎಂದಿದ್ದ ನಟಿ
ಅಮನ್ ದೇವಗನ್
ಅಜಯ್ ದೇವಗನ್ ಹಾಗೂ ಕಾಜೋಲ್ ಅವರ ಸೋದರ ಸಂಬಂಧಿ ಅಮನ್ ದೇವಗನ್ ಅವರು ಬಾಲಿವುಡ್ಗೆ ಕಾಲಿಡುತ್ತಿದ್ದಾರೆ. ರಾಶಾ ತಡಾನಿ ನಟಿಸುತ್ತಿರುವ ಮೊದಲ ಸಿನಿಮಾದಲ್ಲಿ ಇವರೇ ಹೀರೋ ಎನ್ನಲಾಗುತ್ತಿದೆ. ಸಾಕಷ್ಟು ಕಾರ್ಯಕ್ರಮಗಳಲ್ಲಿ ಅಮನ್ ಭಾಗಿ ಆಗುತ್ತಿದ್ದಾರೆ.
ಶನಾಯ ಕಪೂರ್
ಸಂಜಯ್ ಕಪೂರ್ ಹಾಗೂ ಮಹೀಪ್ ಕಪೂರ್ ಮಗಳು ಶನಾಯಾ ಕಪೂರ್ ಅವರು ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ಶಶಾಂಕ್ ಖೈತಾನ್ ನಿರ್ದೇಶನ ಮಾಡುತ್ತಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ