ನಟಿ ಹಾಗೂ ರಾಜಕಾರಣಿ ಜಯಾ ಬಚ್ಚನ್ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಅವರು ಒಂದಲ್ಲಾ ಒಂದು ವಿಚಾರವನ್ನು ಮಾತನಾಡಿ ಸುದ್ದಿ ಆಗುತ್ತಾರೆ. ಈಗ ಜಯಾ ಬಚ್ಚನ್ ಅವರು ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರವನ್ನು ಅವರು ಟೀಕೆ ಮಾಡಿದ್ದಾರೆ. ಇದನ್ನು ಫ್ಲಾಪ್ ಸಿನಿಮಾ ಎಂದು ಹೀಗಳೆದಿದ್ದಾರೆ. ಇದು ಸಾಮಾಜಿಕವಾಗಿ ಜಾಗೃತಿ ಮೂಡಿಸಲು ಮಾಡಿದ ಚಿತ್ರವಾಗಿತ್ತು. ಇದನ್ನು ಹೀಗಳಿದಿದ್ದಕ್ಕೆ ಅವರನ್ನು ಟೀಕಿಸಲಾಗಿದೆ.
ಇಂಡಿಯಾ ಟಿವಿ ಕಾನ್ಕ್ಲೇವ್ನಲ್ಲಿ ಜಯಾ ಮಾತನಾಡಿದ್ದಾರೆ. ಅವರು ಕೆಲವು ಸಿನಿಮಾಗಳನ್ನು ನೋಡುವುದಿಲ್ಲ ಎಂದಿದ್ದಾರೆ. ಅದರಲ್ಲೂ ಟೈಟಲ್ ನೋಡಿಕೊಂಡು ತಾವು ಸಿನಿಮಾ ವೀಕ್ಷಿಸುವುದಾಗಿ ಹೇಳಿದ್ದಾರೆ. ಈ ವೇಳೆ ಅವರು ‘ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಚಿತ್ರದ ಬಗ್ಗೆ ಮಾತನಾಡಿ ಟೀಕೆ ಮಾಡಿದ್ದಾರೆ.
‘ಆ ಸಿನಿಮಾದ ಟೈಟಲ್ ನೋಡಿ. ಈ ರೀತಿ ಟೈಟಲ್ ಇರೋ ಸಿನಿಮಾನ ನಾನು ಎಂದಿಗೂ ವೀಕ್ಷಿಸುವುದಿಲ್ಲ. ಇದು ನಿಜಕ್ಕೂ ಹೆಸರೇ’ ಎಂದು ಜಯಾ ಬಚ್ಚನ್ ಅವರು ಪ್ತಶ್ನೆ ಮಾಡಿದ್ದಾರೆ. ‘ಈ ರೀತಿ ಟೈಟಲ್ ಇರೋ ಸಿನಿಮಾನ ನೀವು ವೀಕ್ಷಿಸುತ್ತೀರಾ’ ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಹೌದು ಎಂಬ ಉತ್ತರವನ್ನು ಕೆಲವರು ನೀಡಿದರು.
ಅಲ್ಲಿಗೆ ಜಯಾ ಬಚ್ಚನ್ ಅವರು ಕೂರಲೇ ಇಲ್ಲ. ‘ಇಷ್ಟು ಜನರಲ್ಲಿ ಕೆಲವೇ ಕೆಲವರು ಈ ಚಿತ್ರವನ್ನು ನೋಡಿದ್ದಾರೆ. ಇದು ಫ್ಲಾಪ್ ಸಿನಿಮಾ’ ಎಂದು ಅವರು ಹೇಳಿದ್ದಾರೆ. ಅವರ ಹೇಳಿಕೆ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ.
ಇದನ್ನೂ ಓದಿ:ಮುಂಬೈನಲ್ಲಿರೋ ಮನೆ ಮಾರಿ ಡಬಲ್ ದುಡ್ಡು ಮಾಡಿದ ಅಕ್ಷಯ್ ಕುಮಾರ್
2017ರಲ್ಲಿ ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಸಿನಿಮಾರಿಲೀಸ್ ಆಯಿತು. ಕೇಶವ್ (ಅಕ್ಷಯ್ ಕುಮಾರ್) ಜಯಾ ಜೊತೆ (ಭೂಮಿ ಪಡ್ನೇಕರ್) ಪ್ರೀತಿ ಬೆಳೆದು ಮದುವೆ ಆಗುತ್ತಾರೆ. ಮನೆಯಲ್ಲಿ ಟಾಯ್ಲೆಟ್ ಇಲ್ಲ ಎಂದು ಜಯಾ ದೂರುತ್ತಾಳೆ. ಆಗ ಕೇಶವ್ ಟಾಯ್ಲೆಟ್ ನಿರ್ಮಾಣಕ್ಕೆ ಮುಂದಾಗುತ್ತಾರೆ. ಆದರೆ, ಅದು ಸುಲಭ ಆಗಿರುವುದಿಲ್ಲ. ಇದನ್ನು ಕಟ್ಟಲು ಅನೇಕರು ವಿರೋಧಿಸುತ್ತಾರೆ.
ಅಕ್ಷಯ್ ಕುಮಾರ್ ನಟನೆಯ ‘ಸ್ಕೈ ಫೋರ್ಸ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ‘ವೀರ್ ಪಾರಿಯಾ’ ಅವರು ಇದರಲ್ಲಿ ನಟಿಸಿದ್ದಾರೆ. ದಿನೇಶ್ ವಿಜನ್, ಸಾರಾ ಅಲಿ ಖಾನ್ ಮೊದಲಾದವರು ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ