‘ಜವಾನ್’ ಸಿನಿಮಾಗೆ (Jawan Movie) ಭರ್ಜರಿ ಓಪನಿಂಗ್ ಸಿಗುವ ಸೂಚನೆ ಸಿಕ್ಕಿದೆ. ಶಾರುಖ್ ಖಾನ್ ವೃತ್ತಿ ಜೀವನದಲ್ಲಿ ಈ ಚಿತ್ರ ಮತ್ತೊಂದು ದಾಖಲೆ ಸೃಷ್ಟಿ ಮಾಡುವ ಸೂಚನೆ ನೀಡಿದೆ. ಬೆಂಗಳೂರು ಒಂದರಲ್ಲೇ ಈ ಚಿತ್ರ 900+ ಶೋ ಪಡೆದುಕೊಂಡಿದೆ. ಸಿನಿಮಾಗೆ ಪಾಸಿಟಿವ್ ವಿಮರ್ಶೆ ಸಿಕ್ಕರೆ ಸಿನಿಮಾ ಭರ್ಜರಿ ಗಳಿಕೆ ಮಾಡೋದು ಪಕ್ಕಾ ಎನ್ನಲಾಗುತ್ತಿದೆ. ಮೊದಲ ದಿನ ಈ ಚಿತ್ರ ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
‘ಜವಾನ್’ ಸಿನಿಮಾ ಬಗ್ಗೆ ಭರ್ಜರಿ ನಿರೀಕ್ಷೆ ಸೃಷ್ಟಿ ಆಗಲು ಹಲವು ಕಾರಣ ಇದೆ. ತಮಿಳು ನಿರ್ದೇಶಕ ಅಟ್ಲಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಬಾಲಿವುಡ್ ನಟ ಶಾರುಖ್ ಖಾನ್ ಅವರ ಸ್ಟಾರ್ಡಂ ಚಿತ್ರಕ್ಕೆ ಬೇಡಿಕೆ ಹೆಚ್ಚಲು ಮುಖ್ಯ ಕಾರಣ. ಶಾರುಖ್ ಖಾನ್ಗೆ ಕರ್ನಾಟಕದಲ್ಲೂ ದೊಡ್ಡ ಅಭಿಮಾನಿ ವರ್ಗ ಇದೆ. ಹೀಗಾಗಿ ಈ ಚಿತ್ರಕ್ಕೆ ಭರ್ಜರಿ ಶೋ ಸಿಕ್ಕಿದೆ.
‘ಜವಾನ್’ ಸಿನಿಮಾ ಹಿಂದಿ ವರ್ಷನ್ಗೆ ಬೆಂಗಳೂರಿನಲ್ಲಿ ಸರಿ ಸುಮಾರು 750 ಶೋಗಳು ಸಿಕ್ಕಿವೆ! ತೆಲುಗಿನಲ್ಲಿ 41 ಶೋಗಳು ಹಾಗೂ ತಮಿಳು ವರ್ಷನ್ಗೆ 100ಕ್ಕೂ ಅಧಿಕ ಶೋಗಳು ಸಿಕ್ಕಿವೆ. ಮುಂಜಾನೆ 6:30ರಿಂದಲೇ ಸಿನಿಮಾ ಪ್ರದರ್ಶನ ಆರಂಭಗೊಂಡಿದೆ. ಮುಂಜಾನೆ ಶೋಗಳ ಟಿಕೆಟ್ಗಳು ಸೋಲ್ಡ್ಔಟ್ ಆಗಿದೆ.
‘ಜವಾನ್’ ಸಿನಿಮಾ ಮೊದಲ ದಿನ ಎಷ್ಟು ಗಳಿಕೆ ಮಾಡಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ. ಹಿಂದಿ ವರ್ಷನ್ನಿಂದಲೇ ಈ ಚಿತ್ರ 60-70 ಕೋಟಿ ರೂಪಾಯಿ ಗಳಿಕೆ ಆಗಬಹುದು ಎಂದು ಊಹಿಸಲಾಗಿದೆ. ಅಟ್ಲಿ ನಿರ್ದೇಶನ ಇರುವುದರಿಂದ ತಮಿಳುನಾಡು ಭಾಗದಲ್ಲಿ ಚಿತ್ರ ಭರ್ಜರಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ತಮಿಳು, ತೆಲುಗು ಅವತರಣಿಕೆಯಿಂದಲೂ ಸಿನಿಮಾ ಒಳ್ಳೆಯ ರೀತಿಯಲ್ಲಿ ಕಮಾಯಿ ಮಾಡುವ ಸಾಧ್ಯತೆ ಇದೆ. ಹೀಗಾಗಿ, ಚಿತ್ರದ ಒಟ್ಟಾರೆ ಗಳಿಕೆ ಮೊದಲ ದಿನ 100 ಕೋಟಿ ರೂಪಾಯಿ ದಾಟುವ ನಿರೀಕ್ಷೆ ಇದೆ.
ಇದನ್ನೂ ಓದಿ: ಎಷ್ಟಾಗಬಹುದು ‘ಜವಾನ್’ ಮೊದಲ ದಿನದ ಕಲೆಕ್ಷನ್? ಬಿಡುಗಡೆಗೂ ಮೊದಲೇ ಲೆಕ್ಕಾಚಾರ ಶುರು
ಅಟ್ಲಿ ನಿರ್ದೇಶನದ ‘ಜವಾನ್’ ಚಿತ್ರದಲ್ಲಿ ಶಾರುಖ್ ಖಾನ್, ನಯನತಾರಾ, ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ ಮೊದಲಾದವರು ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ