ಏನೇ ಆದರೂ ‘ಕೆಜಿಎಫ್ 2’ ಮಾಡಿದ್ದ ದಾಖಲೆ ಮುರಿಯಲಿಲ್ಲ ‘ಜವಾನ್’ ಸಿನಿಮಾ

ಶಾರುಖ್ ಖಾನ್ ಅವರು ‘ಪಠಾಣ್​’ ಸಿನಿಮಾ ಮೂಲಕ ಗೆಲುವು ಕಂಡರು. ಇದಾದ ಬಳಿಕ ರಿಲೀಸ್ ಆಗಿದ್ದು ‘ಜವಾನ್’ ಸಿನಿಮಾ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿದೆ. 43ನೇ ದಿನ ಭಾರತದ ಬಾಕ್ಸ್ ಆಫೀಸ್​ನಲ್ಲಿ ಈ ಚಿತ್ರ 45 ಲಕ್ಷ ರೂಪಾಯಿ ಗಳಿಕೆ ಮಾಡಿದೆ.

ಏನೇ ಆದರೂ ‘ಕೆಜಿಎಫ್ 2’ ಮಾಡಿದ್ದ ದಾಖಲೆ ಮುರಿಯಲಿಲ್ಲ ‘ಜವಾನ್’ ಸಿನಿಮಾ
ಜವಾನ್-ಯಶ್

Updated on: Oct 20, 2023 | 2:36 PM

ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ (Jawan Movie) ರಿಲೀಸ್ ಆಗಿ ಒಂದೂವರೆ ತಿಂಗಳು ಕಳೆದಿದೆ. ಈ ಸಿನಿಮಾ ಇನ್ನೂ ಥೀಯೇಟರ್​ಗಳಲ್ಲಿ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರದ ಗಳಿಕೆ ತಗ್ಗಿದೆಯಾದರೂ ತಕ್ಕ ಮಟ್ಟಿಗೆ ಸಿನಿಮಾ ಕಲೆಕ್ಷನ್ ಮಾಡುತ್ತಿದೆ. ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ‘ಕೆಜಿಎಫ್ 2’ ದಾಖಲೆಯನ್ನು ಮುರಿಯಲು ‘ಜವಾನ್’ ಸಿನಿಮಾ ಬಳಿ ಸಾಧ್ಯವಾಗಿಲ್ಲ. ಇದು ಅಸಾಧ್ಯ ಎಂಬುದು ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ. ಈ ವಿಚಾರ ಕೇಳಿ ಯಶ್ ಫ್ಯಾನ್ಸ್​ ನಿಟ್ಟುಸಿರು ಬಿಟ್ಟಿದ್ದಾರೆ.

ಶಾರುಖ್ ಖಾನ್ ಅವರು ‘ಪಠಾಣ್​’ ಸಿನಿಮಾ ಮೂಲಕ ಗೆಲುವು ಕಂಡರು. ಇದಾದ ಬಳಿಕ ರಿಲೀಸ್ ಆಗಿದ್ದು ‘ಜವಾನ್’ ಸಿನಿಮಾ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿದೆ. 43ನೇ ದಿನ ಭಾರತದ ಬಾಕ್ಸ್ ಆಫೀಸ್​ನಲ್ಲಿ ಈ ಚಿತ್ರ 45 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಸಿನಿಮಾದ ಗಳಿಕೆ 638.42 ಕೋಟಿ ರೂಪಾಯಿ ಆಗಿದೆ. ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಚಿತ್ರದ ಗಳಿಕೆ 1138 ಕೋಟಿ ರೂಪಾಯಿ ಆಗಿದೆ. ಕೆಜಿಎಫ್ ಗಳಿಕೆ 1200 ಕೋಟಿ ರೂಪಾಯಿ ದಾಟಿದೆ. ಇದನ್ನು ಹಿಂದಿಕ್ಕಲು ‘ಜವಾನ್’ ಬಳಿ ಸಾಧ್ಯವಿಲ್ಲ.

‘ಜವಾನ್’ ಸಿನಿಮಾಗೆ ದಕ್ಷಿಣ ಭಾರತದ ನಿರ್ದೇಶಕ ಅಟ್ಲಿ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರ ದಕ್ಷಿಣ ಭಾರತದ ಶೈಲಿಯಲ್ಲಿ ಮೂಡಿ ಬಂದಿದೆ. ದೇಶದಲ್ಲಿರುವ ಸಮಸ್ಯೆಗಳ ಬಗ್ಗೆ ಈ ಸಿನಿಮಾ ಗಮನ ಹರಿಸಿದೆ. ಈ ಕಾರಣಕ್ಕೂ ಜನರಿಗೆ ಸಿನಿಮಾ ಇಷ್ಟವಾಗಿದೆ.

ಇದನ್ನೂ ಓದಿ: ಥಿಯೇಟರ್​ಗೆ Y+ ಭದ್ರತೆಯೊಂದಿಗೆ ಎಂಟ್ರಿಕೊಟ್ಟ ಶಾರುಖ್ ಖಾನ್; ಇಲ್ಲಿದೆ ವಿಡಿಯೋ

ಶಾರುಖ್ ಖಾನ್ ಅವರು ಸದ್ಯ ‘ಡಂಕಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ರಾಜ್​ಕುಮಾರ್ ಹಿರಾನಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆ ಇದೆ. ಈ ಸಿನಿಮಾ ಡಿಸೆಂಬರ್ 22ರಂದು ರಿಲೀಸ್ ಆಗಲಿದೆ. ಮೂಲಗಳ ಪ್ರಕಾರ ಸಿನಿಮಾ ಬಿಡುಗಡೆ ದಿನಾಂಕ ವಿಳಂಬ ಆಗಲಿದೆ ಎಂದು ಕೂಡ ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:36 pm, Fri, 20 October 23

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us