AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tiger 3: ಸಲ್ಮಾನ್​ ಖಾನ್​ ನಟನೆಯ ‘ಟೈಗರ್​ 3’ ಚಿತ್ರಕ್ಕೆ ‘ಯು/ಎ’ ಪ್ರಮಾಣಪತ್ರ; ಸಿನಿಮಾ ಅವಧಿ ಬಗ್ಗೆ ಇಲ್ಲಿದೆ ಮಾಹಿತಿ

Salman Khan: ‘ಟೈಗರ್​ 3’ ಸಿನಿಮಾದ ಯಾವುದೇ ದೃಶ್ಯಕ್ಕೆ ಸೆನ್ಸಾರ್​ ಮಂಡಳಿ ಸದಸ್ಯರು ಕತ್ತರಿ ಹಾಕಿಲ್ಲ. ಬದಲಿಗೆ ಸಂಭಾಷಣೆಗಳಲ್ಲಿ ಕೆಲವೇ ಕೆಲವು ಪದಗಳನ್ನು ಬದಲಾಯಿಸುವಂತೆ ಸೂಚಿಸಲಾಗಿದೆ. ಅದನ್ನು ಹೊರತು ಪಡಿಸಿದರೆ ಹೆಚ್ಚೇನೂ ಬದಲಾವಣೆ ಇಲ್ಲ. ಯು/ಎ ಪ್ರಮಾಣ ಪತ್ರ ಸಿಕ್ಕಿರುವುದರಿಂದ ಚಿತ್ರಕ್ಕೆ ಅನುಕೂಲ ಆಗಲಿದೆ.

Tiger 3: ಸಲ್ಮಾನ್​ ಖಾನ್​ ನಟನೆಯ ‘ಟೈಗರ್​ 3’ ಚಿತ್ರಕ್ಕೆ ‘ಯು/ಎ’ ಪ್ರಮಾಣಪತ್ರ; ಸಿನಿಮಾ ಅವಧಿ ಬಗ್ಗೆ ಇಲ್ಲಿದೆ ಮಾಹಿತಿ
ಕತ್ರಿನಾ ಕೈಫ್​, ಸಲ್ಮಾನ್​ ಖಾನ್​
ಮದನ್​ ಕುಮಾರ್​
|

Updated on: Nov 03, 2023 | 12:10 PM

Share

ನಟ ಸಲ್ಮಾನ್​ ಖಾನ್​ (Salman Khan) ಅವರು ‘ಟೈಗರ್​ 3’ ಸಿನಿಮಾ ಮೂಲಕ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರ ಜೊತೆ ಕತ್ರಿನಾ ಕೈಫ್​ (Katrina Kaif), ಇಮ್ರಾನ್​ ಹಷ್ಮಿ ಮುಂತಾದವರು ನಟಿಸಿದ್ದಾರೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಈ ಚಿತ್ರ ಸ್ಥಾನ ಪಡೆದುಕೊಂಡಿದೆ. ಭರ್ಜರಿ ಆ್ಯಕ್ಷನ್​ ದೃಶ್ಯಗಳು ಈ ಸಿನಿಮಾದಲ್ಲಿ ಇರಲಿವೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್​ ಗಮನ ಸೆಳೆದಿದೆ. ನವೆಂಬರ್​ 12ರಂದು ‘ಟೈಗರ್​ 3’ (Tiger 3) ರಿಲೀಸ್​ ಆಗಲಿದೆ. ಸೆನ್ಸಾರ್​ ಮಂಡಳಿಯಿಂದ ಈ ಚಿತ್ರಕ್ಕೆ ‘ಯು/ಎ’ ಪ್ರಮಾಣ ಪತ್ರ ಸಿಕ್ಕಿದೆ. ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿರುವ ಈ ಸಿನಿಮಾದ ಅವಧಿ 2 ಗಂಟೆ 33 ನಿಮಿಷ ಇದೆ ಎಂಬ ಮಾಹಿತಿ ಕೂಡ ಈಗ ಸಿಕ್ಕಿದೆ.

ಈ ಬಗ್ಗೆ ‘ಬಾಲಿವುಡ್​ ಹಂಗಾಮಾ’ ವರದಿ ಮಾಡಿದೆ. ಈ ವರದಿ ಪ್ರಕಾರ ‘ಟೈಗರ್​ 3’ ಸಿನಿಮಾದ ಯಾವುದೇ ದೃಶ್ಯಕ್ಕೆ ಸೆನ್ಸಾರ್​ ಮಂಡಳಿ ಸದಸ್ಯರು ಕತ್ತರಿ ಹಾಕಿಲ್ಲ. ಬದಲಿಗೆ ಸಂಭಾಷಣೆಗಳಲ್ಲಿ ಕೆಲವೇ ಕೆಲವು ಪದಗಳನ್ನು ಬದಲಾಯಿಸುವಂತೆ ಸೂಚಿಸಲಾಗಿದೆ. ಅದನ್ನು ಹೊರತುಪಡಿಸಿದರೆ ಹೆಚ್ಚೇನೂ ಬದಲಾವಣೆ ಇಲ್ಲ. ಯು/ಎ ಪ್ರಮಾಣ ಪತ್ರ ಸಿಕ್ಕಿರುವುದರಿಂದ ಫ್ಯಾಮಿಲಿ ಪ್ರೇಕ್ಷಕರು ತಮ್ಮ ಮಕ್ಕಳ ಜೊತೆ ಬಂದು ಸಿನಿಮಾ ನೋಡಬಹುದು. ಇದರಿಂದ ಚಿತ್ರಕ್ಕೆ ಅನುಕೂಲ ಆಗಲಿದೆ.

ಇದನ್ನೂ ಓದಿ: ಕಲರ್​ಫುಲ್​ ಬಟ್ಟೆ ಧರಿಸಿ ‘ಟೈಗರ್​ 3’ ಸಿನಿಮಾದ ರಂಗು ಹೆಚ್ಚಿಸಿದ ಕತ್ರಿನಾ ಕೈಫ್​

ಬಾಲಿವುಡ್​ ಸಿನಿಮಾಗಳು 100 ಕೋಟಿ ರೂಪಾಯಿ ಗಳಿಸಿದರೆ ಸೂಪರ್​ ಹಿಟ್​ ಎಂದು ಹೇಳುವ ಕಾಲ ಮೊದಲಿತ್ತು. ಆದರೆ ಸ್ಟಾರ್​ ನಟರ ಸಿನಿಮಾಗಳಿಗೆ 100 ಕೋಟಿ ರೂಪಾಯಿ ಬಾಕ್ಸ್​ ಆಫೀಸ್​ ಕಲೆಕ್ಷನ್​ ಎಂಬುದು ಈಗ ತುಂಬ ಕಡಿಮೆ. ‘ಕೆಜಿಎಫ್​ 2’, ‘ಆರ್​ಆರ್​ಆರ್​’, ‘ಜವಾನ್​’, ‘ಪಠಾಣ್​’ ಮುಂತಾದ ಸಿನಿಮಾಗಳು ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಸಾವಿರ ಕೋಟಿ ರೂಪಾಯಿ ಗಳಿಸಿದ ಮೇಲೆ ದೊಡ್ಡ ಮೈಲಿಗಲ್ಲು ನಿರ್ಮಾಣ ಆಗಿದೆ. ಈಗ ‘ಟೈಗರ್​ 3’ ಸಿನಿಮಾ ಕೂಡ ಈ ಸಾಧನೆ ಮಾಡುತ್ತಾ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ‘ಟೈಗರ್​ 3’ ಸಿನಿಮಾದಲ್ಲಿ ಬೆಂಕಿಯ ರೀತಿ ಇದೆ ನಟಿ ಕತ್ರಿನಾ ಕೈಫ್​ ಪಾತ್ರ

‘ಟೈಗರ್​ 3’ ಚಿತ್ರಕ್ಕೆ ಯಶ್​ ರಾಜ್​ ಫಿಲ್ಮ್ಸ್​ ಸಂಸ್ಥೆ ಬಂಡವಾಳ ಹೂಡಿದೆ. ಈಗಾಗಲೇ ಬಂದ ‘ಏಕ್​ ಥಾ ಟೈಗರ್​’, ‘ಟೈಗರ್​ ಜಿಂದಾ ಹೈ’ ಸಿನಿಮಾಗಳು ಸೂಪರ್​ ಹಿಟ್​ ಆಗಿವೆ. ಅದರ ಮುಂದುವರಿದ ಭಾಗವಾಗಿ ‘ಟೈಗರ್​ 3’ ಮೂಡಿಬಂದಿದೆ. ಇದರಲ್ಲಿ ಶಾರುಖ್​ ಖಾನ್​ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಮನೀಶ್​ ಶರ್ಮಾ ಅವರು ನಿರ್ದೇಶನ ಮಾಡಿದ್ದಾರೆ. ಸಾಮಾನ್ಯವಾಗಿ ಸಿನಿಮಾಗಳು ಗುರುವಾರ ಅಥವಾ ಶುಕ್ರವಾರ ಬಿಡುಗಡೆ ಆಗುತ್ತವೆ. ಆದರೆ ‘ಟೈಗರ್​ 3’ ಸಿನಿಮಾ ಭಾನುವಾರ (ನವೆಂಬರ್​ 12) ಬಿಡುಗಡೆ ಆಗಲಿದೆ. ದೀಪಾವಳಿಯ ರಜಾ ದಿನಗಳನ್ನು ಎನ್​ಕ್ಯಾಶ್​ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಭಾನುವಾರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ