ಮೂರು ಪ್ರೇಮ ಪ್ರಕರಣ, ಆದರೂ ಟಬು ಮದುವೆ ಆಗಲಿಲ್ಲ; ಇದಕ್ಕೆಲ್ಲ ಅಜಯ್ ದೇವಗನ್ ಕಾರಣ ಎಂದಿದ್ದ ನಟಿ
ಮದುವೆಯಾಗದೇ ಇರುವುದರ ಹಿಂದಿನ ನಿಜವಾದ ಕಾರಣ ಏನು ಎಂಬುದನ್ನು ಟಬು ಕೆಲವೊಮ್ಮೆ ತಮಾಷೆಯಾಗಿ ಹೇಳಿದ್ದರು. ಗೆಳೆಯ ಅಜಯ್ ದೇವಗನ್ ಇದಕ್ಕೆ ಕಾರಣ ಎಂದಿದ್ದರು. ಟಬು ಸಾಜಿದ್ ನಾಡಿಯಾದ್ವಾಲಾ, ನಾಗಾರ್ಜುನ, ಸಂಜಯ್ ಕಪೂರ್ ಜೊತೆ ಡೇಟಿಂಗ್ ಮಾಡಿದ್ದರು. ಆದರೆ, ಯಾವ ಸಂಬಂಧವೂ ಮದುವೆವರೆಗೆ ಹೋಗಿಲ್ಲ.
ಬಾಲಿವುಡ್ನ ಜನಪ್ರಿಯ ನಟಿ ಟಬು (Tabu) ಅವರು ಇಂದು (ನವೆಂಬರ್ 4) ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 52ರ ಹರೆಯದಲ್ಲೂ ಟಬು ಗ್ಲಾಮರ್ ಕಾಪಾಡಿಕೊಂಡಿದ್ದಾರೆ. ತಮಗೆ ಹೊಂದುವ ಪಾತ್ರಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಟಬು ಅವರ ವೃತ್ತಿ ಜೀವನ ತೆರೆದ ಪುಸ್ತಕದಂತೆ ಇದೆ. ಆದರೆ, ಅವರ ವೈಯಕ್ತಿಕ ಜೀವನ ರಹಸ್ಯವಾಗಿದೆ. ಟಬು ಇನ್ನೂ ಮದುವೆ ಆಗಿಲ್ಲ. ಅವರು ಜೀವನದಲ್ಲಿ ಹಲವು ರಿಲೇಶನ್ಶಿಪ್ ಹೊಂದಿದ್ದರು. ಆದರೆ, ಯಾವುದೂ ಮದುವೆವರೆಗೆ ಹೋಗಿಲ್ಲ. ಅವರು ಏಕೆ ಮದುವೆ ಯಾಕೆ ಆಗಲಿಲ್ಲ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಸದಾ ಕಾಡುತ್ತಲೇ ಇದೆ.
ಮದುವೆಯಾಗದೇ ಇರುವುದರ ಹಿಂದಿನ ನಿಜವಾದ ಕಾರಣ ಏನು ಎಂಬುದನ್ನು ಟಬು ಕೆಲವೊಮ್ಮೆ ತಮಾಷೆಯಾಗಿ ಹೇಳಿದ್ದರು. ಗೆಳೆಯ ಅಜಯ್ ದೇವಗನ್ ಇದಕ್ಕೆ ಕಾರಣ ಎಂದಿದ್ದರು. ಟಬು ಸಾಜಿದ್ ನಾಡಿಯಾದ್ವಾಲಾ, ನಾಗಾರ್ಜುನ, ಸಂಜಯ್ ಕಪೂರ್ ಜೊತೆ ಡೇಟಿಂಗ್ ಮಾಡಿದ್ದರು. ಆದರೆ, ಯಾವ ಸಂಬಂಧವೂ ಮದುವೆವರೆಗೆ ಹೋಗಿಲ್ಲ.
ನಟ, ನಿರ್ಮಾಪಕ ಸಂಜಯ್ ಕಪೂರ್ ಮತ್ತು ಟಬು ಅವರ ಸಂಬಂಧ ಸ್ವಲ್ಪ ಸಮಯದವರೆಗೆ ಇತ್ತು. ಇವರು ಮದುವೆ ಆಗುತ್ತಾರೆ ಎಂದ ಹೇಳಲಾಯಿತು. ಆದರೆ ಹಾಗಾಗಲಿಲ್ಲ. ಇವರ ಸುತ್ತಾಟ ಸ್ವಲ್ಪ ಸಮಯಕ್ಕೆ ಕೊನೆ ಆಯಿತು. ಟಬು ಹಾಗೂ ನಿರ್ಮಾಪಕ, ನಿರ್ದೇಶಕ ಸಾಜಿದ್ ನಾಡಿಯಾದ್ವಾಲ ಪತ್ನಿ ದಿವ್ಯಾ ಭಾರತಿ ಆತ್ಮೀಯ ಸ್ನೇಹಿತರಾಗಿದ್ದರು. ದಿವ್ಯಾ ಸಾವಿನ ನಂತರ ಟಬು ಮತ್ತು ಸಾಜಿದ್ ಕ್ಲೋಸ್ ಆದರು. ಸಾಜಿದ್ ಟಬು ಜೊತೆಗಿದ್ದರೂ ಅವರಿಗೆ ದಿವ್ಯಾ ಭಾರತಿಯನ್ನು ಮರೆಯಲಾಗಲಿಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಟಬು ಜೊತೆ ಕಮಿಟ್ ಆಗಲು ಸಾಜಿದ್ಗೆ ಇಷ್ಟವಿರಲಿಲ್ಲ. ಈ ವಿಚಾರದಲ್ಲಿ ಟಬು ತುಂಬಾ ಡಿಸ್ಟರ್ಬ್ ಆಗಿದ್ದರು. ಆ ಬಳಿಕ ಇಬ್ಬರೂ ಬೇರೆ ಆದರು.
ನಂತರ ದಕ್ಷಿಣದ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಅವರಿಗೆ ಟಬು ಹತ್ತಿರವಾದರು. ಆಗಲೇ ನಾಗಾರ್ಜುನ ಅವರಿಗೆ ಮದುವೆ ಆಗಿತ್ತು. ಈ ಸಂಬಂಧ ಟಬುಗೆ ಹೆಚ್ಚು ನೋವು ತಂದಿತ್ತು. ಇಬ್ಬರೂ ತಮ್ಮ ಸಂಬಂಧವನ್ನು ಎಂದಿಗೂ ಖಚಿತಪಡಿಸಿಲ್ಲ.
ಹಲವು ವರ್ಷಗಳ ಕಾಲ ನಾಗಾರ್ಜುನ ಜೊತೆ ಟಬು ಡೇಟಿಂಗ್ ಮಾಡಿದರು ಎನ್ನಲಾಗಿದೆ. ಆದರೆ, ನಾಗಾರ್ಜುನ ಅವರು ಪತ್ನಿಯನ್ನು ಬಿಟ್ಟುಕೊಡಲು ರೆಡಿ ಇರಲಿಲ್ಲ. ಈ ಸಂಬಂಧದಲ್ಲಿ ಯಾವುದೇ ಭವಿಷ್ಯವಿಲ್ಲ ಎಂದು ಅರಿತ ಟಬು ಅವರು ನಾಗಾರ್ಜುನ ಅವರಿಂದ ದೂರ ಆದರು. ಕಾಂಪ್ಲಿಕೇಷನ್ ರಿಲೇಶನ್ಶಿಪ್ನಿಂದ ಅವರು ಮದುವೆ ವಿಚಾರ ಕೈಬಿಟ್ಟರು ಎನ್ನಲಾಗಿದೆ.
2017ರಲ್ಲಿ ನೀಡಿದ ಸಂದರ್ಶನದಲ್ಲಿ, ತಾವು ಮದುವೆಯಾಗದೆ ಇರುವುದಕ್ಕೆ ಅಜಯ್ ದೇವಗನ್ ಅವರನ್ನು ದೂಷಿಸಿದ್ದರು. ‘ಅಜಯ್ ನನ್ನ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದಾರೆ. ನನ್ನ ಜೊತೆ ಮಾತನಾಡಿದ ಹುಡುಗರಿಗೆ ಹೊಡೆಯುವುದಾಗಿ ಅವರು ಬೆದರಿಕೆ ಹಾಕುತ್ತಾರೆ’ ಎಂದು ನಕ್ಕಿದ್ದರು ಟಬು.
ಟಬು ತಾಯ್ನದ ಬಗ್ಗೆಯೂ ಮಾತನಾಡಿದ್ದರು. ‘ತಾಯ್ತನ ಬೇಡ ಎಂದು ಹೇಳಿದರೆ ಅದು ಮೂರ್ಖತನ ಆಗುತ್ತದೆ. ಕೆಲವೊಮ್ಮೆ ತಾಯಿಯಾಗಬೇಕು ಮತ್ತು ಮದುವೆಯಾಗಬೇಕು ಎಂಬ ಆಸೆ ಹುಟ್ಟಿಕೊಳ್ಳುತ್ತದೆ. ಆದರೆ ನನ್ನ ಸಂವೇದನಾಶೀಲ ಮತ್ತು ತರ್ಕಬದ್ಧ ಯೋಚನೆ ಈ ಆಸೆಯನ್ನು ಶಾಂತವಾಗಿಸುತ್ತದೆ. ಮದುವೆಯಿಲ್ಲದೆ ಮಗುವನ್ನು ಹೊಂದಲು ನನಗೆ ಯಾವುದೇ ಸಮಸ್ಯೆ ಇಲ್ಲ. ಇದರಲ್ಲಿ ತಪ್ಪೇನಿಲ್ಲ. ನಾನು ತಾಯಿಯಾಗಲು ಬಯಸಿದರೆ, ಯಾರೂ ನನ್ನನ್ನು ತಡೆಯಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ‘ನೀವು ಪದೇಪದೇ ಟಬು ಜತೆ ಸಿನಿಮಾ ಮಾಡೋದು ಯಾಕೆ?’: ನೇರ ಪ್ರಶ್ನೆಗೆ ಅಜಯ್ ದೇವಗನ್ ಉತ್ತರ
80ರ ದಶಕದಲ್ಲಿ ಟಬು ಚಿತ್ರರಂಗಕ್ಕೆ ಕಾಲಿಟ್ಟರು. 90ರ ದಶಕದಲ್ಲಿ ಅವರು ಬೇಡಿಕೆಯ ಹೀರೋಯಿನ್ ಆದರು. ಅಜಯ್ ದೇವಗನ್ ಜೊತೆ ಅವರಿಗೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಅಜಯ್ ದೇವಗನ್ ನಟಿಸಿದ ಹಲವು ಸಿನಿಮಾಗಳಲ್ಲಿ ಟಬು ಅಭಿನಯಿಸಿದ್ದಾರೆ. ಕಳೆದ ವರ್ಷ ರಿಲೀಸ್ ಆದ ‘ಭೂಲ್ ಭುಲಯ್ಯ 2’ ಚಿತ್ರದ ಮೂಲಕ ಅವರು ದೊಡ್ಡ ಗೆಲುವು ಕಂಡಿದ್ದಾರೆ. ಎರಡು ಹಿಂದಿ ಸಿನಿಮಾಗಳಲ್ಲಿ ಟಬು ಬ್ಯುಸಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:08 pm, Sat, 4 November 23